ಚಿತ್ರದುರ್ಗ ಅ. 02
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಗಾಂಧೀಜಿಯವರಂತೆ ನಮ್ಮಲ್ಲಿ ತ್ಯಾಗ, ನೆಮ್ಮದಿ, ತಾಳ್ಮೆ, ಶಾಂತಿಯನ್ನು ಮೈಗೂಡಿಸಿಕೊಂಡಾಗ ಮಾತ್ರ ನಮ್ಮ ದೇಶ ಸುಭೀಕ್ಷವಾಗಿ ಇರಲು ಸಾಧ್ಯವಿದೆ ಎಂದು ಕಾಂಗ್ರೆಸ್ ಮುಖಂಡರು, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಆರ್.ಕೆ.ಸರ್ದಾರ್ ತಿಳಿಸಿದರು.

ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 156 ಹಾಗೂ ದೇಶದ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರು ಶಾಸ್ತ್ರಿಯವರ 121ನೇ ಜಯಂತಿ ಕಾರ್ಯಕ್ರಮದ ಅಂಗವಾಗಿ ವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಗಾಂಧೀಜಿಯವರು ತ್ಯಾಗ, ಅಹಿಂಸೆಯ ಮೂಲಕ ನಮ್ಮ ದೇಶಕ್ಕೆ ಬ್ರಟಿಷರಿಂದ ಮುಕ್ತಿಯನ್ನು ಕೊಡಿಸಿದರು. ಅವರ ತ್ಯಾಗದ ಗುಣ ಹೋರಾಟದ ಫಲವಾಗಿ ಇಂದು ನಾವು ಸ್ವಾತಂತ್ರ್ಯವನ್ನು ಪಡೆದಿದ್ದೇವೆ, ಬ್ರಟಿಷರು ನಮ್ಮ ಹಕ್ಕುಗಳನ್ನು ಕಿತ್ತು ಕೊಂಡಾಗ ಅದನ್ನು ಪಡೆಯುವ ಸಲುವಾಗಿ ಪ್ರಾರಂಭವಾದ ಹೋರಾಟ ಅದು ಮುಂದಿನ ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವಾಯಿತು. ದೇಶವನ್ನು ಉಳಿಸುವ ಸಲುವಾಗಿ ಗಾಂಧೀಜಿಯವರು ಬ್ರಟಿಷರ ವಿರುದ್ದ ಹೋರಾಟವನ್ನು ಪ್ರಾರಂಭ ಮಾಡಿದರು, ಇದು ಅಂದು ಎಲ್ಲರ ತೀರ್ಮಾನವಾಗಿತ್ತು ಎಂದರು.
ಗಾಂಧೀಜಿಯವರ ದೇಶವನ್ನು ಬ್ರಟಿಷರ ದಾಸ್ಯದಿಂದ ಮುಕ್ತರಾಗಿ ಮಾಡಲು ತಮ್ಮ ಜೀವನವನ್ನೇ ತ್ಯಾಗ ಮಾಡಿದರು ತಮ್ಮ ಎಲ್ಲಾ ಅಸೆಗಳನ್ನು ದೂರ ಮಾಡಿದರು. ಎಲ್ಲರನ್ನು ಪ್ರೀತಿಸುವ ಮನೋಭಾವವನ್ನು ಹೊಂದಿದ್ದರು. ಗಾಂಧೀಜಿಯವರ ಜೀವನ ಬೇರೆಯವರಿಗೆ ಮಾರ್ಗದರ್ಶನವಾಗಿದೆ ಅವರು ಬಾಳಿದಂತೆ ನಾವು ಸಹಾ ಬಾಳ ಬೇಕಿದೆ ಅವರ ತತ್ವಗಳನ್ನು ಸ್ವಲ್ಪವಾದರೂ ಸಹಾ ನಮ್ಮ ಜೀವನದಲ್ಲಿ ಅಳವಡಿಕೆಯನ್ನು ಮಾಡಿಕೊಂಡಾಗ ಮಾತ್ರ ಅವರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದು ಸರ್ದಾರ ತಿಳಿಸಿದರು.
ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷರಾದ ಶಿವಣ್ಣ ಮಾತನಾಡಿ, ಗಾಂಧೀಜಿಯವರ ತಮ್ಮ ಹೋರಾಟವನ್ನು ಸತ್ಯ ನ್ಯಾಯದ ಮೂಲಕ ಮಾಡಿದರು ಈಗಿನಂತೆ ಅಣುಭಾಂಬ್ಗಳ ಮೂಲಕ ಮಾಡದೆ ಅಹಿಂಸೆಯ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟರು. ಹಿಂದಿನ ಕಾಲದ ಯುಧ್ದಕ್ಕೂ ಈಗಿನ ಕಾಲದ ಯುಧ್ದಕ್ಕೂ ಅಜಗಜಾಂತರವಾದ ವ್ಯತ್ಯಾಸ ಇದೆ. ಸ್ವದೇಶಿ ಚಳುವಳಿಯನ್ನು ಪ್ರಾರಂಭ ಮಾಡಿ ವಿದೇಶಿ ವಸ್ತುಗಳನ್ನು ಧರಿಸದಂತೆ ಜನತೆಗೆ ಕರೆ ನೀಡಿ ಸ್ವದೇಶಿಗರಿಗೆ ಬೆಂಬಲವನ್ನು ನೀಡಿದರು.
ದೇಶದ ಪ್ರಧಾನ ಮಂತ್ರಿಗಳಾಗಿದ್ದ ಲಾಲ್ ಬಹದ್ದೂರು ಶಾಸ್ತ್ರಿಯವರು ತಮ್ಮವಾದ ಆಡಳಿತವನ್ನು ತಮ್ಮ ಅಧಿಕಾರದ ಅವಧಿಯಲ್ಲಿ ನೀಡಿದರು, ರೈತರಿಗೆ ಬೆಂಬಲವಾಗಿ ನಿಲ್ಲುವುದರ ಮೂಲಕ ಅವರಿಗೆ ದಾರಿ ದೀಪವಾಗಿದ್ದರು ಇದ್ದಲ್ಲದೆ ದೇಶವನ್ನು ಕಾಯುವ ಸೈನಿಕರಿಗೂ ಸಹಾ ಸಹಾಯವನ್ನು ಮಾಡುವುದರ ಮೂಲಕ ರೈತ ಸೈನಿಕ ದೇಶದ ಎರಡು ಕಣ್ಣುಗಳಿ ಇದ್ದಂತೆ ಎಂದಿದ್ದರು.
ಚಿತ್ರದುರ್ಗ ತಾಲ್ಲೂಕು ಗ್ಯಾರೆಂಟಿ ಅಧ್ಯಕ್ಷರಾದ ಪ್ರಕಾಶ್ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನತೆ ತಮ್ಮ ಪ್ರಾಣವನ್ನು ನೀಡಿದ್ದಾರೆ ಇದರ ಫಲವಾಗಿ ಇಂದು ನಾವುಗಳು ಸ್ವಾತಂತ್ರ್ಯವನ್ನು ಅನುಭವಿಸುತ್ತೀದ್ದೇವೆ. ದೇಶ ಸ್ವಾತಂತ್ರ್ಯ ಹೊಂದಬೇಕಾದರೆ ಯಾವುದೇ ರೀತಿಯ ಕಲಹ ಇರಲಿಲ್ಲ ಆದರೆ ದೇಶದ ಸ್ವಾತಂತ್ರ್ಯವಾದ ಮೇಲೆ ಕಲಹಗಳು ಪ್ರಾರಂಭವಾದವು, ಗಾಂಧೀಜಿಯವರ ದೇಶದ ಸ್ವಾತಂತ್ರ್ಯ ಗಳಿಸುವಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದರೂ ಸಹಾ ಅಧಿಕಾರಕ್ಕಾಗಿ ಆಸೆಯನ್ನು ಪಡದೆ ಅದನ್ನು ಬೇರೆಯವರಿಗೆ ಬಿಟ್ಟುಕೊಟ್ಟರು. ಇಂಧಿನ ಆರ್.ಎಸ್.ಎಸ್. ವಿ.ಎಚ್.ಪಿ.ಗಳು ಗಾಂಧಿಜೀಯವರನ್ನು ಹತ್ಯೆ ಮಾಡಿದವರನ್ನು ಲೋಕಸಬಾ ಸದಸ್ಯರನ್ನಾಗಿ ಮಾಡಿತು, ದೇಶದ ಶೇ 85 ರಷ್ಟು ಜನ ಅಧಿಕಾರದಿಂದ ಹೊರಗಡೆ ಉಳಿದಿದ್ದಾರೆ ಶೇ. 15 ರಷ್ಟು ಜನ ಮಾತ್ರ ದೇಶವನ್ನು ಆಳುತ್ತಿದ್ದಾರೆ ಎಂದರು.
ಕಾಂಗ್ರೆಸ್ನ ಓಬಿಸಿ ಜಿಲ್ಲಾಧ್ಯಕ್ಷರಾದ ಎನ್.ಡಿ.ಕುಮಾರ್ ಮಾತನಾಡಿ, ಇಂದಿನ ಮಕ್ಕಳಿಗೆ ಸ್ವಾತಂತ್ರ್ಯ ಬಂದ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿಸುತ್ತಿಲ್ಲ, ಅವರಿಗೆ ಬರೀ ಸುಳ್ಳನ್ನು ಹೇಳುವುದರ ಮೂಲಕ ಮಕ್ಕಳಿಗೆ ನಕಲಿ ಹೋರಾಟಗಾರರನ್ನು ಪರಿಚಯ ಮಾಡುತ್ತಿದ್ದಾರೆ. ಮಕ್ಕಳಿಗೆ ಸರಿಯಾದ ರೀತಿಯಲ್ಲಿ ದೇಶಕ್ಕಾಗಿ ಯಾರು ಹೋರಾಟವನ್ನು ಮಾಡಿದರು ಯಾರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು ಎಂಬುದರ ಬಗ್ಗೆ ತಿಳಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಸದಸ್ಯರಾದ ಪ್ರಕಾಶ್ ಮೂರ್ತಿ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಚರಾದ ಗೀತಾ ನಂದಿನಿ ಗೌಡ, ನಗರಾಧ್ಯಕ್ಷ ಲಕ್ಷ್ಮೀಕಾಂತ್, ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ಮೈಲಾರಪ್ಪ, ವಲಿಖಾದ್ರಿ ಸೇರಿದಂತೆ ಇತರರು ಮಾತನಾಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಸಿಸಿ ಅಧ್ಯಕ್ಷರಾದ ತಾಜ್ ಪೀರ್ ವಹಿಸಿದ್ದರು. ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಕಾರ್ಮೀಕ ವಿಭಾಗದ ಅಧ್ಯಕ್ಷರಾದ ಜಾಕಿರ್ ಹುಸೇನ್, ಮುದಸಿರ್, ಖುದ್ದುಸ್, ಸೇವಾದಳದ ಅಧ್ಯಕ್ಷ ಭೂತೇಶ್, ಇಮ್ರಾನ್, ಯತೀಶ್, ಸೇರಿದಂತೆ ಇತರರು ಭಾಗವಹಿಸಿದ್ದರು.
Views: 1