ಸಿ.ಟಿ.ರವಿಯವರ 58 ನೇ ಹುಟ್ಟು ಹಬ್ಬದ ಅಂಗವಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹಣ್ಣುಗಳನ್ನು ಹಂಚಲಾಯಿತು.

ಚಿತ್ರದುರ್ಗ ಜು. 18 ಭಾರತೀಯ ಜನತಾ ಪಾರ್ಟಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು, ಹಾಲಿ ವಿಧಾನ ಪರಿಷತ್ ಸದಸ್ಯರಾದ
ಸಿ.ಟಿ.ರವಿಯವರ 58 ನೇ ಹುಟ್ಟು ಹಬ್ಬದ ಅಂಗವಾಗಿ ಸಿ.ಟಿ.ರವಿ ಅಭೀಮಾನಿಗಳ ಬಳಗದವತಿಯಿಂದ ಚಿತ್ರದುರ್ಗ ನಗರದ ತಾಯಿ
ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶುಕ್ರವಾರ ಬಾಣಂತಿಯರಿಗೆ ಹಣ್ಣುಗಳನ್ನು ಹಂಚಲಾಯಿತು.


ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ, ಸಿ.ಟಿ. ರವಿ ಅಭಿಮಾನಿ ಬಳಗದ ಅಧ್ಯಕ್ಷರಾದ ರಘು,
ಪರಶುರಾಮ್, ದೇವರಾಜ್, ನಾಗರಾಜ್ ಬೆದ್ರೇ, ನಾಗರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು. ಇದಕ್ಕೂ ಮುನ್ನಾ
ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಮಠದಲ್ಲಿ ಸಿ.ಟಿ.ರವಿಯವರಿಗೆ ಶುಭವನ್ನು ಕೋರಿ ಸ್ವಾಮಿಗೆ ಅಭೀಷೇಕವನ್ನು
ಮಾಡಿಸಲಾಯಿತು.

Leave a Reply

Your email address will not be published. Required fields are marked *