ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 19
ಸಿರಿಗರೆ ಯೋಜನ ಕಚೇರಿ ವ್ಯಾಪ್ತಿಯ ಮಾಳಪ್ಪನಟ್ಟಿ ವಲಯದ ಮಾಳಪ್ಪನಟ್ಟಿ ಗ್ರಾಮದ ಮೈಲಾರಲಿಂಗೇಶ್ವರ ಸಮುದಾಯ ಭವನದಲ್ಲಿ ಸಾಮೂಹಿಕ ಗಣ ಹೋಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಕಾರ್ಯಕ್ರಮ ಗ್ರಾಮದ ಸುಭಿಕ್ಷೆಗಾಗಿ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್‍ನ ಕಾರ್ಯದರ್ಶಿ ಹುರಳಿ ಬಸವರಾಜ್ ಮಾತನಾಡಿ, ಇಂದಿನ ಜನರು ಧರ್ಮದ ತಳಹದಿ ಮೇಲೆ ಸದೃಢವಾದ ಸಮಾಜವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇಂದಿನ ಸಮಾಜದ ಸಂಕಿರ್ಣ ಸಂದರ್ಭದಲ್ಲಿ ಶಾಂತಿ ನೆಮ್ಮದಿ ಹಾಗೂ ಪ್ರಗತಿಯ ಸುಂದರ ಭವಿಷ್ಯಕ್ಕಾಗಿ ಧಾರ್ಮಿಕ ಆಚರಣೆಗಳು ಅಗತ್ಯವಾಗಿವೆ. ಪೂಜೆ ಪುನಸ್ಕಾರ ದಾನ ಧರ್ಮ ಆಚರಣೆಗಳು ಮಕ್ಕಳ ಹಾಗೂ ಯುವ ಜನರಲ್ಲಿ ಸಂಸ್ಕಾರವನ್ನು ಬೆಳಸುವಲ್ಲಿ ಮಹತ್ವರವಾದ ಪಾತ್ರವನ್ನು ವಹಿಸುತ್ತವೆ ಎಂದ ಅವರು. ಆಧ್ಯಾತ್ಮಿಕತೆ ಹಾಗೂ ಪೋಷಕರ ಪಾತ್ರದ ಬಗ್ಗೆ ಮಕ್ಕಳ ಪೋಷಕರ ನಡುವಿನ ಸಂಬಂಧದ ಬಗ್ಗೆ ಮನಮುಟ್ಟುವಂತೆ ಫಲಾನುಭವಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೋಳಘಟ್ಟ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ನಿರ್ಮಲ ದೇವರಾಜ್ ವಹಿಸಿದ್ದರು. ಮಾಳಪ್ಪನಟ್ಟಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ್ ಉಗ್ರಾಣ ಮತ್ತು ಚಂದ್ರಣ್ಣ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಂಜುಳಾ ಭಾಗವಹಿಸಿದ್ದರು ಎಸ್ .ಗುರುಸ್ವಾಮಿ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ತಾಲೂಕು ಯೋಜನಾಧಿಕಾರಿಗಳಾದ ರವಿಚಂದ್ರ ಗಣ್ಯರನ್ನು ಸ್ವಾಗತಿಸಿದರೆ ಚಿತ್ರದುರ್ಗ ಜಿಲ್ಲೆಯ ನಿರ್ದೇಶಕರಾದ ಕಮಲಾಕ್ಷರವರು ಯೋಜನೆ ಕಾರ್ಯಕ್ರಮಗಳ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿ ಫಲಾನುಭವಿಗಳಿಗೆ ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕರಾದ ಮೋಹನ್ ಕಾರ್ಯಕ್ರಮದ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವಲಯದ ಸೇವಾ ಪ್ರತಿನಿಧಿಗಳು ಒಕ್ಕೂಟದ ಪದಾಧಿ ಕಾರಿಗಳು ಸರ್ವ ಸದಸ್ಯರು ಭಾಗವಹಿಸಿದ್ದರು.
Views: 27