“ಮಹಿಳಾ ಸಬಲೀಕರಣಕ್ಕೆ ಸರ್ಕಾರದ ಯೋಜನೆಗಳು ದೊಡ್ಡ ಬಲ: ಸ್ವದೇಶಿ ಮೇಳದಲ್ಲಿ ತಿಪ್ಪೇಸ್ವಾಮಿ”

ಚಿತ್ರದುರ್ಗ ನ. 14

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ಸರ್ಕಾರ ಮಹಿಳೆಯರಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ಜಾರಿ ಮಾಡಿದೆ ಇಂದಿನ ದಿನಮಾನದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು  ನೀಡುವುದರ ಮೂಲಕ ಅವರನ್ನು ಸಬಲೆಯರನ್ನಾಗಿ ಮಾಡುವ ಕಾರ್ಯವನ್ನು ಮಾಡುತ್ತಿದೆ ಎಂದು ಕೆನರಾ ಬ್ಯಾಂಕ್‍ನ ನಿವೃತ್ತ ವ್ಯವಸ್ಥಾಪಕರಾದ ತಿಪ್ಪೇಸ್ವಾಮಿ ತಿಳಿಸಿದರು.


ಚಿತ್ರದುರ್ಗ ನಗರದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳದ ಎರಡನೇ ದಿನವಾದ ಗುರುವಾರ ನಡೆದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರಗಳು ಮಹಿಳೆಯರನ್ನು ಸಬಲರನ್ನಾಗಿ ಮಾಡಲು ಮುಂದಾಗಿದೆ ಇದರಿಂದ ಸಹಾಯಧನವನ್ನು ನೀಡುವುದರ ಮೂಲಕ ಅವರಿಗೆ ಪ್ರೋತ್ಸಾಹ ನೀಡುತ್ತಿದೆ, ಮಹಿಳೆಯರು ಸಹಾ ದೇಶದ ಅರ್ಥಿಕ ಪ್ರಗತಿಯಲ್ಲಿ ಸಹ ಭಾಗಿಯಾಗಬೇಕೆಂಬ ಉದೇಶದಿಂದ ಬ್ಯಾಂಕ್ ಸೇರಿದಂತೆ ವಿವಿಧ ಕಡೆಗಳಿಂದ ಸಾಲವನ್ನು ನೀಡುವುದರ ಮೂಲಕ ಅವರನ್ನು ಸ್ವಾವಲಂಭಿಗಳನ್ನಾಗಿ ಮಾಡುತ್ತಿದೆ ಮಹಿಳೆಯರು ಇದರ ಪ್ರಯೋಜನವನ್ನು ಪಡೆಯಬೇಕಿದೆ ಎಂದು ಕರೆ ನೀಡಿದರು.


ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗಾರಿಕೆಗಳನ್ನು ಉತ್ತೇಜನ ನೀಡುವ ಅದರಲ್ಲೂ ಮಹಿಳೆಯರಿಗೆ ಪ್ರಾತಿನಿಧ್ಯವನ್ನು ನೀಡುವ ನಿಟ್ಟಿನಲ್ಲಿ ಸಾಲದ ರೂಪದಲ್ಲಿ ಸಹಾಯಧನವನ್ನು ನೀಡಿ ಅವರನ್ನು ಪ್ರೋತ್ಸಾಹ ಮಾಡುತ್ತಿದೆ, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಿದೆ ಸಣ್ಣ ಪ್ರಮಾಣದಲ್ಲಿ ಕೈಗಾರಿಕೆಗಳನ್ನು ನಿರ್ಮಾಣ ಮಾಡುವುದರ ಮೂಲಕ ನಿಮ್ಮ ಜೀವನವನ್ನು ಪ್ರಾರಂಭ ಮಾಡಿ ಆರ್ಥಿಕವಾಗಿ ಪ್ರಗತಿಯನ್ನು ಸಾಧಿಸಿಕೊಳ್ಳಿ ಎಂದು ತಿಳಿಸಿದರು.


ನಿವೃತ್ತ ಉಪನ್ಯಾಸಕಿ ಲೇಖಕಿಯಾದ ಶ್ರೀಮತಿ ಶೈಲಾ ಜಯಕುಮಾರ್ ಮಾತನಾಡಿ ಮಹಿಳೆಗೆ ಇಂದಿನ ದಿನಮಾನದಲ್ಲಿ ಹಲವಾರು ಅವಕಾಶಗಳು ಇವೆ ಆದರೆ ಹಿಂದಿನ ಕಾಲದಲ್ಲಿ ಈ ರೀತಿಯಾದ ಅವಕಾಶಗಳು ಇರಲಿಲ್ಲ ಮನೆಯಲ್ಲಿ ಇದ್ದು ಅಡುಗೆ ಹೆರಿಗೆ ಮನೆಗೆ ಮಾತ್ರ ಸೀಮಿತವಾಗಿದ್ದಳು ಆದರೆ ಇಂದು ಮಹಿಳೆ ಅಂತರಿಕ್ಷಕ್ಕೆ ಹೋಗುವುದರ ಮೂಲಕ ತನ್ನ ತನವನ್ನು ಎತ್ತಿ ಹಿಡಿದಿದ್ದಾಳೆ, ಮಹಿಳೆ ಶಿಕ್ಷಣ ಸೇರಿದಂತೆ ಪುರುಷನಿಗೆ ಸಮಾನವಾಗಿ ಕೆಲಸವನ್ನು ಮಾಡುವುದರ ಮೂಲಕ ತಾನು ಯಾರಿಗೂ ಕಡಿಮೆ ಇಲ್ಲ ಎಂದು ಸಾಭಿತು ಪಡಿಸಿದ್ದಾಳೆ, ಒಂದು ಮನೆಯಲ್ಲಿ ಮಹಿಳೆ ಶಿಕ್ಷಣವಂತರಾದರೆ ಆ ಮನೆ ನಿಜಕ್ಕೂ ಅಭೀವೃದ್ದಿಯನ್ನು ಹೊಂದುತ್ತದೆ, ಅಲ್ಲದೆ ಪೋಷಕರು ಸಹಾ ತಮ್ಮ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಕೂಡಿಸುವುದರ ಮೂಲಕ ಪ್ರಜ್ಞಾವಂತರನ್ನಾಗಿ ಮಾಡುತ್ತಿದ್ದಾರೆ ಎಂದರು.


ಕಾರ್ಯಕ್ರಮದಲ್ಲಿ ಸ್ವದೇಶಿ ಮೇಳದ ಸಂಯೋಜಕರಾದ ಕೆ.ಎಸ್.ನವೀನ್, ಸಹ ಸಂಘಟಕರಾದ ಅನಿತ್ ಕುಮಾರ್, ಜಿ.ಎಸ್. ಸಂಚಾಲಕರಾದ ಸೌಭಾಗ್ಯ ಬಸವರಾಜನ್, ಬ್ರಹ್ಮಕುಮಾರಿ ಗಿರಿಜಕ್ಕ, ಶ್ರೀಮತಿ ರಾಣಿ, ಶ್ರೀಮತಿ ಸುಜಾತ ಚಂದ್ರಶೇಖರ್, ರಾಜೇಶ್ವರಿ ಸಿದ್ದರಾಮ್, ರೂ ಜನಾರ್ಧನ್, ಶೈಲಜ ರೆಡ್ಡಿ, ಭಾಗವಹಿಸಿದ್ದರು.

Leave a Reply

Your email address will not be published. Required fields are marked *