ವರದಿ ಮತ್ತು ಫೋಟೋ ಕೃಪೆ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ,(ಫೆ.24) : ಜಿ.ಮಲ್ಲಿಕಾರ್ಜುನಪ್ಪ, ಶ್ರೀಮತಿ ಹಾಲಮ್ಮ ಚಾರಿಟಿ ಪೌಂಡೇಷನ್ ಭೀಮಸಮುದ್ರ, ಜಿ.ಎಸ್.ಅನಿತ್‍ಕುಮಾರ್ ಅಭಿಮಾನಿ ಬಳಗ, ಲಯನ್ಸ್ ಕ್ಲಬ್, ಚಿತ್ರದುರ್ಗ, ಲಯನ್ಸ್ ಕ್ಲಬ್ ಭೀಮಸಮುದ್ರ, ಲೈಪ್‍ಲೈನ್ ಬ್ಲಡ್ ಬ್ಯಾಂಕ್ ದಾವಣಗೆರೆ, ಲಯನ್ಸ್ ಕ್ಲಬ್ ದಾವಣಗೆರೆ, ರೋಟರಿ ಕ್ಲಬ್, ಜಿಲ್ಲಾ ರಕ್ತನಿಧಿ ಕೇಂದ್ರ ಮತ್ತು ಆಕ್ಸಿಸ್ ಬ್ಯಾಂಕ್ ಇವುಗಳ ಸಹಯೋಗದೊಂದಿಗೆ ರೋಟರಿ ಬಾಲಭವನದಲ್ಲಿ ಶುಕ್ರವಾರ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್‍ರವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಬೃಹತ್ ರಕ್ತದಾನ ಶಿಬಿರ ಉದ್ಗಾಟಿಸಿ ಮಾತನಾಡುತ್ತ ರಕ್ತದಾನ ಅತ್ಯಂತ ಶ್ರೇಷ್ಠದಾನ. ರಕ್ತಕ್ಕೆ ಪರ್ಯಾಯ ಮತ್ತೊಂದಿಲ್ಲ. ಹಾಗಾಗಿ ಎಲ್ಲರೂ ಸ್ವಯಂಪ್ರೇರಣೆಯಿಂದ ರಕ್ತದಾನಕ್ಕೆ ಮುಂದಾಗಿ ಅಮೂಲ್ಯವಾದ ಜೀವ ಉಳಿಸಿ ಎಂದು ಜನತೆಯಲ್ಲಿ ಮನವಿ ಮಾಡಿದರು.
ಅಪಘಾತ, ಆಪರೇಷನ್, ಹೆರಿಗೆ ಇನ್ನು ಅನೇಕ ಸಂದರ್ಭಗಳಲ್ಲಿ ರಕ್ತ ಅತ್ಯವಶ್ಯಕವಾಗಿ ಬೇಕು. ಆದ್ದರಿಂದ ಪ್ರತಿಯೊಬ್ಬ ಆರೋಗ್ಯವಂತರು ರಕ್ತದಾನ ಮಾಡಿ. ರಕ್ತದಾನದಿಂದ ನಿಶ್ಯಕಿಯಾಗುತ್ತದೆಂಬ ತಪ್ಪು ಕಲ್ಪನೆ ಬೇಡ ಎಂದು ಹೇಳಿದರು.
ಶ್ರೀಮತಿ ಸವಿತ ಜಿ.ಎಸ್.ಅನಿತ್‍ಕುಮಾರ್, ಚಂದ್ರಿಕಾ ಲೋಕನಾಥ್, ನಂದಿ ನಾಗರಾಜ್, ವೆಂಕಟೇಶ್, ಶ್ಯಾಮಲ ಶಿವಪ್ರಕಾಶ್, ಮಹಡಿ ಶಿವಮೂರ್ತಿ, ತೇಜಸ್ವಿನಿ ಕಟ್ಟಿಮನಿ, ಉದಯಶಂಕರ್, ಚಂದ್ರಮೋಹನ್ ಇನ್ನು ಅನೇಕರು ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದರು.
ಎಪ್ಪತ್ತಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.
The post ಎಲ್ಲರೂ ಸ್ವಯಂಪ್ರೇರಣೆಯಿಂದ ರಕ್ತದಾನಕ್ಕೆ ಮುಂದಾಗಿ : ಗಾಯತ್ರಿ ಸಿದ್ದೇಶ್ವರ್ first appeared on Kannada News | suddione.
from ಚಿತ್ರದುರ್ಗ – Kannada News | suddione https://ift.tt/1eS4lnu
via IFTTT