ಇಲ್ಲಿಯವರೆಗೆ ರಾಜ್ಯದ 1 ಕೋಟಿ 11 ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಆದರೆ ಯೋಜನೆಯಲ್ಲಿ ನೋಂದಾಯಿಸಿರುವ ಎಲ್ಲಾ ಮಹಿಳೆಯರ ಖಾತೆಗೆ ಹಣ ಜಮೆ ಆಗುವುದಿಲ್ಲ.

ಬೆಂಗಳೂರು : ಬಹು ನಿರೀಕ್ಷಿತ ಗೃಹ ಲಕ್ಷ್ಮೀ ಯೋಜನೆಗೆ ಚಾಲನೆ ಸಿಕ್ಕಿದೆ. ಗೃಹಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿಯ ಬ್ಯಾಂಕ್ ಖಾತೆಗೆ 2 ಸಾವಿರ ರೂಪಾಯಿ ಜಮೆಯಾಗಲಿದೆ. ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು 1 ಕೋಟಿ 33 ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಿದ್ದಾರೆ. ಆದರೆ, ಇಲ್ಲಿಯವರೆಗೆ ಯೋಜನೆಯಡಿ 1 ಕೋಟಿ 11 ಲಕ್ಷ ಮಹಿಳೆಯರು ನೋಂದಣಿ ಮಾಡಿದ್ದಾರೆ.
ನೋಂದಣಿ ಮಾಡಿದ ಎಲ್ಲಾ ಮಹಿಳೆಯರ ಖಾತೆಗೆ ಬರುವುದೇ ಹಣ :
ಇಲ್ಲಿಯವರೆಗೆ ರಾಜ್ಯದ 1 ಕೋಟಿ 11 ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಆದರೆ ಯೋಜನೆಯಲ್ಲಿ ನೋಂದಾಯಿಸಿರುವ ಎಲ್ಲಾ ಮಹಿಳೆಯರ ಖಾತೆಗೆ ಹಣ ಜಮೆ ಆಗುವುದಿಲ್ಲ.
ಯಾರ ಖಾತೆಗೆ ಆಗಲಿದೆ ಹಣ ವರ್ಗಾವಣೆ :
ಆಗಸ್ಟ್ 15 ರವರೆಗೆ ಯಾವ ಮಹಿಳೆಯರು ಅರ್ಜಿ ಸಲ್ಲಿಕೆ ಮಾಡಿದ್ದಾರೆಯೋ ಅವರ ಅಕೌಂಟ್ ಗೆ ಮಾತ್ರ ಹಣ ವರ್ಗಾವಣೆಯಾಗಲಿದೆ. ಆಗಸ್ಟ್ 15 ರ ನಂತರ ಅರ್ಜಿ ಸಲ್ಲಿಕೆ ಮಾಡಿದವರ ಖಾತೆಗೆ ಅಕ್ಟೋಬರ್ ನಲ್ಲಿ ಹಣ ಜಮೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.
ಈಗಾಗಲೇ ಜಿಲ್ಲಾವಾರು ಲಿಸ್ಟ್ ಬಿಡುಗಡೆ :
1 ಕೋಟಿ 8 ಲಕ್ಷದ 48 ಸಾವಿರದ 6 ಮಹಿಳೆಯರ ಅಕೌಂಟ್ ಗೆ ಹಣ ಹಾಕಲು ಸಿದ್ದತೆ ನಡೆಸಲಾಗಿದೆ. ಇಂದಿನಿಂದ ಅಕೌಂಟ್ DBT ಮೂಲಕ ಹಣ ಹಾಕಲು ಎಲ್ಲಾ ರೀತಿಯ ತಯಾರಿ ನಡೆಸಲಾಗಿದೆ. ಹಂತ ಹಂತವಾಗಿ ಅಕೌಂಟ್ ಗೆ ಹಣ ವರ್ಗಾವಣೆಯಾಗಲಿದೆ. ಇಂದು ಯಾರ ಅಕೌಂಟ್ ಗೆ ಹಣ ಬರಲಿದೆ ಎನ್ನುವ ಮೆಸೇಜ್ ಕೂಡಾ ಬರಲಿದೆ.
ನೀವು ಗೃಹಲಕ್ಷ್ಮಿ ಯೋಜನೆಗೆ ಆಯ್ಕೆಯಾಗಿದ್ದೀರಿ. ಶೀಘ್ರದಲ್ಲೇ ನಿಮ್ಮ ಅಕೌಂಟ್ ಗೆ ಹಣ ಜಮೆಯಾಗಲಿದೆ ಎನ್ನುವ ಮೆಸೇಜ್ ಅನ್ನು ಮಹಿಳೆಯರ ಫೋನ್ ನಂಬರ್ ಗೆ ಇಲಾಖೆ ಮೆಸೇಜ್ ಕಳುಹಿಸಿದೆ. ಯಾರ ಫೋನ್ ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯಿಂದ ಈ ಅಧಿಕೃತ ಮಾಹಿತಿ ಬಂದಿದೆಯೋ ಅವರ ಖಾತೆಗೆ ಇಂದು ಹಣ ವರ್ಗಾವಣೆಯಾಗಲಿದೆ.