ಯೂಟ್ಯೂಬ್ ವೀಡಿಯೊಗಳ ಬಗ್ಗೆ ನೀವು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಬಾರ್ಡ್ ಅಪ್ಡೆಟ್ ಅನ್ನು ಗೂಗಲ್ ಬಿಡುಗಡೆ ಮಾಡಿದೆ.

ನವದೆಹಲಿ: ಗೂಗಲ್ ಎಐ ಚಾಟ್ಬಾಟ್ ಬಾರ್ಡ್ ಇನ್ನು ಮುಂದೆ ಯೂಟ್ಯೂಬ್ ಬಗ್ಗೆ ನೀವು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಿದೆ. ನಿರ್ದಿಷ್ಟ ಯೂಟ್ಯೂಬ್ ವೀಡಿಯೊ ಬಗ್ಗೆ ನೀವು ಬಾರ್ಡ್ಗೆ ಪ್ರಶ್ನೆ ಕೇಳಬಹುದು ಮತ್ತು ವೀಡಿಯೊದಲ್ಲಿ ಏನಿದೆ ಎಂಬ ಬಗ್ಗೆ ಮಾಹಿತಿ ಪಡೆಯಬಹುದು.
ಗೂಗಲ್ ಈಗಾಗಲೇ ಬಾರ್ಡ್ನ ಈ ಹೊಸ ಅಪ್ಡೇಟ್ ಬಿಡುಗೆ ಮಾಡಲಾರಂಭಿಸಿದೆ.
“ಬಾರ್ಡ್ಗೆ ಯೂಟ್ಯೂಬ್ ವೀಡಿಯೊಗಳನ್ನು ಅರ್ಥಮಾಡಿಸುವ ಪ್ರಯತ್ನದಲ್ಲಿ ನಾವು ಮೊದಲ ಹೆಜ್ಜೆಗಳನ್ನು ಇಡುತ್ತಿದ್ದೇವೆ” ಎಂದು ಗೂಗಲ್ ಬಾರ್ಡ್ನ ಅಪ್ಡೇಟ್ ಪೇಜ್ನಲ್ಲಿ ಬರೆಯಲಾಗಿದೆ.
“ಉದಾಹರಣೆಗೆ, ನೀವು ಆಲಿವ್ ಆಯಿಲ್ನ ಕೇಕ್ ಅನ್ನು ಹೇಗೆ ತಯಾರಿಸುವುದು ಎಂಬುದರ ಕುರಿತು ವೀಡಿಯೊಗಳನ್ನು ಹುಡುಕುತ್ತಿದ್ದರೆ, ಮೊದಲ ವೀಡಿಯೊದಲ್ಲಿನ ರೆಸಿಪಿಯಲ್ಲಿ ಎಷ್ಟು ಮೊಟ್ಟೆಗಳನ್ನು ಬಳಸಲಾಗಿದೆ ಎಂದು ನೀವು ಈಗ ಕೇಳಬಹುದು” ಎಂದು ಅದು ವಿವರಿಸಿದೆ. “ಕೆಲ ವೀಡಿಯೊ ಕಂಟೆಂಟ್ಗಳನ್ನು ಅರ್ಥಮಾಡಿಕೊಳ್ಳಲು ಯೂಟ್ಯೂಬ್ ಎಕ್ಸ್ಟೆನ್ಷನ್ ಅನ್ನು ವಿಸ್ತರಿಸಲಾಗಿದೆ. ಇದರಿಂದ ನೀವು ಬಾರ್ಡ್ನೊಂದಿಗೆ ಸಹಜವಾಗಿ ಸಂಭಾಷಣೆ ನಡೆಸಬಹುದು” ಎಂದು ಕಂಪನಿ ಹೇಳಿದೆ.
ಈ ಅಪ್ಡೇಟ್ ಬರುವುದಕ್ಕಿಂತ ಮೊದಲು ಬಾರ್ಡ್ ಯೂಟ್ಯೂಬ್ ಎಕ್ಸ್ಟೆನ್ಷನ್ ಮೂಲಕ ಕೆಲ ನಿರ್ದಿಷ್ಟ ವೀಡಿಯೊಗಳನ್ನು ಮಾತ್ರ ಹುಡುಕಬಹುದಾಗಿತ್ತು. ಯೂಟ್ಯೂಬ್ನ ಕಂಟೆಂಟ್ ಬಗ್ಗೆ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸುವಾಗ ಕಂಟೆಂಟ್ನ ಸಾರಾಂಶವನ್ನು ಕೂಡ ಹೇಳುವ ಹೊಸ ಬಾರ್ಡ್ ವೈಶಿಷ್ಟ್ಯಗಳನ್ನು ತಯಾರಿಸಲು ಎರಡು ವಾರಗಳ ಹಿಂದೆ ಯೂಟ್ಯೂಬ್ ಪ್ರಯತ್ನಗಳನ್ನು ನಡೆಸಿತ್ತು. ಸದ್ಯ ಆ ಅಪ್ಡೇಟ್ ಅನ್ನು ಗೂಗಲ್ ಬಿಡುಗಡೆ ಮಾಡಿದೆ. ಏತನ್ಮಧ್ಯೆ, ಮತ್ತಷ್ಟು ದೇಶಗಳಲ್ಲಿ ಹದಿಹರೆಯದವರಿಗೆ ಬಾರ್ಡ್ ಲಭ್ಯವಾಗುವಂತೆ ಮಾಡುವುದಾಗಿ ಗೂಗಲ್ ಘೋಷಿಸಿದೆ.
“ತಮ್ಮ ಸ್ವಂತ ಗೂಗಲ್ ಖಾತೆಯನ್ನು ಬಳಸಲು ಕನಿಷ್ಠ ವಯಸ್ಸಿನ ಅಗತ್ಯವನ್ನು ಪೂರೈಸುವ ದೇಶಗಳಲ್ಲಿನ ಹದಿಹರೆಯದವರು ಇಂಗ್ಲಿಷ್ ಭಾಷೆಯಲ್ಲಿ ಬಾರ್ಡ್ ಅನ್ನು ಬಳಸಲು ಸಾಧ್ಯವಾಗಲಿದೆ. ಕಾಲಾನಂತರದಲ್ಲಿ ಹೆಚ್ಚಿನ ಭಾಷೆಗಳಿಗೆ ವಿಸ್ತರಿಸಲಾಗುವುದು” ಎಂದು ಗೂಗಲ್ನ ರೆಸ್ಪಾನ್ಸಿಬಲ್ ಎಐ ವಿಭಾಗದ ಉತ್ಪನ್ನ ಮುಖ್ಯಸ್ಥೆ ತುಳಸಿ ದೋಷಿ ಹೇಳಿದರು.
ಬಾರ್ಡ್ ಇದು ಗೂಗಲ್ನ ಪ್ರಾಯೋಗಿಕ ಸಂಭಾಷಣಾ ಎಐ ಚಾಟ್ ಬಾಟ್ ಆಗಿದೆ. ಇದು ಚಾಟ್ ಜಿಪಿಟಿಯಂತೆಯೇ ಕೆಲಸ ಮಾಡುತ್ತದೆ. ಚಾಟ್ ಜಿಪಿಟಿಗೆ ಹೋಲಿಸಿದರೆ ವೆಬ್ನಿಂದಲೇ ಮಾಹಿತಿಯನ್ನು ಪಡೆದು ನೀಡುವುದು ಬಾರ್ಡ್ನ ವ್ಯತ್ಯಾಸವಾಗಿದೆ. ಬಹುತೇಕ ಎಐ ಚಾಟ್ಬಾಟ್ಗಳಂತೆ ಬಾರ್ಡ್ ಕೋಡ್ ಬರೆಯಬಹುದು, ಗಣಿತ ಸಮಸ್ಯೆಗಳಿಗೆ ಉತ್ತರಿಸಬಹುದು ಮತ್ತು ನಿಮ್ಮ ಬರವಣಿಗೆಯ ಅಗತ್ಯಗಳಿಗೆ ಸಹಾಯ ಮಾಡಬಹುದು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0