Technology: ಗೂಗಲ್ (Google) ಎಲ್ಲಾ ವಿಭಾಗದಲ್ಲೂ ತನ್ನ ಸಾಮರ್ಥ್ಯ ಏನು ಅನ್ನೋದನ್ನು ತೋರಿಸುವ ಕೆಲಸ ಮಾಡುತ್ತಿದೆ. ಈ ಮೂಲಕ ಇತರೆ ಕಂಪೆನಿಗಳು ನಡುಗುವಂತೆ ಮಾಡುತ್ತಿದೆ. ಈ ನಡುವೆ ಗೂಗಲ್ ವಾಲೆಟ್ (Google Wallet) ಅನ್ನು ಘೋಷಣೆ ಮಾಡಿದ್ದು, ಕೆಲವು ದಿನಗಳಿಂದ ಇದು ದೊಡ್ಡ ಮಟ್ಟದ ಸಂಚಲನ ಉಂಟು ಮಾಡಿದೆ.
![](https://samagrasuddi.co.in/wp-content/uploads/2024/05/image-98.png)
ಹೌದು, ಗೂಗಲ್ ಭಾರತದಲ್ಲಿ ತನ್ನ ವಾಲೆಟ್ ಆಪ್ ಅನ್ನು ಪ್ರಾರಂಭಿಸಿದೆ. ಇದರಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಬಹುಮಾನಗಳು, ಟಿಕೆಟ್‌ಗಳು ಮತ್ತು ಕಾರ್ ಕೀಗಳನ್ನು ಸಂಗ್ರಹಿಸಲು ಡಿಜಿಟಲ್ ಹಬ್ ಆಯ್ಕೆ ನೀಡುತ್ತದೆ. ಗಮನಿಸಬೇಕಾದ ವಿಷಯ ಏನೆಂದರೆ ಇದು ಎಲ್ಲಾ ಆಂಡ್ರಾಯ್ಡ್ ಡಿವೈಸ್‌ಗಳಿಗೆ ಲಭ್ಯ ಇರುವುದಿಲ್ಲ. ಹಾಗಿದ್ರೆ, ಯಾರಿಗೆಲ್ಲಾ ಈ ಸೌಲಭ್ಯ ಸಿಗಲಿದೆ?, ಯಾರಿಗೆಲ್ಲಾ ಸಿಗೋಲ್ಲ ಅನ್ನೋ ಮಾಹಿತಿ ಇಲ್ಲಿದೆ ನೋಡಿ.
ಗೂಗಲ್ ವಾಲೆಟ್: ಭಾರತದಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗಾಗಿ ಗೂಗಲ್ ಇತ್ತೀಚೆಗೆ ತನ್ನ ವಾಲೆಟ್ ಆಪ್ ಅನ್ನು ಬಿಡುಗಡೆ ಮಾಡಿದೆ. ಈ ಉಚಿತ ಆಪ್ ಬಹುಮಾನಗಳು, ಟಿಕೆಟ್‌ಗಳು ಮತ್ತು ಕಾರ್ ಕೀಯನ್ನು ಸಂಗ್ರಹಿಸಲು ಡಿಜಿಟಲ್ ಕೇಂದ್ರವಾಗಿ ಬಳಕೆ ಮಾಡಲು ಅನುಮತಿಸುತ್ತದೆ. ಭಾರತದಲ್ಲಿ ಬಿಡುಗಡೆಯಾದ ಗೂಗಲ್ ವಾಲೆಟ್ ಅದರ ಅಂತರರಾಷ್ಟ್ರೀಯ ಆವೃತ್ತಿಗಿಂತ ಭಿನ್ನವಾಗಿದೆ. ಯಾಕೆಂದರೆ ಇದರಲ್ಲಿ ಬ್ಯಾಂಕ್ ಕಾರ್ಡ್‌ಗಳನ್ನು ಸಂಗ್ರಹಿಸಲು ಅಥವಾ ಡಿಜಿಟಲ್ ಪಾವತಿಗಳನ್ನು ಮಾಡಲು ಸಾಧ್ಯವಿಲ್ಲ. ಇಲ್ಲಿ ಗೂಗಲ್ ಪೇ ಕಂಪನಿಯಿಂದ ಪಾವತಿ ಆಪ್ ಆಗಿ ಮುಂದುವರಿಯುತ್ತದೆ.
ಆಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ (Google Play Store) ಲಭ್ಯವಿದ್ದು, ನಿಮಗೆ ಅದನ್ನು ಇಲ್ಲಿ ಕಂಡುಹಿಡಿಯಲಾಗದಿದ್ದರೆ, ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅದು ನಿಮ್ಮನ್ನು ಪ್ಲೇ ಸ್ಟೋರ್‌ಗೆ ಮರುನಿರ್ದೇಶಿಸುತ್ತದೆ. ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ‘ಎಲ್ಲಾ ವೈಶಿಷ್ಟ್ಯಗಳು ಎಲ್ಲಾ ಪ್ರದೇಶದಲ್ಲಿ ಲಭ್ಯವಿಲ್ಲ. ಆದರೆ, ಮುಂಬರುವ ತಿಂಗಳುಗಳಲ್ಲಿ ನಾವು ಅವುಗಳನ್ನು ನಿಮ್ಮ ಮುಂದೆ ತರಲಿದ್ದೇವೆ’ ಎಂದು ಉಲ್ಲೇಖ ಮಾಡಿದೆ.
ಗೂಗಲ್ ವಾಲೆಟ್ ಅನ್ನು ಬಳಕೆ ಮಾಡುವುದು ಹೇಗೆ?: ಬೋರ್ಡಿಂಗ್ ಪಾಸ್‌ಗಳನ್ನು ಸಂಗ್ರಹಿಸುವುದರಿಂದ ಹಿಡಿದು ಲಾಯಲ್ಟಿ ಪ್ರೋಗ್ರಾಂ ಬಹುಮಾನಗಳನ್ನು ನಿರ್ವಹಿಸುವವರೆಗೆ ನಿಮ್ಮ ಡಿಜಿಟಲ್ ಜೀವನದ ವಿವಿಧ ದಾಖಲೆಗಳನ್ನು ನಿರ್ವಹಿಸಲು ಈ ವಾಲೆಟ್ ತಡೆರಹಿತ ಅನುಭವವನ್ನು ನೀಡಲಿದೆ ಅದರಲ್ಲೂ ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ನೀವು ಈ ಗೂಗಲ್ ವಾಲೆಟ್ ಅನ್ನು ಹೇಗೆ ಹೊಂದಿಸಬಹುದು ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಹಂತ 1: ಮೊದಲು ಪ್ಲೇ ಸ್ಟೋರ್‌ನಿಂದ ಈ ಆಪ್ ಅನ್ನು ಇನ್‌ಸ್ಟಾಲ್ ಮಾಡಿ. ನಂತರ ಆಪ್ ಅನ್ನು ಪ್ರಾರಂಭಿಸಿ ಮತ್ತು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ. ಇದಾದ ಮೇಲೆ ನೀವು ಹೊಸಬರಾಗಿದ್ದರೆ, ಪಾವತಿ ಕಾರ್ಡ್ ಅನ್ನು ಸೇರಿಸಲು ನಿಮ್ಮನ್ನು ಕೇಳಲಾಗುತ್ತದೆ. ನೀವು ಅದನ್ನು ನಿಮ್ಮ ಕ್ಯಾಮರಾದಿಂದ ಸ್ಕ್ಯಾನ್ ಮಾಡಬಹುದು ಅಥವಾ ವಿವರಗಳನ್ನು ಹಸ್ತಚಾಲಿತವಾಗಿ ನಮೂದಿಸಬಹುದು.
ಹಂತ 2: ಇದೆಲ್ಲಾ ಆದ ಮೇಲೆ ನೀವು ಈಗಾಗಲೇ ಗೂಗಲ್ ಪ್ಲೇ ಅನ್ನು ಬಳಸಿದ್ದರೆ, ನಿಮ್ಮ ಕಾರ್ಡ್‌ಗಳು, ಟಿಕೆಟ್‌ಗಳು ಮತ್ತು ಪಾಸ್‌ಗಳನ್ನು ನೀವು ಗೂಗಲ್ ವಾಲೆಟ್‌ನಲ್ಲಿ ನಿಮ್ಮ ಡಾಕ್ಸ್ ಅನ್ನು ನೋಡಲು ಸಾಧ್ಯವಾಗುತ್ತದೆ. ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಹೆಚ್ಚುವರಿ ಭದ್ರತೆಗಾಗಿ ನೀವು ಸ್ಕ್ರೀನ್ ಲಾಕ್ ಅನ್ನು ಸಹ ಹೊಂದಿಸಬಹುದು.
ಹಂತ 3: ಈ ವೇಳೆ ಗನಾರ್ಹವಾಗಿ, ನಿಮ್ಮ ಫೋನ್‌ನೊಂದಿಗೆ ಸಂಪರ್ಕರಹಿತ ಪಾವತಿಗಳಿಗಾಗಿ ನಿಮ್ಮ ಡಿವೈಸ್ನ ಸಾಫ್ಟ್‌ವೇರ್ ಅವಶ್ಯಕತೆಗಳನ್ನು ಪೂರೈಸುತ್ತದೆಯೇ, ಎನ್‌ಎಫ್‌ಸಿ (ಸಮೀಪದ ಕ್ಷೇತ್ರ ಸಂವಹನ) ಹೊಂದಿದೆಯೇ ಮತ್ತು ನಿಮ್ಮ ಡೀಫಾಲ್ಟ್ ಪಾವತಿ ಆಪ್‌ನಂತೆ ಗೂಗಲ್ ಪೇ ಸೆಟ್‌ನೊಂದಿಗೆ ಎನ್‌ಎಫ್‌ಸಿ ಆನ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ.
ಈ ಕಾರಣಕ್ಕೆ ಹೇಳಿದ್ದು ಗೂಗಲ್ ವಾಲೆಟ್ ಹಳೆಯ ಆಂಡ್ರಾಯ್ಡ್ ಡಿವೈಸ್‌ಗಳನ್ನು ಬೆಂಬಲಿಸುವುದಿಲ್ಲ ಎಂದು. ಜೂನ್ 10 ರಿಂದ, ಗೂಗಲ್ ವಾಲೆಟ್ ಅನ್ನು 9 (Pie) ಗಿಂತ ಕೆಳಗಿನ ಆಂಡ್ರಾಯ್ಡ್ ಆವೃತ್ತಿಗಳು ಅಥವಾ 2.x ಗಿಂತ ಕಡಿಮೆ ಇರುವ ವಿಯರ್‌ಓಎಸ್ ಆವೃತ್ತಿಗಳನ್ನು ಚಾಲನೆ ಮಾಡುವ ಡಿವೈಸ್‌ಗಳಲ್ಲಿ ಈ ಸೇವೆಯನ್ನು ಪಡೆಯಲು ಸಾಧ್ಯ ಆಗುವುದಿಲ್ಲ.
ಈ ನಿರ್ಧಾರವು ಆಗಸ್ಟ್ 2023 ರಲ್ಲಿ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಗಾಗಿ ಪ್ಲೇ ಸೇವೆಗಳ ಬೆಂಬಲವನ್ನು ಕೊನೆಗೊಳಿಸುವ ಗೂಗಲ್‌ನ ಹಿಂದಿನ ಕ್ರಮದೊಂದಿಗೆ ಹೊಂದಿಕೆಯಾಗುತ್ತದೆ. ಹೊಸ ಭದ್ರತಾ ಫೀಚರ್ಸ್ ಗಳು ನಿರಂತರವಾಗಿ ಲಭ್ಯವಾಗುತ್ತಿರುವುದರಿಂದ ಹಳೆಯ ಸಿಸ್ಟಂಗಳೊಂದಿಗೆ ಹೊಂದಾಣಿಕೆಯನ್ನು ನಿರ್ವಹಿಸುವುದು ಒಂದು ಸವಾಲಿನ ಕೆಲಸವಾಗಿದೆ. ಕಾರಣ ಈ ನವೀಕರಣವು ಗೂಗಲ್ ವಾಲೆಟ್ ನೊಂದಿಗೆ ಸಂಪರ್ಕರಹಿತ ಪಾವತಿಗಳನ್ನು ಮಾಡುವ ಬಳಕೆದಾರರಿಗೆ ಸುರಕ್ಷಿತ ವಾತಾವರಣವನ್ನು ನೀಡುವ ಕೆಲಸ ಮಾಡುತ್ತದೆ.
ಈ ಹಿಂದೆ, ಗೂಗಲ್ ವಾಲೆಟ್ (ಹಿಂದೆ ಗೂಗಲ್ ಪೇ) ಆಂಡ್ರಾಯ್ಡ್ 5.0 (ಲಾಲಿಪಾಪ್) ವರೆಗೆ ಡಿವೈಸ್‌ಗಳನ್ನು ಬೆಂಬಲಿಸುತ್ತಿತ್ತು.ಅದಾಗ್ಯೂ ಈ ನವೀಕರಣವು ಆಂಡ್ರಾಯ್ಡ್ ನೌಗಟ್ (7.0, 7.1) ಮತ್ತು ಒರೆಯೋ (8.0, 8.1) ನಲ್ಲಿ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆಯಾದರೂ ಶೇ. 86 ಶೇಕಡಾ ಆಂಡ್ರಾಯ್ಡ್ ಡಿವೈಸ್‌ಗಳು ಈಗಾಗಲೇ ಆಂಡ್ರಾಯ್ಡ್ 9 ಅಥವಾ ಹೆಚ್ಚಿನದನ್ನು ರನ್ ಮಾಡುತ್ತಿವೆ ಅನ್ನೋದನ್ನು ಗಮನಿಸಬೇಕಿದೆ.
ಗೂಗಲ್ ವಾಲೆಟ್ ಗೂಗಲ್ ಪೇ ಗಿಂತ ಹೇಗೆ ಭಿನ್ನ ?: ಗೂಗಲ್ ಪೇ ಹಾಗೂ ಗೂಗಲ್ ವಾಲೆಟ್ ವಿಭಿನ್ನ ಉದ್ದೇಶಗಳೊಂದಿಗೆ ಪ್ರತ್ಯೇಕ ಆಪ್‌ಗಳಾಗಿವೆ. ಗೂಗಪ್ ಪೇ ಹಣಕಾಸಿನ ವಹಿವಾಟುಗಳ ಮೇಲೆ ಕೇಂದ್ರೀಕರಿಸುತ್ತದೆ. ಅಂದರೆ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು, ವೆಚ್ಚಗಳನ್ನು ನಿರ್ವಹಿಸಲು ಮತ್ತು ಬಹುಮಾನಗಳನ್ನು ಗಳಿಸಲು ನಿಮಗೆ ಅವಕಾಶ ನೀಡುತ್ತದೆ. ಆದರೆ ವಾಲೆಟ್ ಬೋರ್ಡಿಂಗ್ ಪಾಸ್‌ಗಳು, ಲಾಯಲ್ಟಿ ಕಾರ್ಡ್‌ಗಳು ಮತ್ತು ಐಡಿ ಗಳಂತಹ ಡಿಜಿಟಲ್ ಅಗತ್ಯಗಳನ್ನು ಸುರಕ್ಷಿತವಾಗಿರಿಸಲು ಆದ್ಯತೆ ನೀಡುತ್ತದೆ.