ಬಿಹಾರ ಉಗ್ರ ಕೃತ್ಯ ವಿಚಾರದಲ್ಲಿ ಕಾಂಗ್ರೆಸ್ ನಿಲುವಿಗೆ ಗೋವಿಂದ ಕಾರಜೋಳ ತೀವ್ರ ಕಿಡಿ.

ಚಿತ್ರದುರ್ಗ ನ. 13

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಉಗ್ರ ಡಾ.ಉಮರ್ ಮತ್ತು ಕೃತ್ಯ ಎಸಗಿದ ಉಗ್ರರೆಲ್ಲ ಯಾರು? ಪಾಕಿಸ್ತಾನದ ನಂಟು ಹೊಂದಿದ ನಮ್ಮ ದೇಶದ ಪ್ರಜೆಗಳು ಉಗ್ರ ಕೃತ್ಯ ಎಸಗಿದವರ ವಿರುದ್ಧ ಕೈ ನಾಯಕರು ಮಾತಾಡಲ್ಲ ಉಗ್ರರ ಮೇಲೆ ಪ್ರೀತಿ ಇರುವ ಕಾರಣಕ್ಕೆ ಮಾತಾಡಲ್ಲ ಎಂದು ಸಂಸದ ಗೋವಿಂದ ಕಾರಜೋಳ ಕಿಡಿ ಕಾರಿದ್ದಾರೆ.

ಚಿತ್ರದುಗ್ ನಗರದ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್, ಮಲ್ಲಿಕಾರ್ಜುನ ಖರ್ಗೆ, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪ ಸುಮನ್ನೆ ಟೀಕೆ ಮಾಡುತ್ತಾರೆ..ನಿಮ್ಮ ಬೆಂಬಲ ಉಗ್ರರಿಗೋ..ಪಾಕಿಸ್ತಾಕ್ಕೋ ಸ್ಪಷ್ಟಪಡಿಸಿ ಎಂದು ಗೋವಿಂದ ಕಾರಜೋಳ ಕಿಡಿಕಾರಿದ್ದು ಕೈ ನಾಯಕರು ಪ್ರಧಾನಿ, ಗೃಹ ಮಂತ್ರಿ ರಾಜೀನಾಮೆ ಕೇಳುತ್ತಿದ್ದಾರೆನಿಮ್ಮ ಬೆಂಬಲ ಉಗ್ರರಿಗೋ, ಪಾಕಿಸ್ತಾನಕ್ಕೋ ಸ್ಪಷ್ಟಪಡಿಸಿ ಎಂದು ಸವಾಲು ಹಾಕಿ ಬಿಹಾರ ಚುನಾವಣೆ ವೇಳೆ ಉಗ್ರ ಕೃತ್ಯ ಎಂಬುದು ಹೀನ ಮನಸ್ಥಿತಿ ಸೋತಾಗ ಚುನಾವಣೆ ಆಯೋಗದ ವಿರುದ್ಧ ಆರೋಪ ಮಾಡುತ್ತೀರಾ ಕರ್ನಾಟಕ, ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಾಗ ಸುಮ್ಮನಿರುತ್ತೀರಿ ಕೋರ್ಟ್ ತೀರ್ಪು ನಿಮ್ಮ ಪರ ಬರದಿದ್ದರೆ ನೀವು ಕೋರ್ಟ್ ಸರಿಯಿಲ್ಲ ಅನ್ನಬಹುದು ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ವ್ಯಾಲ್ಯೂವೇಷನ್ ಸರಿಯಿಲ್ಲ ಅನ್ನಬಹುದು ನೆರೆ ರಾಷ್ಟ್ರಗಳಂತೆ ದಂಗೆ ಏಳಲೆಂಬ ಹೀನ ಮನೋಸ್ಥಿತಿ ಕಾಂಗ್ರೆಸ್ಸಿಗರಿಗಿದೆ ಎಂದರು.

ಐದು ವರ್ಷ ಸಿದ್ಧರಾಮಯ್ಯ ಅವರೇ ಸಿಎಂ ಎಂದು ಸಚಿವ ಜಮೀರ್ ಹೇಳಿಕೆ ವಿಚಾರ ಕಾಂಗ್ರೆಸ್ ಪಕ್ಷ ಜಮೀರ್ ಗೆ ಪವರ್ ಆಫ್ ಅಟರ್ನಿ ನೀಡಿರಬಹುದು ಎಂದು ವ್ಯಂಗ್ಯವಾಡಿದರು.

Views: 12

Leave a Reply

Your email address will not be published. Required fields are marked *