ಯುಗಾದಿ ದಿನ ಈ ವಸ್ತುಗಳನ್ನು ಮನೆಗೆ ತನ್ನಿ, ಅದೃಷ್ಟ ನಿಮ್ಮದಾಗುತ್ತದೆ!

ಯುಗಾದಿ ಹಿಂದೂಗಳಿಗೆ ಮಾತ್ರವಲ್ಲ, ಹಿಂದೂಸ್ತಾನದ ಎಲ್ಲರಿಗೂ ಸಂಭ್ರಮದ ಹಬ್ಬ. ಅಂದು ಬ್ರಹ್ಮ ವಿಶ್ವವನ್ನು ಸೃಷ್ಟಿಸಿದನು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಅಲ್ಲದೆ ಈ ದಿನ ರಾಮನಿಗೆ ಪಟ್ಟಾಭಿಷೇಕ ಮಾಡಲಾಯಿತು ಎಂದೂ ಕಥೆಗಳು ಹೇಳುತ್ತವೆ. ಈ ಯುಗಾದಿ ಹಬ್ಬದಂದು ಮನೆಗೆ ಏನನ್ನು ತಂದರೆ ಅದೃಷ್ಟ ಖುಲಾಯಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?

ಯುಗಾದಿ ಹಬ್ಬದಂದು ಕೆಲವು ವಸ್ತುಗಳನ್ನು ಮನೆಗೆ ತಂದರೆ ಅದೃಷ್ಟ ಸೂರ್ಯನಂತೆ ಹೊಳೆಯುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಸಿಗುತ್ತದೆ ಎಂದು ಜ್ಯೋತಷ್ಯಜ್ಞರು ಹೇಳುತ್ತಾರೆ. ಗೊತ್ತಿಲ್ಲದಿದ್ದರೆ ಇಲ್ಲಿದೆ ನೋಡಿ. ಏನು ತಂದರೆ ಏನು ಲಾಭ ಎಂಬುದನ್ನು ಈಗ ತಿಳಿಯೋಣ ಬನ್ನಿ.

ಬೇವು- ಬೆಲ್ಲ
ಇದಂತೂ ನಿಮಗೆ ಗೊತ್ತೇ ಇರುವಂಥದು. ಅಂದು ಬೇವು ಹಾಗೂ ಬೆಲ್ಲವನ್ನು ತಂದು ನೀವೂ ತಿನ್ನುವುದಲ್ಲದೆ, ಇತರರಿಗೂ ಹಂಚಿ. ಬಾಳಿನಲ್ಲಿ ಸಿಹಿ ಕಹಿ ಸಮಾನವಾಗಿ ಸ್ವೀಕರಿಸಬೇಕು ಎಂಬ ಮನೋಭಾವ ನಿಮ್ಮದಾಗುತ್ತದೆ. ಬೇವಿನಲ್ಲಿರುವ ಕ್ರಿಮಿನಾಶಕ ಗುಣ ನಿಮ್ಮನ್ನು ಆರೋಗ್ಯವಾಗಿಡುತ್ತದೆ.

ತೆಂಗಿನಕಾಯಿ
ಯುಗಾದಿ ಹಬ್ಬದ ದಿನದಂದು ಒಂದು ಸಣ್ಣ ತೆಂಗಿನಕಾಯಿಯನ್ನು ಮನೆಗೆ ತಂದು, ಅದನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ, ಎಚ್ಚರಿಕೆಯಿಂದ ಹಣ ಇಡುವ ಕಪಾಟಿನಲ್ಲಿ ಇಟ್ಟರೆ, ಅದು ಸಂಪತ್ತು, ಆರ್ಥಿಕ ಸಮೃದ್ಧಿ ಮತ್ತು ಮನೆಗೆ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.

ಕೂರ್ಮ
ಅಷ್ಟೇ ಅಲ್ಲ ಯುಗಾದಿಯ ದಿನದಂದು ಲೋಹದ ಆಮೆಯನ್ನು ಮನೆಗೆ ತಂದು ಮನೆಯಲ್ಲಿ ಇಡುವುದರಿಂದ ಅದೃಷ್ಟ ಹೆಚ್ಚಾಗಲಿದೆ. ವಿಶೇಷವಾಗಿ ಹಿತ್ತಾಳೆ ಆಮೆಯನ್ನು ತಂದರೆ ಮನೆಯಲ್ಲಿ ಎಲ್ಲಾ ಶುಭ ಕಾರ್ಯಗಳು ನಡೆಯುತ್ತವೆ. ಮನೆಯಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಮನೆಯಲ್ಲಿ ಸಂತೋಷ ಮತ್ತು ಶಾಂತಿ ಹರಡುತ್ತದೆ ಎಂದು ಹೇಳಲಾಗುತ್ತದೆ.

ಲಾಫಿಂಗ್‌ ಬುದ್ಧ
ಯುಗಾದಿ ಹಬ್ಬದ ದಿನದಂದು ಲಾಫಿಂಗ್ ಬುದ್ಧನ ವಿಗ್ರಹವನ್ನು ಮನೆಗೆ ತಂದು ಮನೆಯಲ್ಲಿ ಇಡುವುದು ಒಳ್ಳೆಯದು. ಲಾಫಿಂಗ್ ಬುದ್ಧನ ಪ್ರತಿಮೆಯನ್ನು ತಂದು ವಾಸ್ತು ಶಾಸ್ತ್ರದ ಪ್ರಕಾರ ಸರಿಯಾದ ಸ್ಥಳದಲ್ಲಿ ಇಡುವುದರಿಂದ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ ಎಂದು ಹೇಳಲಾಗುತ್ತದೆ. ನಗುವ ಬುದ್ಧನ ಪ್ರತಿಮೆಯನ್ನು ಮನೆಗೆ ತರುವುದರಿಂದ ಸಂತೋಷ ಹೆಚ್ಚಾಗಲಿದೆ ಮತ್ತು ಮನೆಯಲ್ಲಿ ಹಣದ ಕೊರತೆ ಉಂಟಾಗುವುದಿಲ್ಲ.

ತುಳಸಿ
ಯುಗಾದಿ ಹಬ್ಬದ ದಿನದಂದು ತುಳಸಿ ಗಿಡವನ್ನು ತಂದು ಮನೆಯಲ್ಲಿ ಇಡುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರ ಸಸ್ಯವೆಂದು ಪೂಜಿಸಲಾಗುತ್ತದೆ. ವಿಷ್ಣುವಿನ ಪ್ರಿಯವಾದ ತುಳಸಿಯನ್ನು ಲಕ್ಷ್ಮಿಯ ಒಂದು ರೂಪವೆಂದು ಪರಿಗಣಿಸಲಾಗುತ್ತದೆ. ಅಂತಹ ತುಳಸಿ ಗಿಡವನ್ನು ಮನೆಯಲ್ಲಿ ಇಟ್ಟರೆ, ಮನೆಯಾದ್ಯಂತ ಸಕಾರಾತ್ಮಕತೆ ಹರಡುತ್ತದೆ ಮತ್ತು ಮನೆಯಲ್ಲಿರುವ ಎಲ್ಲರೂ ಸಂತೋಷ ಮತ್ತು ಸಂತೃಪ್ತರಾಗುತ್ತಾರೆ ಎಂದು ಹೇಳಲಾಗುತ್ತದೆ. ಆದ್ದರಿಂದ ಯುಗಾದಿಯ ದಿನದಂದು ತುಳಸಿ ಗಿಡವನ್ನು ತಂದು ನೆಡುವುದು ಒಳ್ಳೆಯದು.

ದಕ್ಷಿಣಮುಖಿ ಶಂಖ
ಯುಗಾದಿಯಂದು ಮನೆಗೆ ದಕ್ಷಿಣವರ್ತಿ ಶಂಖವನ್ನು ತರುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಮನೆಯಲ್ಲಿ ಹಣದ ಹರಿವು ಚೆನ್ನಾಗಿರಲು, ಶಂಖವನ್ನು ತಂದು ಪೂಜಿಸಿ, ಹಣ ಇಡುವ ಸ್ಥಳದಲ್ಲಿ ಇಡಬೇಕು. ಇದು ಶ್ರೀಮಂತರನ್ನಾಗಿ ಮಾಡುತ್ತದೆ.

ನವಿಲು ಮೂರ್ತಿ
ಯುಗಾದಿಯ ದಿನದಂದು ನೀವು ಮೂರು ನವಿಲುಗಳ ವಿಗ್ರಹವನ್ನು ತಂದು ನಿಮ್ಮ ಮನೆಯಲ್ಲಿ ಇಟ್ಟರೆ ಅದೃಷ್ಟ ಬರುತ್ತದೆ ಎಂದು ಹೇಳಲಾಗುತ್ತದೆ. ಶ್ರೀಕೃಷ್ಣನಿಗೆ ಹಾಗೇ ಲಕ್ಷ್ಮಿ ದೇವಿಗೆ ನವಿಲುಗಳು ತುಂಬಾ ಇಷ್ಟ, ಆದ್ದರಿಂದ ನವಿಲುಗಳನ್ನು ಸಾಕಿರುವ ಮನೆಯಲ್ಲಿ ಲಕ್ಷ್ಮಿ ದೇವಿಯು ವಾಸಿಸುತ್ತಾಳೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *