ನನಗೆ ಭಕ್ತಾದಿಗಳೇ ದೇವರು: ಡಾ. ಬಸವಪ್ರಭು ಸ್ವಾಮೀಜಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 8 : ನನ್ನನ್ನು ಸಮಾಜದವರು ಗುರುತಿಸಿ ಸನ್ಮಾನಿಸಿರುವುದು ಅತೀವ ಸಂತಸವನ್ನುಂಟು ಮಾಡಿದೆ. ನನಗೆ ಭಕ್ತಾದಿಗಳೇ ದೇವರು ಎಂದು ಡಾ. ಬಸವಪ್ರಭು ಸ್ವಾಮೀಜಿ ತಿಳಿಸಿದರು.

ಡಾ. ಬಸವಪ್ರಭು ಸ್ವಾಮೀಜಿಯವರು ಡಾ. ಸಣ್ಣರಾಮಪ್ಪ ಅವರ ಮಾರ್ಗದರ್ಶನದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರ
ಸಾಹಿತ್ಯ ಮತ್ತು ಸಂಸ್ಕøತಿ ವಿಷಯ ಮೇಲೆ ಪಿಎಚ್.ಡಿ. ಮಹಾಪ್ರಬಂಧವನ್ನು ಮಂಡಿಸಿದ ಹಿನ್ನಲೆಯಲ್ಲಿ ನಗರದ ನೀಲಕಂಠೇಶ್ವರ
ದೇವಸ್ಥಾನದಲ್ಲಿಂದು ವೀರಶೈವ ಸಮಾಜದ ವತಿಯಿಂದ ಕುವೆಂಪು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಗೆ ಭಾಜನರಾದ
ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಬಸವಪ್ರಭು ಸ್ವಾಮಿಗಳು, ಜೀವನದಲ್ಲಿ ಋಣಾನುಬಂಧ ಇರುತ್ತದೆ. ತಂದೆ, ತಾಯಿ,
ಗುರುಗಳ ಋಣ ಎಲ್ಲರಲ್ಲೂ ಇರುತ್ತೆ. ನನ್ನ ಗುರುಗಳನ್ನು ನಾನು ಯಾವತ್ತೂ ಮರೆಯುವುದಿಲ್ಲ. ಓದಲು ಮುರುಘಾಮಠಕ್ಕೆ ಬಂದೆ.
ನಂತರದಲ್ಲಿ ನನಗೆ ದಾವಣಗೆರೆ ವಿರಕ್ತಮಠದ ಜವಾಬ್ದಾರಿ ವಹಿಸಿದರು. ನಮ್ಮ ಪೂರ್ವಿಕರಿಗೆ ಶ್ರೀಮಠದ ಬಗ್ಗೆ ಅಪಾರ ಭಕ್ತಿ ಇತ್ತು.
ನನ್ನನ್ನು ಸಮಾಜದವರು ಗುರುತಿಸಿ ಸನ್ಮಾನಿಸಿರುವುದು ಅತೀವ ಸಂತಸವನ್ನುಂಟು ಮಾಡಿದೆ. ನನಗೆ ಭಕ್ತಾದಿಗಳೇ ದೇವರು
ಎಂದು ಹೇಳಿದರು.

ವೀರಶೈವ ಸಮಾಜದ ಅಧ್ಯಕ್ಷ ಹೆಚ್.ಎನ್. ತಿಪ್ಪೇಸ್ವಾಮಿ ಮಾತನಾಡಿದರು. ಎಸ್.ಜೆ.ಎಂ. ಬ್ಯಾಂಕ್‍ನ ಮ್ಯಾನೇಜರ್ ಟಿ.ಕೆ.
ರಾಜಶೇಖರ್, ವೈಜ್ಞಾನಿಕ ಪರಿಷತ್‍ನ ನಾಗರಾಜ್ ಸಂಗಮ್, ವಿವಿಧ ಸಂಘಟನೆಗಳು ಶ್ರೀಗಳನ್ನು ಸನ್ಮಾನಿಸಿದರು.

ಕಾರ್ಯದರ್ಶಿ ಪಿ.ವೀರೇಂದ್ರಕುಮಾರ್, ಸಹಕಾರ್ಯದರ್ಶಿ ಜಿತೇಂದ್ರ ಎನ್.ಹುಲಿಕುಂಟೆ, ನಿರ್ದೇಶಕರಾದ ಎಸ್.ವಿ. ನಾಗರಾಜಪ್ಪ
ಸಿದ್ದಾಪುರ, ಡಿ.ಎಸ್. ಮಲ್ಲಿಕಾರ್ಜುನ, ಎಸ್. ಷಡಾಕ್ಷರಯ್ಯ, ಎಸ್.ವಿ.ಕೊಟ್ರೇಶ್, ಡಿ.ವಿ.ಎಸ್. ಪ್ರದೀಪ್, ಕೆ.ಎನ್. ವಿಶ್ವನಾಥಯ್ಯ,
ನಿರಂಜನ ದೇವರಮನೆ, ಚಿನ್ಮಯಾನಂದ, ಶ್ರೀಮತಿ ಲತಾ ಉಮೇಶ್, ದಾವಣಗೆರೆ ಟ್ರಸ್ಟಿಗಳು ಇದ್ದರು. ಜಿತೇಂದ್ರ ಎನ್.ಹುಲಿಕುಂಟೆ
ಸ್ವಾಗತಿಸಿದರು.

Leave a Reply

Your email address will not be published. Required fields are marked *