ದುರ್ಬಲ ತಂಡಗಳನ್ನು ಸೋಲಿಸಿ ಬಲಿಷ್ಠರಾಗುವುದಲ್ಲ: ಟೀಮ್ ಇಂಡಿಯಾ ವಿರುದ್ಧ ಗವಾಸ್ಕರ್ ಕಿಡಿ

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿನ ಟೀಮ್ ಇಂಡಿಯಾದ ಹೀನಾಯ ಸೋಲಿನ ಪರಾಮರ್ಶೆ ಮುಂದುವರೆದಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾದ ಮುಂದಿನ ಸರಣಿಯ ವೇಳಾಪಟ್ಟಿ ಕೂಡ ಪ್ರಕಟಗೊಂಡಿದೆ.ಅಂದರೆ ಭಾರತ ತಂಡವು ಮುಂದಿನ ಪಂದ್ಯಗಳನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ. ಜುಲೈ 12 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 2 ಟೆಸ್ಟ್, 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಾಡಲಿದೆ.ಆದರೆ ಈ ಸರಣಿ ಬಗ್ಗೆ ಟೀಮ್ ಇಂಡಿಯಾದ ಮಾಜಿ ನಾಯಕ ಸುನಿಲ್ ಗಾವಸ್ಕರ್ ನೀಡಿರುವ ಹೇಳಿಕೆಗಳು ಇದೀಗ ಭಾರೀ ವೈರಲ್ ಆಗುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಸೋಲಿನ ಬೆನ್ನಲ್ಲೇ ಮಾತನಾಡಿದ್ದ ಗವಾಸ್ಕರ್, ಭಾರತ ತಂಡದ ಪ್ರದರ್ಶನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.ಭಾರತ ತಂಡವು ಮುಂದಿನ ಸರಣಿಯಲ್ಲಿ ವೆಸ್ಟ್ ಇಂಡೀಸ್​ ಅನ್ನು ಸೋಲಿಸಲಿದೆ. ಏಕೆಂದರೆ ಅದು ದುರ್ಬಲ ತಂಡ. ನೀವು ಅವರನ್ನು 3-0 ಅಥವಾ 4-10 ಅಂತರದಿಂದಲೇ ಸೋಲಿಸುತ್ತೀರಿ. ಹೀಗೆ ದುರ್ಬಲ ತಂಡಗಳನ್ನು ಸೋಲಿಸಿದ ಮಾತ್ರಕ್ಕೆ ನೀವು ಶ್ರೇಷ್ಠ ತಂಡವಾಗಲ್ಲ ಎಂದು ಗವಾಸ್ಕರ್ ಹೇಳಿದ್ದರು.ಇದೀಗ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧದ ಪ್ರವಾಸಕ್ಕಾಗಿ ಸಜ್ಜಾಗುತ್ತಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಗೆಲ್ಲುವುದು ಖಚಿತ ಎಂದು ಈಗಾಗಲೇ ಗವಾಸ್ಕರ್ ಭವಿಷ್ಯ ನುಡಿದಿದ್ದಾರೆ. 
ಆದರೆ ಒಂದು ತಂಡ ಶ್ರೇಷ್ಠ ಎನಿಸಿಕೊಳ್ಳುವುದು ದುರ್ಬಲ ತಂಡಗಳನ್ನು ಸೋಲಿಸಿಯಲ್ಲ, ಬದಲಾಗಿ ಬಲಿಷ್ಠ ತಂಡಕ್ಕೆ ಸೋಲುಣಿಸಿ ಎಂದು  ಟೀಮ್ ಇಂಡಿಯಾದ ಪ್ರದರ್ಶನವನ್ನು ಸುನಿಲ್ ಗವಾಸ್ಕರ್ ವಿಮರ್ಶಿಸಿದ್ದಾರೆ.

source https://tv9kannada.com/photo-gallery/cricket-photos/west-indies-is-a-weaker-team-team-india-beat-them-sunil-gavaskar-kannada-news-zp-600227.html

Leave a Reply

Your email address will not be published. Required fields are marked *