Gold Price Today, 16 August 2023 :ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿತದ ಪರಿಣಾಮ ದೇಶಿಯ ಮಾರುಕಟ್ಟೆಯಲ್ಲೂ ಕಾಣುತ್ತಿದೆ. ವಾರದ ಮೂರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.

Gold Price Today 16 August 2023 : ಚಿನ್ನದ ಬೆಲೆ ನಿರಂತರವಾಗಿ ಕುಸಿಯುತ್ತಲೇ ಇದೆ. ವಾರದ ಮೂರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX ಚಿನ್ನದ ಬೆಲೆ) ಚಿನ್ನದ ಬೆಲೆ ಇಂದು 58,900ಕ್ಕಿಂತ ಕಡಿಮೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿತದ ಪರಿಣಾಮ ದೇಶಿಯ ಮಾರುಕಟ್ಟೆಯಲ್ಲೂ ಕಾಣುತ್ತಿದೆ.
10 ಗ್ರಾಂ ಚಿನ್ನದ ಬೆಲೆ :
ಇಂದು, ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ಶೇಕಡಾ 0.19 ರಷ್ಟು ಇಳಿಕೆಯಾಗಿ 58,862 ರೂಪಾಯಿಗಳಲ್ಲಿ ವಹಿವಾಟು ನಡೆಸುತ್ತಿದೆ. ಇದಲ್ಲದೇ ಬೆಳ್ಳಿಯ ದರವು ಶೇ.0.09 ರಷ್ಟು ಏರಿಕೆಯೊಂದಿಗೆ ಪ್ರತಿ ಕೆಜಿಗೆ 70,020 ರೂ. ಯಲ್ಲಿ ಸಾಗುತ್ತಿದೆ.
22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು? :
ಇನ್ನು 22 ಕ್ಯಾರೆಟ್ ಚಿನ್ನದ ಬಗ್ಗೆ ಮಾತನಾಡುವುದಾದರೆ, ದೇಶದ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 54,700 ರೂ., ಮುಂಬೈ -54,550 ರೂ., ಕೋಲ್ಕತ್ತಾ – ರೂ. 54,550, ಲಕ್ನೋ – ರೂ. 55,700, ಬೆಂಗಳೂರು – ರೂ. 54,550, ಜೈಪುರ – ರೂ. 54,700, ಪಾಟ್ನಾ 54 – ರೂ. ಹೈದರಾಬಾದ್‌ನಲ್ಲಿ 54,550 ಮತ್ತು ಭುವನೇಶ್ವರದಲ್ಲಿ 54,550 ರೂ. ಆಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಎಷ್ಟು?:
ಅಂತರಾಷ್ಟ್ರೀಯ ಮಾರುಕಟ್ಟೆಯ ಬಗ್ಗೆ ಮಾತನಾಡುವುದಾದರೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆ ದಾಖಲಾಗುತ್ತಿದೆ. ಇಂದು ಕಾಮ್ಯಾಕ್ಸ್‌ನಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್ಗೆ 1935 ಡಾಲರ್ ಮಟ್ಟದಲ್ಲಿದೆ. ಬೆಳ್ಳಿಯ ಬೆಲೆ ಪ್ರತಿ ಔನ್ಸ್ಗೆ 22.63 ಡಾಲರ್ ಆಗಿದೆ. ಜಾಗತಿಕ ಮಾರುಕಟ್ಟೆಯಲ್ಲಿಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ನಿರಂತರ ಕುಸಿತ ಕಂಡುಬರುತ್ತಿದೆ.
ಚಿನ್ನ ನಿಜವೇ ಅಥವಾ ನಕಲಿಯೇ ಎಂಬುದನ್ನು ಪರಿಶೀಲಿಸುವುದು ಹೇಗೆ ? :
ಚಿನ್ನವನ್ನು ಖರೀದಿಸುವ ವೇಳೆ ಹಾಲ್‌ಮಾರ್ಕ್ ನೋಡಿದ ನಂತರವೇ ಚಿನ್ನವನ್ನು ಖರೀದಿಸಿ. ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ನೀವು ಸರ್ಕಾರಿ ಅಪ್ಲಿಕೇಶನ್ ಅನ್ನು ಸಹ ಬಳಸಬಹುದು. ‘ಬಿಐಎಸ್ ಕೇರ್ ಆ್ಯಪ್’ ಮೂಲಕ ಚಿನ್ನದ ಅಸಲಿಯೇ ನಕಲಿಯೇ ಎಂಬುದನ್ನು ಪರಿಶೀಲಿಸಬಹುದು. ಇದಲ್ಲದೇ ಈ ಆಪ್ ಮೂಲಕ ದೂರು ಕೂಡಾ ನೀಡಬಹುದು.
Source : https://zeenews.india.com/kannada/business/gold-price-down-today-kno-latest-rate-152471
Views: 0