ದಕ್ಷಿಣ ಭಾರತದ ಇಡ್ಲಿಗೆ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಿದ ಗೂಗಲ್.

ಭಾರತದ ಶ್ರೀಮಂತ ಪರಂಪರೆ ಮತ್ತು ಊಟದ ಮಹತ್ವವನ್ನು ಗೌರವಿಸುವ ಉದ್ದೇಶದಿಂದಾಗಿ ಗೂಗಲ್ ಇಂದು (ಅಕ್ಟೋಬರ್ 11) ವಿಶೇಷ ಡೂಡಲ್ ಮೂಲಕ ಸಂಭ್ರಮಿಸುತ್ತಿದೆ. ಅದು ಕೂಡ ದಕ್ಷಿಣ ಭಾರತದ ಪ್ರಸಿದ್ಧ ಇಡ್ಲಿಯೊಂದಿಗೆ ಗೂಗಲ್ ಸಂಭ್ರಮಿಸಿದೆ.


ಗೂಗಲ್ ತನ್ನ ಲೋಗೊದ‌ಲ್ಲಿ ಸಾಂಪ್ರದಾಯಿಕ ಬಾಳೆ ಎಲೆಯ ಮೇಲೆ ಇಡ್ಲಿ, ಬೌಲ್‌ ಮತ್ತು ಚಟ್ನಿಯನ್ನು ಇರಿಸಿ ಸುಂದರ ಡೂಡಲ್ ಅನ್ನು ರಚಿಸಿದೆ.

ಗೂಗಲ್‌ನಲ್ಲಿ ಲಕ್ಷಾಂತರ ಜನರ ನೆಚ್ಚಿನ ಆಹಾರವಾಗಿರುವ ಇಡ್ಲಿ ಜನರನ್ನು ಆಕರ್ಷಿಸುತ್ತಿದೆ.

‘ಗೂಗಲ್ ಇಂದಿನ ಡೂಡಲ್‌ನಲ್ಲಿ ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸಿದ, ಆವಿಯಲ್ಲಿ ಬೇಯಿಸಿದ ದಕ್ಷಿಣ ಭಾರತದ ಇಡ್ಲಿಯನ್ನು ಆಚರಿಸುತ್ತದೆ’ ಎಂದು ಬರೆದುಕೊಂಡಿದೆ. ಗೂಗಲ್‌ನ ಅಧಿಕೃತ ಡೂಡಲ್ಸ್ ಪೋರ್ಟಲ್‌ನಲ್ಲಿ ಪ್ರಕಟವಾದ ಈ ಡೂಡಲ್, ಇಡ್ಲಿಗಿಂತ ಹೆಚ್ಚಾಗಿ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವುದಾಗಿದೆ.

ಈ ಡೂಡಲ್ ಇಡ್ಲಿ ತಯಾರಿಸುವ ಪ್ರತಿಯೊಂದು ಹಂತವನ್ನು ತಿಳಿಸುವಂತಿದೆ. ಅಕ್ಕಿ ಕಾಳುಗಳು, ಮೃದುವಾದ ಹಿಟ್ಟು, ಆವಿಯಲ್ಲಿ ಬೇಯಿಸುವುದು, ಕೇಕ್‌ ಆಕಾರದ ಇಡ್ಲಿಗಳು, ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರ್‌ ಅನ್ನು ಬಾಳೆ ಎಲೆ ಮೇಲೆ ಇರಿಸಿ ತೋರಿಸಲಾಗಿದೆ.

ಅಕ್ಟೋಬರ್ 11 ಯಾಕೆ?

ಮಾರ್ಚ್ 30ನ್ನು ಅಧಿಕೃತವಾಗಿ ವಿಶ್ವ ಇಡ್ಲಿ ದಿನವೆಂದು ಗುರುತಿಸಲಾಗಿದೆ. ಆದರೂ, ಅಕ್ಟೋಬರ್ 11ಕ್ಕೆ ಯಾವುದೇ ನಿರ್ದಿಷ್ಟ ಹಬ್ಬ ಅಥವಾ ವಾರ್ಷಿಕೋತ್ಸ ಇಲ್ಲದ ಕಾರಣಕ್ಕೆ ಗೂಗಲ್ ಇಂದು ವಿಶೇಷ ಡೂಡಲ್ ಮೂಲಕ ಇಡ್ಲಿಗೆ ಗೌರವ ಸಲ್ಲಿಸಿದೆ.

Views: 7

Leave a Reply

Your email address will not be published. Required fields are marked *