ಮಾಘ ಮಾಸದ ಶುಕ್ಲ ಪಕ್ಷ ಚತುರ್ದಶಿಯ ಈ ದಿನದ ರಾಶಿಫಲ ಮತ್ತು ಪಂಚಾಂಗ ವಿವರ
ಇಂದು ಶಾಲಿವಾಹನ ಶಕೆ 1948ರ ವಿಶ್ವಾಸು ಸಂವತ್ಸರದ ಮಾಘ ಮಾಸ. ಇಂದಿನ ಗ್ರಹಗಳ ಸ್ಥಿತಿಗತಿಯು ಭೂ ವ್ಯವಹಾರಗಳು, ಸ್ಪರ್ಧಾತ್ಮಕ ಮನೋಭಾವ ಮತ್ತು ಅಪರಿಚಿತರೊಂದಿಗಿನ ಒಡನಾಟದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ವ್ಯಾಪಾರ ಮತ್ತು ದಾನ ಧರ್ಮಗಳಿಗೆ ಇದು ವಿಶೇಷ ದಿನವಾದರೂ, ನಂಬಿಕೆ ದ್ರೋಹವಾಗದಂತೆ ಎಚ್ಚರ ವಹಿಸುವುದು ಅಗತ್ಯ. ದ್ವಾದಶ ರಾಶಿಗಳ ಇಂದಿನ ಫಲ ಈ ಕೆಳಗಿನಂತಿದೆ.
ಇಂದಿನ ಪಂಚಾಂಗ (01-02-2026)
- ಸಂವತ್ಸರ: ವಿಶ್ವಾಸು (ಶಾಲಿವಾಹನ ಶಕೆ 1948)
- ಆಯನ: ಉತ್ತರಾಯಣ | ಋತು: ಶಿಶಿರ
- ಮಾಸ: ಮಾಘ | ಪಕ್ಷ: ಶುಕ್ಲ
- ತಿಥಿ: ಚತುರ್ದಶೀ
- ನಕ್ಷತ್ರ: ಪುಷ್ಯ (ನಿತ್ಯ ನಕ್ಷತ್ರ) | ಮಹಾನಕ್ಷತ್ರ: ಶ್ರವಣಾ
- ವಾರ: ಭಾನುವಾರ
- ಯೋಗ: ವಿಷ್ಕಂಭ | ಕರಣ: ಗರಜ
- ಸೂರ್ಯೋದಯ: ಬೆಳಿಗ್ಗೆ 06:53 | ಸೂರ್ಯಾಸ್ತ: ಸಂಜೆ 06:22
ಶುಭಾಶುಭ ಕಾಲಗಳು:
- ರಾಹು ಕಾಲ: ಸಂಜೆ 04:57 ರಿಂದ 06:23 ರವರೆಗೆ
- ಯಮಗಂಡ ಕಾಲ: ಮಧ್ಯಾಹ್ನ 12:38 ರಿಂದ 02:04 ರವರೆಗೆ
- ಗುಳಿಕ ಕಾಲ: ಮಧ್ಯಾಹ್ನ 03:30 ರಿಂದ 04:57 ರವರೆಗೆ
ದ್ವಾದಶ ರಾಶಿಗಳ ಇಂದಿನ ಭವಿಷ್ಯ
ಮೇಷ ರಾಶಿ: ನಿಮ್ಮ ಕಾರ್ಯದ ವೇಗಕ್ಕೆ ಇಂದು ಮನ್ನಣೆ ದೊರೆಯಲಿದೆ. ವೃತ್ತಿಜೀವನದಲ್ಲಿ ಉಂಟಾಗುವ ಕೆಲವು ಅಸಮಾಧಾನಗಳನ್ನು ತೋರ್ಪಡಿಸಿಕೊಳ್ಳದೇ ಮುನ್ನಡೆಯುವುದು ಜಾಣತನ. ಅಂದುಕೊಂಡ ಸಮಯಕ್ಕೆ ಕೆಲಸ ಮುಗಿಸುವುದು ಕಷ್ಟವಾಗಬಹುದು. ಸ್ವಂತ ಮನೆಯ ಕನಸು ಕಾಣುವಿರಿ. ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. ಟೀಕೆಗಳಿಗೆ ಅತಿಯಾಗಿ ಪ್ರತಿಕ್ರಿಯಿಸುವುದು ಬೇಡ. ಉತ್ಸಾಹದ ಬರದಲ್ಲಿ ಮಿತಿಮೀರಿ ವರ್ತಿಸದಿರಿ.
ವೃಷಭ ರಾಶಿ: ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ ಕೊರತೆ ಕಾಡಬಹುದು. ಹಳೆಯ ಸಮಸ್ಯೆಗಳು ಮರುಕಳಿಸುವ ಸಾಧ್ಯತೆಯಿದೆ. ನಿಮ್ಮ ಪರಿಸ್ಥಿತಿಯನ್ನು ನೋಡಿ ಇತರರು ಆಡಿಕೊಳ್ಳಬಹುದು, ಆದರೆ ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ. ಹೊಸ ವಸ್ತುಗಳ ಖರೀದಿಗಿಂತ ಇರುವ ಬೆಲೆಬಾಳುವ ವಸ್ತುಗಳ ರಕ್ಷಣೆ ಮುಖ್ಯ. ಆರ್ಥಿಕ ವಿಷಯದಲ್ಲಿ ಸಂಬಂಧಿಕರಿಂದ ಪ್ರಶ್ನೆಗಳು ಎದುರಾಗಬಹುದು. ಕಣ್ಣುಮುಚ್ಚಿ ಯಾರನ್ನೂ ನಂಬಬೇಡಿ, ಎಚ್ಚರವಿರಲಿ.
ಮಿಥುನ ರಾಶಿ: ಗುಪ್ತ ಶತ್ರುಗಳು ನಿಮ್ಮ ಸೋಲನ್ನು ಎದುರು ನೋಡುತ್ತಿರಬಹುದು. ನಿಮ್ಮ ಕಷ್ಟಗಳಿಗೆ ಸ್ಪಂದಿಸುವವರಿಲ್ಲ ಎಂಬ ಭಾವನೆ ಮೂಡಬಹುದು. ಮಾತಿನ ಮೇಲೆ ಹಿಡಿತವಿರಲಿ, ಸಂದರ್ಭಕ್ಕೆ ತಕ್ಕಂತೆ ವರ್ತಿಸಿ. ಮಕ್ಕಳ ವಿಷಯದಲ್ಲಿ ಮೃದು ಧೋರಣೆ ತೋರುವಿರಿ. ಪ್ರಮುಖ ವ್ಯಕ್ತಿಗಳ ಭೇಟಿ ಸಾಧ್ಯ. ವಿದ್ಯಾರ್ಜನೆಗಾಗಿ ಮನೆ ಬಿಟ್ಟು ತೆರಳುವ ನಿರ್ಧಾರ ಕಠಿಣವೆನಿಸಬಹುದು. ಭವಿಷ್ಯದ ಗುರಿಯತ್ತ ಚಿತ್ತವಿರಲಿ.
ಕರ್ಕಾಟಕ ರಾಶಿ: ಸ್ಪರ್ಧಾತ್ಮಕ ಮನೋಭಾವ ಹೆಚ್ಚಿರುತ್ತದೆ. ಚಿಕ್ಕ ವಿಷಯಗಳನ್ನೂ ಗಂಭೀರವಾಗಿ ಪರಿಗಣಿಸುವುದರಿಂದ ಸಮಸ್ಯೆ ಹಿಗ್ಗಬಹುದು. ಅನಗತ್ಯ ಮಾತುಕತೆಗಳಲ್ಲಿ ಸಮಯ ವ್ಯರ್ಥ ಮಾಡಬೇಡಿ. ಹೊಸ ಉದ್ಯೋಗ ಅಥವಾ ವೃತ್ತಿಯಲ್ಲಿ ತೊಡಗಿಕೊಳ್ಳುವ ಆಸಕ್ತಿ ಮೂಡಲಿದೆ. ಕೃಷಿ ಅಥವಾ ಭೂಮಿಯಲ್ಲಿ ಬೆಳೆ ಬೆಳೆಯುವ ಆಲೋಚನೆ ಬರುವುದು. ಒಂಟಿತನವನ್ನು ಬಯಸಿ ವಿಹಾರಕ್ಕೆ ತೆರಳುವಿರಿ. ವಿವಾಹ ಕಾರ್ಯಗಳಿಗೆ ಅಪರಿಚಿತರಿಂದ ಅಡ್ಡಿಯಾಗಬಹುದು.
ಸಿಂಹ ರಾಶಿ: ಮಕ್ಕಳಿಗೆ ನಿಮ್ಮ ಪ್ರೀತಿ ಸಾಲುತ್ತಿಲ್ಲ ಎಂದೆನಿಸಬಹುದು. ಅತಿಯಾದ ಲಾಭದ ನಿರೀಕ್ಷೆ ಬೇಡ, ಅಲ್ಪ ತೃಪ್ತಿ ಅಗತ್ಯ. ಆಂತರಿಕ ಕಲಹಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದು ಕಷ್ಟ. ಸರಕಾರಿ ಕೆಲಸಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸುವಿರಿ. ವಾಹನ ರಿಪೇರಿಗಾಗಿ ಖರ್ಚು ಬರಬಹುದು. ಪ್ರೇಮ ಸಂಬಂಧಗಳಲ್ಲಿ ಅಂತರ ಮೂಡದಂತೆ ಎಚ್ಚ್ರರವಹಿಸಿ. ಜವಾಬ್ದಾರಿಗಳಿಂದ ನುಣಚಿಕೊಳ್ಳಬೇಡಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಕನ್ಯಾ ರಾಶಿ: ವೃತ್ತಿ ಬದಲಾವಣೆಯ ಆಲೋಚನೆಯು ಹೊಸ ಉತ್ಸಾಹವನ್ನು ತರಲಿದೆ. ಕೆಲಸದ ಒತ್ತಡದಿಂದ ಮನೆಗೆ ತಡವಾಗಿ ಹೋಗುವಿರಿ. ನಿಮ್ಮ ಕೆಲಸದಲ್ಲಿ ನೀವೇ ಶ್ರೇಷ್ಠ ಎಂಬ ಭಾವನೆ ಇರಲಿ. ನಾಜೂಕಿನಿಂದ ಕೆಲಸಗಳನ್ನು ನಿರ್ವಹಿಸಿ. ಗುಂಪು ಕೆಲಸಗಳಲ್ಲಿ ಅಥವಾ ಸಮೂಹದಲ್ಲಿ ಹೆಚ್ಚಿನ ಜವಾಬ್ದಾರಿ ನಿಮ್ಮ ಮೇಲಿರುತ್ತದೆ. ಅತಿಯಾದ ಮಾತು ಬೇಡ. ಮನೆಯಿಂದ ದೂರವಿದ್ದು ಹೊಸ ಬದುಕು ಕಟ್ಟಿಕೊಳ್ಳುವ ಸಾಧ್ಯತೆ ಇದೆ.
ತುಲಾ ರಾಶಿ: ಸ್ವಂತಿಕೆ ಮತ್ತು ಸೃಜನಶೀಲತೆಯನ್ನು ಬೆಳೆಸಿಕೊಳ್ಳಿ. ದುಃಖ ಮರೆಯಲು ಕೆಟ್ಟ ಅಭ್ಯಾಸಗಳ ಮೊರೆ ಹೋಗಬೇಡಿ. ಮನಸ್ಥಿತಿ ಏರುಪೇರಾಗುವುದರಿಂದ ಕೋಪಗೊಳ್ಳುವ ಅಥವಾ ಮೌನಕ್ಕೆ ಜಾರುವ ಸಾಧ್ಯತೆ ಇದೆ. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಹಣಕಾಸಿನ ವಿಚಾರದಲ್ಲಿ ಮಿತ್ರರಿಂದಲೇ ಮೋಸವಾಗುವ ಸಾಧ್ಯತೆ ಇದೆ ಎಚ್ಚರ. ಕೆಲಸದ ಒತ್ತಡ ಪ್ರೀತಿ-ಪ್ರೇಮದ ಮೇಲೆ ಪರಿಣಾಮ ಬೀರಬಹುದು.
ವೃಶ್ಚಿಕ ರಾಶಿ: ಮಕ್ಕಳೊಂದಿಗೆ ಪ್ರಯಾಣ ಮಾಡುವ ಸಾಧ್ಯತೆ ಇದ್ದು, ಅವರ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಉದ್ಯೋಗದಲ್ಲಿ ಒಂದೇ ಕೆಲಸದ ವಿಚಾರವಾಗಿ ಭಿನ್ನಾಭಿಪ್ರಾಯ ಮೂಡಬಹುದು. ಸಂಗಾತಿಯ ಮಾತುಗಳು ನಿಮ್ಮ ಸ್ವಾಭಿಮಾನವನ್ನು ಕೆಣಕಬಹುದು, ಆದರೂ ತಾಳ್ಮೆ ಅವಶ್ಯಕ. ಅವಮಾನಗಳನ್ನು ಸಹಿಸಿಕೊಂಡು ಕೆಲಸದಲ್ಲಿ ಮುನ್ನಡೆಯಬೇಕಾಗುತ್ತದೆ. ಉದ್ಯಮ ವಿಸ್ತರಣೆಗೆ ಬೇರೆಯವರ ಸಲಹೆ ದೊರೆಯಲಿದೆ.
ಧನು ರಾಶಿ: ಕಾನೂನಾತ್ಮಕ ವಿಷಯಗಳಲ್ಲಿ ಸರಿಯಾದ ತಿಳುವಳಿಕೆ ಇಟ್ಟುಕೊಳ್ಳಿ. ಉದ್ವೇಗದಿಂದ ತಪ್ಪು ಹಾದಿ ಹಿಡಿಯುವ ಸಾಧ್ಯತೆ ಇದೆ, ಎಚ್ಚರ. ಸಂಗಾತಿಯ ಬರುವಿಕೆಯನ್ನು ನಿರೀಕ್ಷಿಸುವಿರಿ. ಶತ್ರುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಸಂದಿಗ್ಧ ಪರಿಸ್ಥಿತಿಯನ್ನು ಇತರರಿಗೆ ವಿವರಿಸಲು ಕಷ್ಟವಾಗಬಹುದು. ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲವಿರುತ್ತದೆ. ಮಕ್ಕಳಿಂದ ಸಂತಸದ ಸುದ್ದಿ ಸಿಗಲಿದೆ.
ಮಕರ ರಾಶಿ: ಭೂಮಿಯ ಮೇಲೆ ಬಂಡವಾಳ ಹೂಡಲು ಇದು ಸೂಕ್ತ ಸಮಯ. ಅನಗತ್ಯವಾಗಿ ಬೇರೆಯವರ ಬಗ್ಗೆ ಮರುಗುವುದು ವ್ಯರ್ಥ. ಅಪರಿಚಿತರ ಸಂಕೋಲೆಯಿಂದ ಹೊರಬರುವುದು ಕಷ್ಟವಾಗಬಹುದು. ಶಿಕ್ಷಣದಲ್ಲಿ ಸಾಧಾರಣ ಪ್ರಗತಿ. ವ್ಯಾಪಾರ ವ್ಯವಹಾರದಲ್ಲಿ ಸ್ವಲ್ಪ ಹಿನ್ನಡೆ ಉಂಟಾಗಬಹುದು. ಮಕ್ಕಳ ಯಶಸ್ಸು ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ. ಕೃಷಿ ಚಟುವಟಿಕೆಗಳಲ್ಲಿ ನೆಮ್ಮದಿ ಕಾಣುವಿರಿ.
ಕುಂಭ ರಾಶಿ: ಪ್ರಯಾಣದಿಂದ ದೈಹಿಕ ಆಯಾಸ ಉಂಟಾಗಿ ವಿಶ್ರಾಂತಿ ಪಡೆಯುವಿರಿ. ಕೋಪ ನಿಯಂತ್ರಣಕ್ಕೆ ಮಾಡುವ ಪ್ರಯತ್ನ ಫಲ ನೀಡಲಿದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರುವುದು. ನಿಮ್ಮಿಂದ ಸಾಧ್ಯವಾಗದ ಕೆಲಸಗಳಿಗೆ ಮಾತು ಕೊಡಬೇಡಿ. ಕುಟುಂಬವನ್ನು ಸಮತೋಲನದಿಂದ ಮುನ್ನಡೆಸುವಿರಿ. ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ ಹೆಚ್ಚಾಗಲಿದೆ. ದಾಂಪತ್ಯದಲ್ಲಿ ಅನ್ಯೋನ್ಯತೆಯ ಕೊರತೆ ಕಾಡಬಹುದು.
ಮೀನ ರಾಶಿ: ದೂರದಲ್ಲಿರುವ ಮಿತ್ರರ ಸಂಪರ್ಕದಿಂದ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು. ತಾಯಿಯೊಂದಿಗೆ ವಾದ ನಡೆಸಿ ನಂತರ ಪಶ್ಚಾತ್ತಾಪ ಪಡುವಿರಿ. ಮಾಧ್ಯಮ ಕ್ಷೇತ್ರದಲ್ಲಿರುವವರು ಎಚ್ಚರಿಕೆಯಿಂದ ವ್ಯವಹರಿಸಬೇಕು. ಅಜ್ಞಾತ ಭಯ ನಿಮ್ಮನ್ನು ಕಾಡಬಹುದು. ಅತಿಯಾದ ಐಷಾರಾಮಿ ಜೀವನದ ಆಸೆ ನಿಮ್ಮ ಕ್ರಿಯಾಶೀಲತೆಯನ್ನು ಕುಗ್ಗಿಸಬಹುದು. ವಾಹನ ಖರೀದಿಯ ನಿರ್ಧಾರದಲ್ಲಿ ಗೊಂದಲ ಉಂಟಾಗಬಹುದು.
ದಿನದ ವಿಶೇಷ: ಇಂದು ಭೂ ವ್ಯವಹಾರಗಳಿಗೆ ಮತ್ತು ದಾನ ಧರ್ಮಗಳಿಗೆ ಪ್ರಶಸ್ತ ದಿನವಾಗಿದೆ. ಆದರೆ ಅಪರಿಚಿತರೊಂದಿಗೆ ವ್ಯವಹರಿಸುವಾಗ ಮತ್ತು ನಂಬಿಕೆಯ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.