ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮಾಲ್ಡೀವ್ಸ್ ಸಚಿವರು ಟೀಕೆ ಮಾಡಿದ ನಂತರ ಮಾಲ್ಡೀವ್ಸ್ ಅನ್ನು ಬಹಿಷ್ಕರಿಸುವಂತೆ ಸಿನಿಮಾ ನಿರ್ಮಾಪಕರಿಗೆ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE) ಮನವಿ ಮಾಡಿದೆ. ಲಕ್ಷದ್ವೀಪಕ್ಕೆ ಬೆಂಬಲ ಹೆಚ್ಚಾಗುತ್ತಿದ್ದಂತೆ ಮಾಲ್ಡೀವ್ಸ್ ವಿರುದ್ಧ ದೇಶದ ಟಾಪ್ ಗಣ್ಯರು ಧ್ವನಿ ಎತ್ತಿ ನಮ್ಮದೇಶದ ದ್ವೀಪಗಳನ್ನು ಎಕ್ಸ್ಪ್ಲೋರ್ ಮಾಡಲು ಪ್ರೋತ್ಸಾಹಿಸುತ್ತಿದ್ದಾರೆ.
ಭಾರತ ಮತ್ತು ದ್ವೀಪ ರಾಷ್ಟ್ರ ಮಾಲ್ಡೀವ್ಸ್ ಮಧ್ಯೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಮಾಲ್ಡೀವ್ಸ್‌ನಲ್ಲಿ ಶೂಟಿಂಗ್ ಬಹಿಷ್ಕಾರಕ್ಕೆ ಕರೆ ನೀಡುವ ನಿರ್ಧಾರವನ್ನು ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ ಫೆಡರೇಶನ್ ( FWICE) ಪ್ರಕಟಿಸಿದೆ. ಇತ್ತೀಚೆಗೆ ಮಾಲ್ಡೀವ್ಸ್‌ನ ಸಚಿವರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನೀಡಿದ ಹೇಳಿಕೆಗಳನ್ನು ಖಂಡಿಸಿದೆ.
ಚಲನಚಿತ್ರೋದ್ಯಮ ನೌಕರರ ಒಕ್ಕೂಟವು ಮೆಂಬರ್ಸ್ ಹಾಗೂ ಇತರರನ್ನು ತಮ್ಮೊಂದಿಗೆ ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನದಲ್ಲಿ ಸೇರಿಕೊಳ್ಳುವಂತೆ ಮನವಿ ಮಾಡಿದೆ. ಹೇಳಿಕೆ ನೀಡಲಾಗಿದ್ದು ಇದರಲ್ಲಿ ಅವರು ಭಾರತದಲ್ಲಿರುವಂತಹ ಇದೇ ರೀತಿಯ ಸ್ಥಳಗಳನ್ನು ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಳ್ಳಿ ಎಂದಿದ್ದಾರೆ.
ಮಾಲ್ಡೀವ್ಸ್‌ನ ಮೂವರು ಸಚಿವರು ನೀಡಿದ ಅವಹೇಳನಕಾರಿ ಹೇಳಿಕೆಯಿಂದಾಗಿ ಭಾರತ ಮತ್ತು ಮಾಲ್ಡೀವ್ಸ್ ನಡುವೆ ಮತ್ತಷ್ಟು ಕಂದಕ ಸೃಷ್ಟಿಯಾಗುತ್ತಿದೆ. FWICE ಹೇಳಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಮಾಲ್ಡೀವ್ಸ್ ಸಚಿವರು ಮಾಡಿದ ಹೇಳಿಕೆಗಳನ್ನು ಉದ್ಯಮವು ಬಲವಾಗಿ ಖಂಡಿಸುತ್ತದೆ ಎಂದಿದೆ.
ದೇಶ ಮತ್ತು ಅದರ ವಿಶಾಲ ಸಂಸ್ಕೃತಿಯೊಂದಿಗೆ ಒಗ್ಗಟ್ಟಿನಿಂದ ನಿಲ್ಲುವ FWICE ಸದಸ್ಯರು ತಮ್ಮ ಶೂಟಿಂಗ್ ಸ್ಥಳಗಳಿಗಾಗಿ ಮಾಲ್ಡೀವ್ಸ್ ಅನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಬದಲಾಗಿ, FWICE ತನ್ನ ಸದಸ್ಯರಿಗೆ ತಮ್ಮ ಶೂಟಿಂಗ್ ಉದ್ದೇಶಕ್ಕಾಗಿ ಭಾರತದಲ್ಲಿ ಇದೇ ರೀತಿಯ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಭಾರತದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ತಮ್ಮಿಂದಾಗುವ ಕೊಡುಗೆ ನೀಡುವಂತೆ ಮನವಿ ಮಾಡುತ್ತದೆ ಎಂದು ಹೇಳಿಕೆಯಲ್ಲಿ ಬರೆಯಲಾಗಿದೆ.
ಭಾರತ ಮತ್ತು ಜಗತ್ತಿನಾದ್ಯಂತ ಇರುವ ಎಲ್ಲಾ ನಿರ್ಮಾಪಕರಿಗೆ ಮಾಲ್ಡೀವ್ಸ್‌ನಲ್ಲಿ ಯಾವುದೇ ಶೂಟಿಂಗ್ ಮಾಡದಂತೆ ಸೂಚಿಸಲಾಗಿದೆ. ನಾವೆಲ್ಲರೂ ನಮ್ಮ ಪ್ರಧಾನಿ ಮತ್ತು ನಮ್ಮ ರಾಷ್ಟ್ರಕ್ಕೆ ಬಲವಾದ ಬೆಂಬಲವನ್ನು ನೀಡುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಾಲ್ಡೀವ್ಸ್‌ಗೆ ನಿಯಮಿತವಾಗಿ ಭೇಟಿ ನೀಡುತ್ತಿರುವ ಅನೇಕ ಸೆಲೆಬ್ರಿಟಿಗಳು ಕೂಡಾ ಮಾಲ್ಡೀವ್ಸ್ ವಿರೋಧಿಸಿ ಲಕ್ಷದ್ವೀಪದಂತಹ ಭಾರತೀಯ ದ್ವೀಪಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್‌ನಿಂದ ಹಿಡಿದು ಅಕ್ಷಯ್ ಕುಮಾರ್ ಮತ್ತು ಶ್ರದ್ಧಾ ಕಪೂರ್ ವರೆಗೆ, ಹಲವಾರು ಸೆಲೆಬ್ರಿಟಿಗಳು ಭಾರತೀಯ ದ್ವೀಪಗಳನ್ನು ಬೆಂಬಲಿಸಿ ಪೋಸ್ಟ್ ಹಾಕಿದ್ದಾರೆ.
ಇದೀಗ ನಿರ್ಮಾಪಕರೂ ಈ ಒಂದು ನಿರ್ಧಾರ ಮಾಡಿ ಮೋದಿಯವರಿಗೆ ಫುಲ್ ಸಪೋರ್ಟ್ ಮಾಡಿದೆ. ಚಿತ್ರೀಕರಣವನ್ನು ಮಾಲ್ಡೀವ್ಸ್‌ನಲ್ಲಿ ಬಾಯ್ಕಾಟ್ ಮಾಡಿದರೆ ಇದು ಮಾಲ್ಡೀವ್ಸ್ ಆದಾಯದ ಮೇಲೆ ಪರಿಣಾಮ ಬೀರಲಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1