ಎಸ್‌ ಎಲ್‌ ವಿ ಪಿ.ಯು. ಕಾಲೇಜಿಗೆ ಉತ್ತಮ ಫಲಿತಾಂಶ

 

ಚಿತ್ರದುರ್ಗ, (ಏ.21) : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ದೇವರಾಜ್‌ ಅರಸ್‌ ಶಿಕ್ಷಣ ಸಂಸ್ಥೆಯ ಅಂಗಸಂಸ್ಥೆಯಾದ ಎಸ್ ಎಲ್‌ ವಿ ಪಿ.ಯು. ಕಾಲೇಜು ಜಿಲ್ಲೆಯಲ್ಲಿ ಪದವಿಪೂರ್ವ ಶಿಕ್ಷಣಕ್ಕೆ ಹೆಸರುವಾಸಿಯಾದ ಕಾಲೇಜಾಗಿದ್ದು, 2023ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ. 96ರಷ್ಟು ಫಲಿತಾಂಶವನ್ನು ಪಡೆದುಕೊಂಡು ಅಭೂತಪೂರ್ವ ಸಾಧನೆಗೈದಿದೆ.

ಅತ್ಯುನ್ನತ ದರ್ಜೆಯಲ್ಲಿ 20 ವಿದ್ಯಾರ್ಥಿಗಳು ಹಾಗೂ ಪ್ರಥಮ ದರ್ಜೆಯಲ್ಲಿ 84 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಐಶ್ವರ್ಯ.ಕೆ., 582 ಅಂಕಗಳನ್ನು ಗಳಿಸಿಕೊಂಡು ಮೊದಲ ಸ್ಥಾನದಲ್ಲಿದ್ದಾರೆ.

ಭರತ್‌ ಸಾಗರ್‌ 560 ಅಂಕಗಳನ್ನು ಗಳಿಸಿ, ದ್ವಿತೀಯ ಸ್ಥಾನ, ಆದಿತ್ಯ ಡಿ. ಹಾಗೂ ನವ್ಯಾ ರೆಡ್ಡಿ ಇಬ್ಬರೂ ತಲಾ 545 ಅಂಕಗಳನ್ನು ಗಳಿಸಿ ತೃತೀಯ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಹೇಮಶ್ರೀ 568 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಗಳಿಸಿದ್ದರೆ, ಮೊಹಮ್ಮದ್‌ ಸುಹೇಲ್‌ 555 ಅಂಕಗಳು ಹಾಗೂ ಆಯೀಷಾ ಖಾನ್‌ 554 ಅಂಕಗಳನ್ನು ಗಳಿಸಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಗಳಿಸಿದ್ದಾರೆ.

ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಎಂ ಚಂದ್ರಪ್ಪ, ಆಡಳಿತಾಧಿಕಾರಿಗಳಾದ ಶ್ರೀಮತಿ ಚಂದ್ರಕಲಾ.ಹೆಚ್.‌, ಸಿ.ಇ.ಓ ಆದ ಎಂ.ಸಿ.ರಘುಚಂದನ್‌ ಹಾಗೂ ಪ್ರಾಚಾರ್ಯರಾದ ಬಿ.ಎ.ಕೊಟ್ರೇಶ್‌ ರವರು ಅಭಿನಂದಿಸಿದ್ದಾರೆ.

The post ಎಸ್‌ ಎಲ್‌ ವಿ ಪಿ.ಯು. ಕಾಲೇಜಿಗೆ ಉತ್ತಮ ಫಲಿತಾಂಶ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/8xYP3yB
via IFTTT

Views: 0

Leave a Reply

Your email address will not be published. Required fields are marked *