ಶಿವಗಂಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ : ಗಿರೀಶ್ ನೇತೃತ್ವದ ಗುಂಪಿಗೆ ಜಯ.


ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 07 ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಶಿವಗಂಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಮುಂದಿನ 5 ವರ್ಷಕ್ಕೆ ಆಡಳಿತ ಮಂಡಲಿ ನಿರ್ದೆಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಎಸ್.ಆರ್. ಗಿರೀಶ್ ನೇತೃತ್ವ ಗುಂಪಿಗೆ ಭರ್ಜರಿ ಜಯ
ದೊರಕಿದೆ.
ಈ ಸಹಕಾರ ಸಂಘದಲ್ಲಿ 1001 ಜನ ಮತದಾರರಿದ್ದು ಚುನಾವಣೆಯಲ್ಲಿ 930 ಜನ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.
12 ಜನ ನಿರ್ದೆಶಕ ಸ್ಥಾನದಲ್ಲಿ ಮೂರು ಜನ ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ 9 ಜನ ನಿರ್ದೆಶಕರ ಸ್ಥಾನಕ್ಕೆ ಭಾನುವಾರ
ಚುನಾವಣೆ ನಡೆದಿದ್ದು, ಚುನಾವಣೆ ಕಣದಲ್ಲಿ 19 ಜನ ಸ್ಪರ್ಧೆ ಮಾಡಿದ್ದರು.
ಭಾನುವಾರ ನಡೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದವರಲ್ಲಿ ಸಾಲಗಾರರ ಕ್ಷೇತ್ರದಿಂದ ಕುಬೇರಪ್ಪ ದಗ್ಗೆ
(471),ಎಸ್.ಆರ್.ಗಿರೀಶ್(670),ಎ.ಎನ್.ಮೌನೇಶ್(466)ಜಿ.ಈ.ಶಶಿಧರ್(481)ಯು.ಎಂ.ವೀರಭದ್ರಪ್ಪ (446), ಸಾಲಗಾರರ
ಕ್ಷೇತ್ರದಲ್ಲಿ ಮಹಿಳಾ ಮೀಸಲು ಕ್ಷೇತ್ರದಲ್ಲಿ ಮಮತ(526)ವಿ.ಸುಜಾತ (507),ಸಾಲಗಾರರ ಕ್ಷೇತ್ರ ಪರಿಶಿಷ್ಟ ಪಂಗಡ ಮೀಸಲು
ಕ್ಷೇತ್ರದಿಂದ ಡಿ.ತಿಪ್ಪೇರುದ್ರಪ್ಪ (474),ಸಾಲಗಾರರ ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಎಸ್.ಮಹದೇವಪ್ಪ (533)
ಮತಗಳನ್ನು ಪಡೆದು ಇವರು ಆಯ್ಕೆಯಾಗಿದ್ದಾರೆ.
ಇದೇ ಸಹಕಾರ ಸಂಘದಲ್ಲಿ ಬಿಸಿಎಂ.ಬಿ ಕ್ಷೇತ್ರದಿಂದ ಹೆಚ್.ಯೋಗೀಶ್, ಬಿಸಿಎಂ.ಎ.ಕ್ಷೇತ್ರದಿಂದ ಆರ್. ಕರಿಯಪ್ಪ, ಹಾಗೂ
ಸಾಲಗಾರರಲ್ಲದ ಕ್ಷೇತ್ರದಿಂದ ಎಂ.ಬಸವರಾಜಪ್ಪ ಆವಿರೋಧವಾಗಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *