ವಾಟ್ಸ್ಆ್ಯಪ್ ಕಮ್ಯೂನಿಟಿ ಅಪ್ಗ್ರೇಡ್ ಬಗ್ಗೆ ಮಾರ್ಕ್ ಜುಕರ್‌ಬರ್ಗ್ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ನವದೆಹಲಿ: ದೇಶ ಮಾತ್ರವಲ್ಲದೇ ಜಾಗತಿಕವಾಗಿ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ವಾಟ್ಸ್ಆ್ಯಪ್ ಸದಾ ಒಂದಲ್ಲ ಒಂದು ಹೊಸ ಫೀಚರ್ಗಳನ್ನು ಒದಗಿಸುತ್ತಲೇ ಇರುತ್ತದೆ. ಇದೀಗ ಮೆಟಾ ಪ್ಲಾಟ್ಫಾರ್ಮ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಬುಧವಾರ ವಾಟ್ಸ್ಆ್ಯಪ್ ಕಮ್ಯೂನಿಟಿ ನವೀಕರಣದ ಬಗ್ಗೆ ಮತ್ತೊಂದು ಘೋಷಣೆ ಮಾಡಿದ್ದಾರೆ. ಈ ಅಪ್ಗ್ರೇಡ್ ಗುಂಪು ಸಂವಹನ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಈ ಹೊಸ ವೈಶಿಷ್ಟ್ಯದಲ್ಲಿ WhatsApp ಕಮ್ಯೂನಿಟಿ ಗ್ರೂಪ್ಗಳಲ್ಲಿ ಈವೆಂಟ್‌ಗಳನ್ನು ರಚಿಸಬಹುದಾಗಿದೆ ಮತ್ತು ಕಮ್ಯೂನಿಟಿ ಸದಸ್ಯರು ಗ್ರೂಪ್ ಅಡ್ಮಿನ್ ಅನೌನ್ಸ್ಮೆಂಟ್ಗಳಿಗೆ ಪ್ರತಿಕ್ರಿಯೆ ನೀಡಬಹುದಾಗಿದೆ.
ಮಾರ್ಕ್ ಜುಕರ್‌ಬರ್ಗ್ ತಮ್ಮ ವಾಟ್ಸ್ಆ್ಯಪ್ ಚಾನೆಲ್‌ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ, “WhatsApp ಕಮ್ಯೂನಿಟಿಯಲ್ಲಿದ್ದರೆ ನೀವು ಈವೆಂಟ್ಸ್ಗಳನ್ನು ರಚಿಸಬಹುದಾಗಿದೆ ಹಾಗೂ ನಿರ್ವಾಹಕ (Admin) ಪ್ರಕಟಣೆಗಳಿಗೆ ಪ್ರತಿಕ್ರಿಯಿಸಬಹುದಾಗಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಗ್ರೂಪ್ಗಳು ಈವೆಂಟ್‌ಗಳನ್ನು ರಚಿಸಲು ಸುಲಭವಾಗಲಿದೆ ಎಂದು ತಿಳಿಸಿದ್ದಾರೆ.
ಈ ವೈಶಿಷ್ಟ್ಯ ಜಾರಿಗೆ ಬಂದರೆ, ಕಮ್ಯೂನಿಟಿಗಳ ಸದಸ್ಯರನ್ನು ಸುಲಭವಾಗಿ ಸಂಪರ್ಕಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ. ಜತೆಗೆ WhatsApp ಗ್ರೂಪ್ಗಳಲ್ಲಿ ಈವೆಂಟ್‌ಗಳನ್ನು ರಚಿಸುವ ಮೂಲಕ ಅಡ್ಮಿನ್ ಮತ್ತು ಗ್ರೂಪ್ನ ಸದಸ್ಯರ ನಡುವಿನ ಸಂಪರ್ಕ ಮತ್ತುಷ್ಟು ಗಟ್ಟಿಗೊಳ್ಳಲಿದೆ ಎಂದು ಸಂಸ್ಥೆ ತಿಳಿಸಿದೆ.
ಇದರಿಂದ ಕಮ್ಯೂನಿಟಿ ಸದಸ್ಯರೊಂದಿಗೆ ವರ್ಚ್ಯುಯಲ್ ಮೀಟಿಂಗ್ನಂತಹ ಈವೆಂಟ್‌ಗಳನ್ನು ನಡೆಸಬಹುದಾಗಿದೆ. ಅಡ್ಮಿನ್ ಮಾತ್ರವಲ್ಲದೇ ಕಮ್ಯೂನಿಟಿ ಸದಸ್ಯರು ಈವೇಂಟ್ಗಳನ್ನು ಆಯೋಜಿಸಬಹುದಾಗಿದೆ. ಈವೆಂಟ್ ಸಮೀಪಿಸುತ್ತಿದ್ದಂತೆ ಇದರಲ್ಲಿ ಭಾಗಿಯಾಗಲು ಇಚ್ಚಿಸುವ ಸದಸ್ಯರು ಅಧಿಸೂಚನೆಗಳನ್ನು ಸ್ವೀಕರಿಸುತ್ತಾರೆ. ಬಳಿಕ ಈವೆಂಟ್ನಲ್ಲಿ ಭಾಗಿಯಾಗಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ.
Source : https://www.etvbharat.com/kn/!technology/whatsapp-community-upgrades-kas24050200586
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsAppGroup:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1