504 KAS ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್!

ಬೆಂಗಳೂರು: ರಾಜ್ಯ ಸರ್ಕಾರದ 16 ಇಲಾಖೆಗಳು ಖಾಲಿ ಇರುವ KAS ಸೇರಿದಂತೆ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ 656 ಹುದ್ದೆಗಳ ನೇರ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿವೆ. ಈ ಪೈಕಿ 504 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಸಮ್ಮತಿ ನೀಡಿದೆ.

ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ಈ ಸಂಬಂಧ ಪದವೀಧರ ಕ್ಷೇತ್ರದ ಸದಸ್ಯ ನಿರಾಣಿ ಹಣಮಂತ್‌ ರುದ್ರಪ್ಪನವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಪೈಕಿ 504 ಹುದ್ದೆಗಳ ಭರ್ತಿಗೆ ಒಪ್ಪಿಗೆ ಸಿಕ್ಕಿದೆ. ಹೀಗಾಗಿ ಶೀಘ್ರದಲ್ಲಿಯೇ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.

16 ಇಲಾಖೆಗಳು ಖಾಲಿ ಇರುವ KAS ಸೇರಿದಂತೆ 656 ಹುದ್ದೆಗಳ ನೇರ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಪೈಕಿ 504 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಸಮ್ಮತಿ ನೀಡಿದೆ. ಈ ಮೂಲಕ ಹಲವು ವರ್ಷಗಳಿಂದ ಸರ್ಕಾರಿ ಉದ್ಯೋಗದ ಕನಸು ಹೊತ್ತಿರುವ ಅಭ್ಯರ್ಥಿಗಳಿಗೆ ಸಹಿಸುದ್ದಿ ಸಿಕ್ಕಂತಾಗಿದೆ.

ಯಾವ ಇಲಾಖೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ?

ಕ್ರಮ ಸಂಖ್ಯೆಇಲಾಖೆಭರ್ತಿ ಮಾಡಿಕೊಳ್ಳಲು ಕೋರಲಾದ ಹುದ್ದೆಗಳ ಸಂಖ್ಯೆಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ ಹುದ್ದೆಗಳ ಸಂಖ್ಯೆ
1ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ9785
2ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ5955
3ಕಂದಾಯ ಇಲಾಖೆ12976
4ಪೊಲೀಸ್ ಇಲಾಖೆ1210
5ಕಾರಾಗೃಹ ಇಲಾಖೆ0903
6ವಾಣಿಜ್ಯ ತೆರಿಗೆಗಳ ಇಲಾಖೆ143140
7ಖಜಾನೆ ಇಲಾಖೆ6948
8ಅಬಕಾರಿ ಇಲಾಖೆ1310
9ಸಹಕಾರ ಇಲಾಖೆ2621
10ಸಮಾಜ ಕಲ್ಯಾಣ ಇಲಾಖೆ5427
11ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ1307
12ಕಾರ್ಮಿಕ ಇಲಾಖೆ1104
13ಕೌಶಲ್ಯಾಭಿವೃದ್ಧಿ ಇಲಾಖೆ1103
14ಪ್ರವಾಸೋದ್ಯಮ ಇಲಾಖೆ0202
15ಆಹಾರ ಮತ್ತು ನಾಗರಿಕ ಸರಬರಾಜು0909
16ಯುವ ಸಬಲೀಕರಣಮತ್ತು ಕ್ರೀಡಾ ಇಲಾಖೆ0404
ಒಟ್ಟು656504

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *