ಚಿತ್ರದುರ್ಗ ಆ. 27
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
“ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಅತ್ಯುತ್ತಮ ಅವಕಾಶಗಳನ್ನು ಈ ಕ್ರೀಡೆಗಳು ಒದಗಿಸಿಕೊಡುತ್ತವೆ” ಎಂದು ಚಿತ್ರದುರ್ಗ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ (ಪದವಿಪೂರ್ವ) ಉಪನಿರ್ದೇಶಕರಾದ ಕೆ ತಿಮ್ಮಯ್ಯ ತಿಳಿಸಿದರು.

ಚಿತ್ರದುರ್ಗ ನಗರದ ಡಾನ್ ಬೋಸ್ಕೋ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಜರುಗಿದ ರಾಜ್ಯ ಮಟ್ಟದ ಜೂಡೋ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು. ಕಲಿಕೆಯಿಂದ ಉತ್ತಮ ವೈದ್ಯನಾಗಬಹುದು, ವಿಜ್ಞಾನಿಯಾಗಬಹುದು, ಇಂಜಿನಿಯರಾಗಬಹುದು ಐಎಎಸ್ ಅಧಿಕಾರಿಯಾಗಿ ಹೆಸರು ಮಾಡಬಹುದು.
ಅದರೆ ಕ್ರೀಡಾಪಟುಗಳಲ್ಲಿ ನಾಯಕತ್ವದ ಗುಣ,ಧೈರ್ಯ, ಶಿಸ್ತು, ಸಂಯಮ, ಪ್ರಾಮಾಣಿಕತೆ, ಹೊಂದಾಣಿಕೆ, ದೈಹಿಕ ಸ್ಥಿರತೆ ,ವಿನಯವಂತಿಕೆ ಮುಂತಾದ ಗುಣಗಳು ಮನೆ ಮಾಡಿರುತ್ತವೆ. ಹೀಗಾಗಿ ಪೋಷಕರು, ಉಪನ್ಯಾಸಕರು,ಸಂಘ ಸಂಸ್ಥೆಗಳು ಮಕ್ಕಳಲ್ಲಿ ಕ್ರೀಡಾಸಕ್ತಿ ಮೂಡಿಸುವ ಉತ್ತಮ ವಾತವರಣ ಕಲ್ಪಿಸಿಕೊಡುವ ಮೂಲಕ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡಬೇಕಿದೆ ಎಂದರು.
ಡಾನ್ಬೋಸ್ಕೋ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ರೆ|| ಫಾ.ವಿ.ಎಂ.ಮ್ಯಾಥ್ಯೂ ಎಸ್.ಡಿ.ಬಿ ಮಾತನಾಡಿ ಸದೃಡ ದೇಹದಲ್ಲಿ ಸದೃಡ ಮನಸ್ಸು ಇರುತ್ತದೆ ಎಂಬುವುದು ಮನಸ್ಸಿಗೆ ಮತ್ತು ದೇಹಕ್ಕೆ ಸಂಬಂಧಿಸಿದ ನುಡಿಯಾಗಿದೆ. ಪ್ರತಿಯೊಬ್ಬರು ತಮ್ಮ ಕೆಲಸಗಳನ್ನು ತಾವೇ ಸರಾಗವಾಗಿ ಮಾಡಿಕೊಂಡು ಹೋಗಲು ಮುಖ್ಯವಾಗಿ ಬೇಕಾಗಿರು ವುದು ಆರೋಗ್ಯ ಇದನ್ನು ಯಾವುದೇ ಅಂಗಡಿ ಆಸ್ಪತ್ರೆಗಳಲ್ಲಿ ಪಡೆಯಲಾಗುವುದಿಲ್ಲ.ಆರೋಗ್ಯ ನಮ್ಮದಾಗಿಸಿ ಕೊಳ್ಳಲು ಇರುವ ಏಕೈಕ ಮಾರ್ಗ ದೈಹಿಕವಾಗಿ ಚಟುವಟಿಕೆಯಿಂದ ಇರುವುದು ಇದಕ್ಕಾಗಿ ಯಾವುದಾದರೂ ಒಂದು ಕ್ರೀಡೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಡಾನ್ ಬೋಸ್ಕೋ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಫಾ.ಅನೂಪ್ ಥಾಮಸ್ ಎಸ್.ಡಿ.ಬಿ ,ಪ್ರಾಂಶುಪಾಲರಸಂಘದ ಅಧ್ಯಕ್ಷ ರಾಜೇಶ್ ಪಿ.ಎಂ.ಜಿ ಮಾತನಾಡಿದರು,
ಚಿತ್ರದುರ್ಗ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದಮಲ್ಲೇಶ್ ಬಿ.ಆರ್.ಪ್ರಾಂಶುಪಾಲರಾದ ಕೆ.ಹೆಚ್.ರಾಜು, ಜಿ.ದೇವರಾಜ್, ತಿಮ್ಮಣ್ಣ ಜಾನಕೊಂಡ,ಮಂಜು ನಾಯ್ಕ್, ಇ.ಗುರುಮೂರ್ತಿ,ಬಿ.ಕೃಷ್ಣಪ್ಪ,ಸಣ್ಣಪಾಲಯ್ಯ, ವಸಂತ್, ಕೆ.ನಾಗರಾಜ್, ದುರುಗೇಶಪ್ಪ,ಜಗದೀಶ್, ಎಸ್.ದೇವೆಂದ್ರಪ್ಪ,ರಂಗಪ್ಪ. ವಸಂತಕುಮಾರ್, ಡಾ.ಎಸ್.ಎ.ಖಾನ್, ಎನ್ ದೊಡ್ಡಪ್ಪ ,ಭೀಮರೆಡ್ಡಿ ಉಪನ್ಯಾಸಕರಾದ ಎಂ.ಜೈಶ್ರೀನಿವಾಸ್, ಮಹಮ್ಮದ್ ಶಕೀಲ್,ಅವಿನಾಶ್, ಕುಮಾರಿ ಋತು ಆರ್,ಕುಮಾರಿ ಅರ್ಪಿತಾ ಎಸ್ ಎಂ. ರಾಜಿಕಬಾನು, ನಾಜಿಯಾ ತಬಸಮ್,ರಾಮನಗೌಡ, ಸಿದ್ದೇಶ್, ಮಹಾಲಕ್ಷ್ಮಿ ಕ್ರೀಡಾಸಂಚಾಲಕರಾದ ಎ.ಎಸ್.ರಂಗಪ್ಪ, ಎನ್. ದೈಹಿಕ ಶಿಕ್ಷಣ ಉಪನ್ಯಾಸಕರಾದ ಜಗದೀಶ್. ಮಧುಸೂದನ್ ಕೆ .ಮಂಜುನಾಥ, ಜೂಡೋ ಹಿರಿಯ ತರಬೇತುದಾರಾದ ಡಾ.ತ್ರಿವೇಣಿ ಎಂ.ಎನ್, ರಾಷ್ಟ್ರೀಯ ತೀರ್ಪುಗಾರರು ಹರ್ಷಿತ್ ರಾವ್,ರೋಹಿಣಿ ಪಾಟೀಲ್, ಕಚೇರಿ ಸಿಬ್ಬಂದಿ ವರ್ಗದ ದುರುಗೇಶಪ್ಪ ಟಿ.,ಸತೀಶ್ ಬಿ.ಹೆಚ್ ಹರ್ಷಪಾಟೀಲ್,ಮಹೇಂದ್ರ ಕುಮಾರ್,ನೇತ್ರಾವತಿ ನವೀನ್ ಕುಮಾರ್ ಭಾಗವಹಿಸಿದ್ದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಜೂಡೋ ಕ್ರೀಡಾಪಟುಗಳು ಹಾಗೂ ವ್ಯವಸ್ಥಾಪಕರು ಕ್ರೀಡಾಕೂಟದಲ್ಲಿ ಪಾಲ್ಗೊಂಡರು. ಡಾನ್ ಬೋಸ್ಕೋ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಕುಮಾರಿ ದೀಪಿಕಾ, ತನುಶ್ರೀ, ಅಭಿನಯ ಮತ್ತು ಅನನ್ಯ ಸ್ವಾಗತ ಗೀತೆಗೆ ನೃತ್ಯಮಾಡಿದರು
ಉಪನ್ಯಾಸಕರಾದ ಗೋವಿಂದ ರಾಜ್ ಸ್ವಾಗತಿಸಿದರು, ಶಿವಶಂಕರ್ ವಂದಿಸಿದರು ವಿದ್ಯಾರ್ಥಿಗಳಾದ ಕುಮಾರಿ ಚೇತನಾ ಮತ್ತು ಕುಮಾರ ವೈಭವ್ ಕಾರ್ಯಕ್ರಮ ನಿರೂಪಿಸಿದರು.
Views: 22