Gram Flour Test:ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಪ್ರತಿಯೊಂದು ವಸ್ತುವೂ ಕೂಡಾ ಕಲಬೆರಕೆಯದ್ದೇ. ಕಡಲೆ ಹಿಟ್ಟು ಕೂಡಾ ಈ ಕಲಬೆರಕೆಯಿಂದ ಮುಕ್ತಿ ಪಡೆದಿದೆ ಎಂದು ಹೇಳುವುದು ಸಾಧ್ಯವಿಲ್ಲ.
- ಕಡಲೆಹಿಟ್ಟನ್ನು ಬೇರೆ ಬೇರೆ ರೀತಿಯ ಅಡುಗೆಯಲ್ಲಿ ಬಳಸುತ್ತೇವೆ.
- ಅದರಲ್ಲಿಯೂ ಹೆಚ್ಚಾಗಿ ಬಜ್ಜಿ, ಪಕೋಡಾ ಮಾಡುವಾಗ ಬಳಸುತ್ತೇವೆ
- ಬಜ್ಜಿ ಪಕೋಡಾ ತಿನ್ನಲು ಬಲು ರುಚಿ.
Gram Flour Test : ಕಡಲೆಹಿಟ್ಟನ್ನು ಬೇರೆ ಬೇರೆ ರೀತಿಯ ಅಡುಗೆಯಲ್ಲಿ ಬಳಸುತ್ತೇವೆ. ಅದರಲ್ಲಿಯೂ ಹೆಚ್ಚಾಗಿ ಬಜ್ಜಿ, ಪಕೋಡಾ ಮಾಡುವಾಗ ಬಳಸುತ್ತೇವೆ. ಬಜ್ಜಿ ಪಕೋಡಾ ತಿನ್ನಲು ಬಲು ರುಚಿ. ಒಂದು ಲೋಟ ಬಿಸಿ ಚಹಾ ಅಥವಾ ಕಾಫಿ ಇದ್ದರೆ ಬೋಂಡಾ, ಬಜ್ಜಿ, ಪಕೋಡಾದ ಮಜಾನೇ ಬೇರೆ. ಆದರೆ ಅದನ್ನು ತಯಾರಿಸಲು ನಾವು ಉಪಯೋಗಿಸುವ ಕಡಲೆ ಹಿಟ್ಟು ಎಷ್ಟು ಪರಿಶುದ್ದವಾದದ್ದು ಎನ್ನುವುದನ್ನು ತಿಳಿದುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಪ್ರತಿಯೊಂದು ವಸ್ತುವೂ ಕೂಡಾ ಕಲಬೆರಕೆಯದ್ದೇ. ಕಡಲೆ ಹಿಟ್ಟು ಕೂಡಾ ಈ ಕಲಬೆರಕೆಯಿಂದ ಮುಕ್ತಿ ಪಡೆದಿದೆ ಎಂದು ಹೇಳುವುದು ಸಾಧ್ಯವಿಲ್ಲ.
ಯಾವ ಕಾರಣಕ್ಕಾಗಿ ಕಲಬೆರಕೆ ಮಾಡಲಾಗುತ್ತದೆ ? :
ಯಾವುದೇ ಆಹಾರ ಪದಾರ್ಥದಲ್ಲಿನ ಕಲಬೆರಕೆಯ ನಿಜವಾದ ಉದ್ದೇಶ ಗರಿಷ್ಠ ಲಾಭ ಗಳಿಸುವುದು. ಹೀಗೆ ಕಲಬೆರಕೆ ಮಾಡುವಾಗ ಇದು ಉಪಯೋಗಿಸುವವರ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತಿದೆ ಎಂಬುದರ ಬಗ್ಗೆ ಯೋಚಿಸುವುದಿಲ್ಲ. ಕೆಲವರು ಇದಕ್ಕೆ ಜೋಳದ ಹಿಟ್ಟು ಹಾಕಿದರೆ ಇನ್ನು ಕೆಲವರು ಗೋಧಿ ಹಿಟ್ಟು ಬೆರೆಸುತ್ತಾರೆ.
ಅಸಲಿ ಮತ್ತು ನಕಲಿ ಕಡಲೆ ಹಿಟ್ಟನ್ನು ಗುರುತಿಸುವುದು ಹೇಗೆ?
1. ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ಪರೀಕ್ಷಿಸಿ :
ಬರಿಗಣ್ಣಿನಿಂದ ನೋಡಿದರೆ ಕಡಲೆ ಹಿಟ್ಟಿನ ಗುಣಮಟ್ಟವನ್ನು ಗುರುತಿಸುವುದು ಸಾಧ್ಯವಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಪ್ಯಾಕ್ ಮಾಡಿದ ಅಥವಾ ಲೂಸ್ ಆಗಿ ಸಿಗುವ ಕಡಲೆ ಹಿಟ್ಟು ಕಲಬೆರಕೆಯದ್ದೇ ಆಗಿದೆ. ಕಡಲೆಹಿಟ್ಟಿನಲ್ಲಿ ಅಡಗಿರುವ ಕಲಬೆರಕೆಯನ್ನು ಪತ್ತೆ ಹಚ್ಚಲು ಹೈಡ್ರೋಕ್ಲೋರಿಕ್ ಆಮ್ಲವನ್ನು ಬಳಸಲಾಗುತ್ತದೆ.ಒಂದು ಬಟ್ಟಲಿನಲ್ಲಿ 2 ರಿಂದ 3 ಚಮಚ ಹಿಟ್ಟನ್ನು ತೆಗೆದುಕೊಂಡು ನೀರನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಅದರಲ್ಲಿ 2 ಸ್ಪೂನ್ ಹೈಡ್ರೋಕ್ಲೋರಿಕ್ ಆಮ್ಲವನ್ನು ಸೇರಿಸಿ ಮತ್ತು ಕೆಲವು ನಿಮಿಷಗಳ ಕಾಲ ಕಾಯಿರಿ. ಕಡಲೆ ಹಿಟ್ಟಿನ ಬಣ್ಣ ಕೆಂಪು ಬಣ್ಣಕ್ಕೆ ತಿರುಗಿದರೆ ಅದು ಕಲಬೆರಕೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಇಲ್ಲವಾದರೆ ಹಿಟ್ಟು ಶುದ್ದವಾಗಿದೆ ಎಂದರ್ಥ.
2. ನಿಂಬೆ ರಸದ ಸಹಾಯ :
ನಿಂಬೆಯನ್ನು ಪ್ರತಿಯೊಂದು ಮನೆಯಲ್ಲೂ ಬಳಸುತ್ತಾರೆ. ಅದರ ಸಹಾಯದಿಂದ ನಿಮ್ಮ ಮನೆಯಲ್ಲಿರುವ ಹಿಟ್ಟು ಕಲಬೆರಕೆಯಾಗಿರುವುದೋ ಅಥವಾ ಪರಿಶುದ್ದವಾಗಿರುವುದೋ ಎನ್ನುವುದನ್ನು ಕಂಡುಕೊಳ್ಳಬಹುದು. ಒಂದು ಪಾತ್ರೆಯಲ್ಲಿ 3 ಚಮಚ ಹಿಟ್ಟನ್ನು ತೆಗೆದುಕೊಂಡು ಅದೇ ಚಮಚದಲ್ಲಿ ನಿಂಬೆ ರಸವನ್ನು ಕೂಡಾ ತೆಗೆದುಕೊಂಡು ಮಿಶ್ರಣ ಮಾಡಿ.ಈಗ ಅದಕ್ಕೆ ಹೈಡ್ರೋಕ್ಲೋರಿಕ್ ಆಮ್ಲವನ್ನೂ ಸೇರಿಸಿ. ಸುಮಾರು 5 ನಿಮಿಷಗಳ ನಂತರ ಒಂದು ವೇಳೆ ಹಿಟ್ಟಿನ ಬಣ್ಣವು ಕಂದು ಅಥವಾ ಕೆಂಪು ಬಣ್ಣಕ್ಕೆ ತಿರುಗಿದರೆ, ಅದು ಕಲಬೆರಕೆಯಾಗಿದೆ ಎನ್ನುವುದು ಅರ್ಥವಾಗುತ್ತದೆ.
Source : https://zeenews.india.com/kannada/health/how-to-find-adulterated-gram-flour-at-home-180958
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1