Govt Scheme: ಬ್ಯುಸಿನೆಸ್ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಲೋನ್.! ಸುಲಭವಾಗಿ ಪಡೆಯಿರಿ 10 ಲಕ್ಷ ರೂ.

ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದ ಹಲವು ಪ್ರಮುಖ ಯೋಜನೆಗಳಲ್ಲಿ ಸ್ಟ್ಯಾಂಡ್ ಅಪ್ ಇಂಡಿಯಾ ಕೂಡ ಒಂದು. ಮಹಿಳೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗಾಗಿ ಈ ಯೋಜನೆಯನ್ನು ಮೀಸಲಿರಿಸಲಾಗಿದೆ. ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯ ಪ್ರಮುಖ ಉದ್ದೇಶವೇನೆಂದರೆ ಯಾವುದೇ ಬ್ಯಾಂಕಿನ ಸಾಲಗಳಲ್ಲಿ ರೂ.

10 ಲಕ್ಷದಿಂದ 1 ಕೋಟಿವರೆಗಿನ ಸಾಲಗಳಲ್ಲಿ ಒಂದು ಸಾಲವನ್ನು ಮಹಿಳಾ ಉದ್ಯೋಗದಾತರಿಗೆ,

ಇಲ್ಲವೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ನೀಡಲೇಬೇಕೆಂದು ನಿರ್ಧರಿಸಲಾಗಿದೆ. ಇದು ಉತ್ಪಾದನೆ, ಸೇವೆ, ವ್ಯಾಪಾರ ಈ ಮೂರೂ ಕ್ಷೇತ್ರಕ್ಕೆ ಅನ್ವಯಿಸಲಾಗಿರುತ್ತದೆ. ಒಂದು ವೇಳೆ ಇದು ಪಾಲುದಾರಿಕಾ ಸಂಸ್ಥೆಯಾಗಿದ್ದರೆ ಶೇ. 51 ರಷ್ಟು ಪಾಲುದಾರಿಕೆಯನ್ನು ಮಹಿಳೆ/ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವ್ಯಕ್ತಿ ಹೊಂದಿರಬೇಕಾಗುತ್ತದೆ.

ಅರ್ಹತೆ
1. ಮಹಿಳೆ/ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವ್ಯಕ್ತಿಯಾಗಿರಬೇಕು ಹಾಗೂ 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು
2. ಈ ಸಾಲಕ್ಕೆ ಒಳಪಡುವವರು ಹಸಿರು ಕ್ಷೇತ್ರ ಯೋಜನೆಯೊಳಗಿರಬೇಕು. ಇಲ್ಲಿ ಹಸಿರು ಕ್ಷೇತ್ರವೆಂದರೆ ಉತ್ಪಾದನೆ, ಸೇವೆ, ಇಲ್ಲವೇ ವ್ಯಾಪಾರವನ್ನು ಹೊಸದಾಗಿ ಆರಂಭಿಸುವುದಾಗಿರಬೇಕು.
3. ಒಂದು ವೇಳೆ ಇದು ಪಾಲುದಾರಿಕಾ ಸಂಸ್ಥೆಯಾಗಿದ್ದರೆ ಶೇ. 51 ರಷ್ಟು ಪಾಲುದಾರಿಕೆಯನ್ನು ಮಹಿಳೆ/ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವ್ಯಕ್ತಿ ಹೊಂದಿರಬೇಕು.
4. ಸಾಲಗಾರ ಯಾವುದೇ ಬ್ಯಾಂಕಿನ ಸದಸ್ಯ ಆಗಿರಬಾರದು.

ಸಾಲದಸ್ವರೂಪ
₹10 ಲಕ್ಷದಿಂದ ₹1 ಕೋಟಿವರೆಗೆ ಇದು ಕಾಂಪೋಸಿಟ್ ಸಾಲವಾಗಿರುತ್ತದೆ. ಅಂದರೆ, ಕರಾರು ಸಾಲ ಮತ್ತು ಕಾರ್ಯವಾಹಿ ಬಂಡವಾಳ ಎರಡೂ ಅನ್ವಯವಾಗುತ್ತದೆ. ಸಾಲದ ಉದ್ದೇಶ ಮಹಿಳೆ/ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವ್ಯಕ್ತಿಗಳಿಂದ ಹೊಸ ಸಂಸ್ಥೆಗಳನ್ನು ಹುಟ್ಟು ಹಾಕುವುದು ಮತ್ತು ಅವರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಸಾಲದಗಾತ್ರ
ತಾವು ಆರಂಭಿಸುತ್ತಿರುವ ಉದ್ದಿಮೆಯ ಒಟ್ಟು ವೆಚ್ಚದ ಶೇ. 75ರಷ್ಟನ್ನು ಸಾಲದ ರೂಪದಲ್ಲಿ ಪಡೆಯಬಹುದು. ಆದರೆ, ಈ ಷರತ್ತು ಎಲ್ಲರಿಗೂ ಅನ್ವಯವಾಗುವುದಿಲ್ಲ. ಒಂದು ವೇಳೆ ಯೋಜನೆ ಆರಂಭಿಸುವ ವ್ಯಕ್ತಿ ಶೇ. 25ಕ್ಕಿಂತ ಹೆಚ್ಚು ಬಂಡವಾಳ ಹೂಡಲು ಯೋಗ್ಯನಾಗಿದ್ದು, ಮತ್ತು ಆತ ಬಯಸುತ್ತಿದ್ದಲ್ಲಿ ಇಲ್ಲವೇ ಇತರೆಡೆಯಿಂದ ಆತ ಸಹಾಯ ಪಡೆದಿದ್ದಲ್ಲಿ ಶೇ. 75 ರಷ್ಚು ಸಾಲ ನೀಡಬೇಕೆಂದೇನೂ ಇಲ್ಲ.

ಬಡ್ಡಿದರ
ಬ್ಯಾಂಕಿನ ಅತ್ಯಂತ ಕಡಿಮೆ ಬಡ್ಡಿದರವನ್ನು ಇದು ಒಳಗೊಂಡಿರುತ್ತದೆ.

ಭದ್ರತೆ
ಪ್ರಾಥಮಿಕ ಭದ್ರತೆ ಹೊರತು ಪಡಿಸಿ ಇತರೆ ಬ್ಯಾಂಕ್ ನ ಸಹಕಾರದ ಭದ್ರತೆ ಇಲ್ಲವೇ ಭದ್ರತಾ ಖಾತರಿ ನಿಧಿ ಯೋಜನೆಯ (Credit Guarantee Fund Scheme for Stand-Up India Loans) ಸಹಕಾರದಿಂದಲೂ ಭದ್ರತೆ ಪಡೆಯಬಹುದಾಗಿದೆ.

ಮರುಪಾವತಿ
ಸಾಲ ಪಡೆದ ದಿನದಿಂದ ಕಡಿಮೆ ಎಂದರೆ 18 ತಿಂಗಳಿನಿಂದ 7 ನೇ ವರ್ಷದ ಅಂತ್ಯದೊಳಗೆ ಬಡ್ಡಿ ಸಹಿತ ಸಂಪೂರ್ಣ ಸಾಲ ಮರುಪಾವತಿಯಾಗಬೇಕು.

ಕಾರ್ಯವಾಹಿಬಂಡವಾಳ
ರು. 10 ಲಕ್ಷದ ವರೆಗಿನ ಸಾಲವನ್ನು ಒವರ್ ಡ್ರಾಫ್ಟ್ ರೂಪದಲ್ಲಿಯೂ ಅದಕ್ಕಿಂತ ಹೆಚ್ಚಿನ ಸಾಲವನ್ನು ಕ್ಯಾಷ್ ಕ್ರೆಡಿಟ್ ಲಿಮಿಟ್ ಆಧಾರದಲ್ಲಿ ನೀಡಲಾಗುತ್ತದೆ. ರುಪೇ ಕ್ರೆಡಿಟ್ ಕಾರ್ಡ್ ನ್ನು ಸಾಲ ಪಡೆದ ವ್ಯಕ್ತಿಗೆ ಸುಲಭದ ವ್ಯವಹಾರಕ್ಕಾಗಿ ನೀಡಲಾಗುತ್ತದೆ.

ಸ್ವಂತಬಂಡವಾಳ
ಯೋಜನೆಯ ಲಾಭ ಪಡೆಯಬೇಕೆಂದರೆ ಬಂಡವಾಳ ಬೇಕೇ ಬೇಕು. ತಾನು ಆರಂಭಿಸುವ ಕೆಲಸದಿಂದ ಲಾಭ ಗಳಿಸಿ ಸಾಲ ಮರುಪಾವತಿಯ ಬಗ್ಗೆ ಬ್ಯಾಂಕಿನ ಸೂಕ್ತ ವಿವರಗಳನ್ನು ನೀಡಬೇಕಾಗುತ್ತೆ. ನಿಮ್ಮ ಹೊಸ ಕೆಲಸಕ್ಕೆ ಶೇಕಡಾ 10 ರಷ್ಟು ಬಂಡವಾಳ ನೀವು ಹೂಡಲೇಬೇಕು. ಉಳಿದ ಮಾರ್ಜಿನ್ ಹಣಕ್ಕಾಗಿ ನೀವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯ ಪಡೆಯಬಹುದು.

ಈ ಯೋಜನೆಯನ್ನು 2016 ರಲ್ಲಿ ಕೇಂದ್ರ ಸರ್ಕಾರವು ಪ್ರಾರಂಭಿಸಿತು ಮತ್ತು ಇದು 2025 ರವರೆಗೆ ಲಭ್ಯವಿರುತ್ತದೆ. ಅಂದರೆ ಈ ಯೋಜನೆಯ ಮೂಲಕ ನೀವು ಇನ್ನೂ ಎರಡು ವರ್ಷಗಳವರೆಗೆ ಸಾಲ ಪಡೆಯಬಹುದು. ಅಷ್ಟರೊಳಗೆ ಇನ್ನೂ 20 ಸಾವಿರ ಕೋಟಿ ಸಾಲ ಮಂಜೂರಾಗುವ ಸಾಧ್ಯತೆ ಇದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವವರು 10 ಲಕ್ಷದಿಂದ 1 ಕೋಟಿವರೆಗೆ ಸಾಲ ಪಡೆಯಬಹುದು.

ಸ್ಟ್ಯಾಂಡಪ್ ಇಂಡಿಯಾ ಯೋಜನೆಯ ಮೂಲಕ ಲೋನ್ ಪಡೆಯಲು ಕನಿಷ್ಠ ವಯಸ್ಸು 18 ವರ್ಷಗಳು. ಪ್ರತಿ ಬ್ಯಾಂಕ್ ನಲ್ಲಿ ಕನಿಷ್ಠ ಒಬ್ಬ ವ್ಯಕ್ತಿಗೆ ಈ ಯೋಜನೆಯಡಿ ಸಾಲ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಉತ್ಪಾದನೆ, ಸೇವೆ ಮತ್ತು ಕೃಷಿ-ವ್ಯವಹಾರದಲ್ಲಿರುವವರು ಈ ಸಾಲಗಳನ್ನು ಪಡೆಯಬಹುದು.

18 ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ ಸ್ಟ್ಯಾಂಡಪ್ ಇಂಡಿಯಾ ಯೋಜನೆಯ ಮೂಲಕ ಸಾಲವನ್ನು ಪಡೆಯಬಹುದು. ಪಾಲುದಾರಿಕೆ ಮೂಲಕ ವ್ಯಾಪಾರ ಮಾಡುತ್ತಿದ್ದರೆ, ಆ ವ್ಯವಹಾರದಲ್ಲಿ ಕನಿಷ್ಠ 51 ಶೇಕಡಾ SC, ST ಸಮುದಾಯಗಳು ಮತ್ತು ಮಹಿಳೆಯರು ಇರಬೇಕು. ಈ ಹಿಂದೆ ಸಾಲ ಮರುಪಾವತಿ ಮಾಡದ ಇತಿಹಾಸ ಇರಬಾರದು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *