
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಮೇ. 20 ರಾಷ್ಟ್ರೀಯ ಯೋಗ ಶಿಕ್ಷಣ, ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇಮಾಭಿವೃದ್ಧಿ ಸಂಘ (ರಿ.) ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ, ಚಿತ್ರದುರ್ಗ ಇವರ ಸಹಯೋಗದಲ್ಲಿ ಉಚಿತ ಯೋಗ ಪ್ರಾಣಾಯಾಮ ನಿರಂತರ ತರಗತಿಗಳು ಶ್ರೀಮುರುಘಾಮಠದ ಬಸವೇಶ್ವರ ಸಭಾಂಗಣದಲ್ಲಿ ನಡೆಯಲಿದೆ ಎಂದು ರಾ.ಯೋ.ಶಿ.ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಪ್ರಸನ್ನಕುಮಾರ್ ಬಿ.ಆರ್ ತಿಳಿಸಿದ್ದಾರೆ.
ಮೇ. 22 ರ ಗುರುವಾರ ಬೆಳಗ್ಗೆ 5-45 ರಿಂದ 7.00 ಗಂಟೆಯವರೆಗೆ ಉಚಿತ ಯೋಗ ಪ್ರಾಣಯಾಮ ತರಬೇತಿ
ಪ್ರಾರಂಭವಾಗಲಿದ್ದು, ತರಗತಿಗಳನ್ನು ರಾ.ಯೋ.ಶಿ.ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇಮಾಭಿವೃದ್ಧಿ ಸಂಘದ ಯೋಗ ಶಿಕ್ಷಕರು,
ಉಪಾಧ್ಯಕ್ಷರಾದ ಮಂಜುನಾಥ. ಎಂ.ಆರ್. ಹಾಗೂ ಯೋಗ ಶಿಕ್ಷಕರು, ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ್
ನಡೆಸಿಕೊಡಲಿದ್ದಾರೆ.
ಈ ವಿಶೇಷ ಯೋಗ ತರಗತಿಯಲ್ಲಿ ದೇಹದ ತೂಕ ಹೆಚ್ಚಿರುವ ವ್ಯಕ್ತಿಗಳು ತೂಕ ಇಳಿಸಿಕೊಳ್ಳಬಹುದು. ತೂಕ ಕಡಿಮೆ ಇರುವ
ವ್ಯಕ್ತಿಗಳು ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಇಂದಿನ ಯಾಂತ್ರಿಕ ಜೀವನದಲ್ಲಿ ತಮ್ಮ ಆರೋಗ್ಯವನ್ನು
ಕಾಪಾಡಿಕೊಳ್ಳಲು 10 ರಿಂದ 80 ವರ್ಷಗಳವರೆಗಿನ ವಯಸ್ಸಿನವರು ಸುಲಭವಾಗಿ ಮಾಡಬಹುದಾದಂತಹ ವಿಶೇಷ
ಅಭ್ಯಾಸಗಳನ್ನು ಕಲಿಸಿಕೊಡಲಾಗುವುದು.ಮಾನಸಿಕ ಒತ್ತಡ, ಬಿ.ಪಿ. ಸಕ್ಕರೆ ಕಾಯಿಲೆ, ಹೃದಯ ಸಂಬಂದಿತ ಕಾಯಿಲೆ, ಅಸ್ತಮಾ,
ಬೆನ್ನುನೋವು, ಮಂಡಿನೋವು ಮೊದಲಾದ ಕಾಯಿಲೆಗಳು ಬರದಂತೆ ತಡೆಗಟ್ಟಲು ಯೋಗ ಅಭ್ಯಾಸ ಅನೂಕೂಲವಾಗಲಿದೆ.
ಯೋಗ ತರಗತಿಯ ಕಾರ್ಯಕ್ರಮ ಉದ್ಘಾಟನೆಯನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ,
ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ನಡೆಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ
ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ, ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಅಧ್ಯಕ್ಷರಾದ ಶಿವಯೋಗಿ
ಸಿ.ಕಳಸದ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ|| ಚಂದ್ರಕಾಂತ್ ನಾಗಸಮುದ್ರ, ಆಯುಷ್ ವೈದ್ಯಾಧಿಕಾರಿಗಳಾದ
ಡಾ|| ಟಿ.ಶಿವಕುಮಾರ್, ಯೋಗ ಗುರುಗಳಾದ ಎಲ್.ಎಸ್. ಚಿನ್ಮಯಾನಂದ, ಮುಖ್ಯೋಪಾಧ್ಯಾಯರಾದ ಮಹೇಶ್.ಕೆ.ಎನ್.
ಅಮೃತ ಆಯುರ್ವೇದ ವೈದ್ಯಕೀಯ ಕಾಲೇಜಿನ ತಿಪ್ಪೇಸ್ವಾಮಿ.ಎಂ, ಭಾಗವಹಿಸಲಿದ್ದಾರೆ. ಈ ಉಚಿತ ವಿಶೇಷ ಯೋಗ
ತರಗತಿಯ ಉಪಯೋಗವನ್ನು ಚಿತ್ರದುರ್ಗದ ಸುತ್ತ ಮುತ್ತಲಿನ ಸಮಸ್ತ ನಾಗರೀಕರು ಪ್ರಯೋಜನ ಪಡೆದುಕೊಳ್ಳಬೇಕಾಗಿ
ವಿನಂತಿಸಲಾಗಿದೆ.
ಈ ಯೋಗ ಶಿಬಿರಕ್ಕೆ ಹೆಸರನ್ನು ನೊಂದಾಯಿಸಲು 8073271756, 9845571955, 8746022522, 9448664932, 9448295901 ಈ ದೂರವಾಣಿಗಳನ್ನು ಸಂಪರ್ಕ ಮಾಡಬಹುದಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1