- ಇನ್ಮುಂದೆ ಗಣಿತ ಮತ್ತು ವಿಜ್ಞಾನ ಪರೀಕ್ಷೆಯೆಂದು ಭಯಪಡಬೇಕಾಗಿಲ್ಲ.
- ಉತ್ತೀರ್ಣ ಅಂಕವನ್ನು 35ರಿಂದ 20ಕ್ಕೆ ಇಳಿಸಿದ ಪ್ರೌಢ ಶಿಕ್ಷಣ ಇಲಾಖೆ.
- ಗಣಿತ ಮತ್ತು ವಿಜ್ಞಾನ ಪರೀಕ್ಷೆಯಲ್ಲಿ ಪಾಸ್ ಮಾರ್ಕ್ 20 ಬಂದ್ರೆ ಸಾಕು.
ಮಹಾರಾಷ್ಟ್ರ: ವಿದ್ಯಾರ್ಥಿಗಳ ಜೀವನದಲ್ಲಿ 10ನೇ ತರಗತಿ ಎಂಬುದು ಮಹತ್ವದ ಘಟ್ಟ. ಬಹುತೇಕರು ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕ ಬರಲು ಶ್ರಮಿಸುತ್ತಾರೆ. ಇನ್ನು ಕೆಲವರು ಪಾಸಿಂಗ್ ಮಾರ್ಕ್ಗಾಗಿ ಕಷ್ಟಪಡುತ್ತಾರೆ. ಆದರೀಗ ಪಾಸಿಂಗ್ ಮಾರ್ಕ್ಗಾಗಿ ಕಷ್ಟಪಡುವ ವಿದ್ಯಾರ್ಥಿಗಳಿಗೆ ಮಹಾರಾಷ್ಟ್ರ ಶಿಕ್ಷಣ ಇಲಾಖೆ ಸಿಹಿ ಸುದ್ದಿ ನೀಡಿದೆ.
ಕೆಲವು ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನವೆಂದಾಗ ಹಿಂದೇಟು ಹಾಕುವುದು ಜಾಸ್ತಿ. ಇವೆರಡು ತುಸು ಕಷ್ಟದ ವಿಷಯವೆಂದು ಓದಲು ಕಷ್ಟಪಡುತ್ತಿರುತ್ತಾರೆ. ಇನ್ನು ಕೆಲವರು ಪಾಸ್ ಮಾರ್ಕ್ಗಾಗಿ ಮಾತ್ರ ಓದುತ್ತಾರೆ. ಆದರೀಗ ಮಹಾರಾಷ್ಟ್ರ ಸ್ಟೇಟ್ ಫಾರ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಟ್ರೈನಿಂಗ್ (SCERT) 10ನೇ ತರಗತಿ ಪರೀಕ್ಷೆಯ ಪಾಸಿಂಗ್ ಮಾರ್ಕ್ ಅನ್ನು 35 ರಿಂದ 20 ಮಾರ್ಕ್ಗೆ ಇಳಿಸಿದೆ. 10ನೇ ತರಗತಿ ಹೊಸ ರಾಜ್ಯ ಪಠ್ಯಕ್ರಮದ ಚೌಕಟ್ಟು- ಶಾಲಾ ಶಿಕ್ಷಣದಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದೆ.
ಮಹಾರಾಷ್ಟ್ರ ರಾಜ್ಯ ಪ್ರೌಢ ಮತ್ತು ಉನ್ನತ ಮಾಧ್ಯಮಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಶರದ್ ಗೋಸಾವಿ, ಹೊಸ ಪಠ್ಯಕ್ರಮವನ್ನು ಜಾರಿಗೊಳಿಸುವ ಮೂಲಕ ಉತ್ತೀರ್ಣ ಅಂಕಗಳಲ್ಲಿ ಬದಲಾವಣೆ ತರುವ ಬಗ್ಗೆ ತಿಳಿದ್ದರು. ಅದರಂತೆಯೇ ಇದೀಗ 10ನೇ ತರಗತಿಯವರಿಗಾಗಿ ಉತ್ತೀರ್ಣ ಅಂಕವನ್ನು 20ಕ್ಕೆ ಇಳಿಸಿದ್ದಾರೆ.
ಒಂದು ವೇಳೆ ಕಡಿಮೆ ಅಂಕದ ಮೂಲದ ಅನುತ್ತೀರ್ಣರಾದರೆ, ಆಸಕ್ತಿಯ ಕೋರ್ಸ್ಗಳನ್ನು ಕೈಬಿಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಉತ್ತೀರ್ಣ ಅಂಕವನ್ನು 35ರಿಂದ 20ಕ್ಕೆ ಇಳಿಸಲಾಗಿದೆ.