ಪಿಂಚಣಿಯಿಂದ ಮದುವೆ ಭತ್ಯೆಯವರೆಗೆ—ಸೌಲಭ್ಯ ಹೆಚ್ಚಿಸುವಂತೆ ಕಟ್ಟಡ ಕಾರ್ಮಿಕರ ಗಟ್ಟಿ ಒತ್ತಾಯ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಡಿ. 09

ಸೆಸ್ ವಸೂಲಿ ಪ್ರಾಧಿಕಾರ ರಚನೆ ಮಾಡಬೇಕು. ಈ ಹಿಂದೆ ರಾಜ್ಯದಲ್ಲಿ ನಿರ್ಮಾಣ ಮಾಡಿರುವ ಎಲ್ಲಾ ಕಾಮಗಾರಿಗಳನ್ನು ಮೌಲ್ಯಮಾಪನ ಮಾಡಲು ತಕ್ಷಣ ಅಧಿಕಾರಿಗಳನ್ನು ನೇಮಕ ಮಾಡಿ ಶೇ. 2% ರಂತೆ ಬಡ್ಡಿ ಸಹಿತ ಸೆಸ್ ವಸೂಲಿ ಮಾಡಬೇಕು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಕಾರ್ಮಿಕರ ಕಲ್ಯಾಣ ಮಂಡಳಿವತಿಯಿಂದ ಚಿತ್ರದುರ್ಗ ಕಾರ್ಮಿಕ ಅಧಿಕಾರಿಯವರ ಕಛೇರಿ ಎದುರು ಧರಣಿ ಸತ್ಯಾಗ್ರಹವನ್ನು ನಡೆಸಿ ಕಾರ್ಮಿಕ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹವನ್ನು ನೇತೃತ್ವವನ್ನುವಹಿಸಿದ್ದ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಮಾತನಾಡಿ, ಈ ಹಿಂದೆ ಬಿ.ಜೆ.ಪಿ. ಸರ್ಕಾರದ ಅವಧಿಯಲ್ಲಿ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಮುಂದುವರೆಸುವಂತೆ ಆದೇಶಿಸಬೇಕು.3 ವರ್ಷಗಳಿಗೊಮ್ಮೆನವೀಕರಣ ಮಾಡುವಂತೆ ಆದೇಶಿಸಬೇಕು. ನೋಂದಾಯಿತ ಕಟ್ಟಡ ಕಾರ್ಮಿಕರ ಸಹಜ ಸಾವಿಗೆ 5 ಲಕ್ಷ ನೀಡಬೇಕು. ನೋಂದಾಯಿತ ಕಟ್ಟಡ ಕಾರ್ಮಿಕರ ಮನೆಗಳ ನಿರ್ಮಾಣಕ್ಕೆ ರೂ. 5 ಲಕ್ಷ ನೀಡಬೇಕು. ಪಿಂಚಣಿಯನ್ನು 5,000 ರೂಗಳಿಗೆ ಹೆಚ್ಚಿಸಬೇಕು ಮತ್ತು ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಛೇರಿಯಿಂದ ನೀಡಬೇಕು. ಹೆರಿಗೆ ಭತ್ಯೆ ನಗದು ನೇರ ವರ್ಗಾವಣೆ 50,000 ರೂ. ಮದುವೆಗೆ ರೂ. 1 ಲಕ್ಷ ನೀಡಬೇಕು. ಪ್ರಿವೆಂಟರಿ ಹೆಲ್ತ್‍ಕೇರ್ ಚೆಕಪ್ ಯೋಜನೆ, ಆರ್.ಪಿ.ಎಲ್.ತರಬೇತಿ ಯೋಜನೆ, ಆರ್.ಪಿ.ಎಲ್. ಟ್ರೈನಿಂಗ್ ಕಿಟ್ ಯೋಜನೆ, ಪೂರ್ವ ಕಲಿಕೆ ಸೇತುವೆ ಕೋರ್ಸ್ ತರಬೇತಿ ಯೋಜನೆ, ವಿವಿಧ ವೃತ್ತಿಗಳ ಸುರಕ್ಷತಾ ಕಿಟ್ ಯೋಜನೆ, ವಿವಿಧ ರೀತಿಯ ಟೂಲ್ ಕಿಟ್ ಖರೀದಿ ಯೋಜನೆ ಈ 6 ಯೋಜನೆಗಳ ತನಿಖೆಗೆ ಆದೇಶ ನೀಡಬೇಕು ಎಂದು ಒತ್ತಾಯಿಸಲಾಯಿತು.

ಈ ಧರಣಿ ಸತ್ಯಾಗ್ರಹದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಜೆ.ಮಂಜುನಾಥ್, ರಾಜ್ಯ ಉಪಾದ್ಯಕ್ಷರಾದ ಕೆ.ಗೌಸ್ ಪೀರ್, ನಾದಿಅಲಿ, ನರಸಿಂಹರಾಜು, ರಾಜ್ಯ ಖಂಜಾಚಿ ಈಶ್ವರಪ್ಪ, ಉಪ ಖಂಜಾಚಿ ಚಾಂದ್ ಪೀರ್, ರಾಜ್ಯ ನಿರ್ದೆಶಕರಾದ ಗೌಸಖಾನ್, ಸಲಿಂ, ರಾಜಪ್ಪ, ತಿಮ್ಮಯ್ಯ, ರಫಿಕ್, ಫೈರೋಜ್, ಪ್ರಸನ್ನ. ರಘು, ನಿಂಗರಾಜು, ಲಕ್ಷ್ಮಣಶಟ್ರು, ಗೌರೌವಾಧ್ಯಕ್ಷರಾಧ ಮಹಾಂತೇಶ್, ವೆಂಕಟೇಶ್, ಮಲ್ಲಿಕಾರ್ಜನ್, ಸಮೃದ್ದಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಮಘದ ಅಧ್ಯಕ್ಷ ವೆಂಕಟೇಶಪ್ಪ . ಖಂಜಾಚಿ ಮಹಂತೇಶ್, ಜಿಲ್ಲಾ ಟೈಲ್ಸ್ ಮತ್ತು ಗ್ರಾನೈಟ್ ಕಾರ್ಮಿಕರ ಸಂಘದ ಅಧ್ಯಕ್ಷರಾದ ಟಿ.ಚಂದ್ರಪ್ಪ ಖಂಜಾಚಿ ವೃಷಭೇಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.

Views: 58

Leave a Reply

Your email address will not be published. Required fields are marked *