ರಾಮ ಭಕ್ತರಿಗೆ ಗುಡ್‌ ನ್ಯೂಸ್‌..! 9 ದಿನಗಳ ಅಯೋಧ್ಯಾ ಪ್ರವಾಸದ ಪ್ಯಾಕೇಜ್ ಅತೀ ಕಡಿಮೆ ಬೆಲೆಗೆ..!

  • IRCTC 9 ದಿನಗಳ ಅಯೋಧ್ಯೆ ಪ್ರವಾಸದ ಪ್ಯಾಕೇಜ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುತ್ತಿದೆ.
  • IRCTC ವೆಬ್‌ಸೈಟ್ irctctourism.com ಮೂಲಕ ಈ ಪ್ರವಾಸದ ಪ್ಯಾಕೇಜ್‌ಗಾಗಿ ಬುಕಿಂಗ್ ಮಾಡಬಹುದು.
  • ನಿಮ್ಮ ಬಜೆಟ್‌ಗೆ ಅನುಗುಣವಾಗಿ ರೈಲಿನಲ್ಲಿ ಸ್ಲೀಪರ್ ಕ್ಲಾಸ್, ಸೆಕೆಂಡ್ ಎಸಿ, ಥರ್ಡ್ ಎಸಿ ಆಯ್ಕೆ ಮಾಡಬಹುದು.

IRCTC Bumper Offer: ನೀವು ಬೇಸಿಗೆಯಲ್ಲಿ ಅಯೋಧ್ಯೆ ಪ್ರವಾಸವನ್ನ ಕೈಗೊಳ್ಳಲು ಯೋಜಿಸುತ್ತಿದ್ದೀರಾ? ಹಾಗಾದರೆ ನಿಮಗೊಂದು ಗುಡ್‌ ನ್ಯೂಸ್‌.. IRCTC 9 ದಿನಗಳ ಅಯೋಧ್ಯೆ ಪ್ರವಾಸದ ಪ್ಯಾಕೇಜ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುತ್ತಿದೆ. ಈ ಪ್ಯಾಕೇಜ್ 9 ದಿನಗಳು ಮತ್ತು 8 ರಾತ್ರಿಗಳದ್ದಾಗಿರುತ್ತದೆ. ಈ ಪ್ಯಾಕೇಜ್‌ನಲ್ಲಿ ನೀವು ಪುರಿ, ಗಯಾ, ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್‌ರಾಜ್‌ಗೆ ಭೇಟಿ ನೀಡುವ ಅವಕಾಶವನ್ನು ಕೂಡ ಪಡೆಯಬಹುದು. ಪ್ಯಾಕೇಜ್‌ನ ಆರಂಭಿಕ ಬೆಲೆ ಕೇಲವ 15,100 ರೂಪಾಯಿಗಳು ಮಾತ್ರ.

ಈ ಪ್ಯಾಕೇಜ್ ಸಿಕಂದರಾಬಾದ್‌ನಿಂದ ಆರಂಭವಾಗಲಿದೆ. ಇದರಲ್ಲಿ ನೀವು ಭಾರತ್ ಗೌರವ್ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸುವ ಅವಕಾಶವನ್ನು ಪಡೆಯುತ್ತೀರಿ. ಈ ಪ್ಯಾಕೇಜ್‌ನೋಳಗೆ ಆಹಾರದ ಸೌಲಭ್ಯ ಕೂಡ ನೀಡಲಾಗುತ್ತದೆ. ಅದು ಅಲ್ಲದೇ ಇದೇ ಮಾರ್ಚ್ 23 ರಿಂದ ಪ್ರವಾಸ ಆರಂಭವಾಗಲಿದ್ದು, ಈಗಾಗಲೇ ಬುಕ್ಕಿಂಗ್ ಆರಂಭವಾಗಿದೆ. IRCTC ವೆಬ್‌ಸೈಟ್ irctctourism.com ಮೂಲಕ ಈ ಪ್ರವಾಸದ ಪ್ಯಾಕೇಜ್‌ಗಾಗಿ ಬುಕಿಂಗ್ ಮಾಡಬಹುದು.

ಪ್ರವಾಸದ ಪ್ಯಾಕೇಜ್ 

ಪ್ಯಾಕೇಜ್ ಹೆಸರು- ಪುಣ್ಯ ಕ್ಷೇತ್ರ ಯಾತ್ರೆ: ಪುರಿ-ಕಾಶಿ-ಅಯೋಧ್ಯೆ (SCZBG20)

ಯಾವ ಸ್ಥಳಗಳು- ಪುರಿ, ಕೋನಾರ್ಕ್, ಗಯಾ, ವಾರಣಾಸಿ, ಅಯೋಧ್ಯೆ, ಪ್ರಯಾಗ್ರಾಜ್

ಪ್ರವಾಸವು ಎಷ್ಟು ದಿನಗಳು – 8 ರಾತ್ರಿಗಳು, 9 ದಿನಗಳು

ನಿರ್ಗಮನ ದಿನಾಂಕ – ಮಾರ್ಚ್ 23, 2024

ಆಹಾರ – ಬೆಳಿಗ್ಗೆ ಚಹಾ, ಉಪಹಾರ, ಮಧ್ಯಾಹ್ನ, ರಾತ್ರಿಯ ಊಟ

ಪ್ರಯಾಣದ ವಿಧಾನ – ರೈಲು

ಡಿಬೋರ್ಡಿಂಗ್ ಸ್ಟೇಷನ್‌ಗಳು- ಸಿಕಂದರಾಬಾದ್, ಕಾಜಿಪೇಟ್, ಖಮ್ಮಂ, ವಿಜಯವಾಡ, ಎಲೂರು, ರಾಜಮಂಡ್ರಿ, ಸಾಮರ್ಲಕೋಟ, ಪೆಂಡುರ್ತಿ, ವಿಜಯನಗರಂ.

ಪ್ಯಾಕೇಜ್‌ನ ಭಾಗವಾದ ಸ್ಥಳಗಳು

ಪುರಿ: ಜಗನ್ನಾಥ ದೇವಾಲಯ, ಕೋನಾರ್ಕ್ ಸೂರ್ಯ ದೇವಾಲಯ.

ಗಯಾ: ವಿಷ್ಣುಪಾದ ದೇವಾಲಯ.

ವಾರಣಾಸಿ: ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಕಾರಿಡಾರ್, ಕಾಶಿ ವಿಶಾಲಾಕ್ಷಿ ಮತ್ತು ಅನ್ನಪೂರ್ಣ ದೇವಿ ದೇವಸ್ಥಾನ. ಸಂಜೆ ಗಂಗಾ ಆರತಿ

ಅಯೋಧ್ಯೆ: ರಾಮಜನ್ಮಭೂಮಿ, ಹನುಮಾನ್‌ಗರ್ಹಿ ಮತ್ತು ಸರಯೂ ನದಿಯಲ್ಲಿ ಆರತಿ.

ಪ್ರಯಾಗ್ರಾಜ್: ತ್ರಿವೇಣಿ ಸಂಗಮ.

ಶುಲ್ಕ ಎಷ್ಟು ಇರುತ್ತದೆ?

ನಿಮ್ಮ ಬಜೆಟ್‌ಗೆ ಅನುಗುಣವಾಗಿ ರೈಲಿನಲ್ಲಿ ಸ್ಲೀಪರ್ ಕ್ಲಾಸ್, ಸೆಕೆಂಡ್ ಎಸಿ, ಥರ್ಡ್ ಎಸಿ ಆಯ್ಕೆ ಮಾಡಬಹುದು. ಅದರಂತೆ, ನಿಮ್ಮ ಪ್ಯಾಕೇಜ್ ದರವೂ ಬದಲಾಗುತ್ತದೆ. ನೀವು ಎಕಾನಮಿ ಕ್ಲಾಸ್‌ನಲ್ಲಿ (ಸ್ಲೀಪರ್) ಪ್ರಯಾಣಿಸಿದರೆ ನೀವು ರೂ.15,100 ಪಾವತಿಸಬೇಕು. ಕಂಫರ್ಟ್ ಕ್ಲಾಸ್ (ಥರ್ಡ್ ಎಸಿ) ಪ್ಯಾಕೇಜ್‌ಗೆ ಪ್ರತಿ ವ್ಯಕ್ತಿಗೆ 24,000 ರೂ. ಆದರೆ ಕಂಫರ್ಟ್ ಕ್ಲಾಸ್ (ಸೆಕೆಂಡ್ ಎಸಿ)ಗೆ ನೀವು ರೂ. 31,400 ಖರ್ಚು ಮಾಡಬೇಕಾಗುತ್ತದೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *