ಜೀವನ ಮತ್ತು ಆರೋಗ್ಯ ವಿಮಾ ಪಾಲಿಸಿಗಳಿಗೆ ಜಿಎಸ್‌ಟಿ ವಿನಾಯಿತಿ – ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರಕ್ಕೆ ಅಭಿನಂದನೆ.

ಚಿತ್ರದುರ್ಗ ಸೆ. 05

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ದೇಶವಾಸಿಗಳ ಆರೋಗ್ಯ ಮತ್ತು ಸುರಕ್ಷತೆಗಾಗಿ ಮೊದಲ ಬಾರಿಗೆ, ಎಲ್ಲಾ ಜೀವನ ಮತ್ತು ಆರೋಗ್ಯ ವಿಮಾ ಪಾಲಿಸಿಗಳು ಜಿಎಸ್‍ಟಿಯಿಂದ ಸಂಪೂರ್ಣವಾಗಿ ವಿನಾಯಿತಿ ಪಡೆದಿವೆ ಇದರರ್ಥ ಪ್ರತಿಯೊಬ್ಬ ಭಾರತೀ ಯರಾದ-ಯುವ ವೃತ್ತಿಪರರು, ಕುಟುಂಬಸ್ಥರು, ಅಥವಾ ಹಿರಿಯ ಪ್ರಜೆಯಾಗಿರಬಹುದು ಈಗ ಇವರಿಗೆಲ್ಲ ರಕ್ಷಣೆ ನೀಡುವುದಾಗಿದೆ ಎಂದು ಭಾರತೀಯ ಜನತಾ ಪಾರ್ಟಿ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾಧ ಕೆ.ಟಿ.ಕುಮಾರಸ್ವಾಮಿಯವರು ಕೇಂದ್ರ ಸರ್ಕಾರವನ್ನು ಅಭಿನಂದಿಸಿದ್ದಾರೆ.

ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು, ತೆರಿಗೆ ಹೊರೆಗಳ ಬಗ್ಗೆ ಚಿಂತೆ ಇಲ್ಲದೆ ಜೀವ ಉಳಿಸುವ ಔಷಧಿಗಳು ಮತ್ತು ವೈದ್ಯಕೀಯ ಸಾಧನಗಳು ಸಹ ಗಮನಾರ್ಹವಾಗಿ ಅಗ್ಗವಾಗಿವೆ ಇದು ದೇಶವಾಸಿಗಳ ಆರೋಗ್ಯ ಮತ್ತು ಸುರಕ್ಷತೆಯನ್ನು ಎಲ್ಲಕ್ಕಿಂತ ಹೆಚ್ಚಾಗಿ ಭದ್ರತೆ ನಿಡುವ ಸರ್ಕಾರವಾಗಿದೆ. ಸಾಬೂನುಗಳು ಮತ್ತು ಶ್ಯಾಂಪೂಗಳಿಂದ ಹಿಡಿದು ಬೈಸಿಕಲ್‍ಗಳು ಮತ್ತುಕಿಚನ್‍ವೇರ್‍ವ ಗೆ,ಜಿಎಸ್‍ಟಿ ದರಗಳನ್ನು 5%ಕ್ಕೆ ಇಳಿಸಲಾಗಿದೆ ಹಾಲು, ಪನೀರ್, ಚಪಾತಿ, ಪರೋಟಾ-ಎಲ್ಲಾ ಅಗತ್ಯ ವಸ್ತುಗಳು-ಈಗ ತೆರಿಗೆ ಮುಕ್ತವಾಗಿದೆ ಇದು ನೇರವಾಗಿ ಗ್ರಾಹಕರಿಗೆ ನೀಡುವ ಪರಿಹಾರವಾಗಿದೆ ಸಾಮಾನ್ಯ ಜನತೆ ಹಾಗೂ ಮಧ್ಯಮ ವರ್ಗದ ಜನತೆಗೆ ಜೀವನಕ್ಕೆ ನೀಡಿದ ಮಹತ್ವಾಕಾಂಕ್ಷೆಯಾಗಿದೆ ಎಂದಿದ್ದಾರೆ.

ಇದು ರೈತರ ಅಭಿವೃದ್ಧಿಗೆ ಒತ್ತು ನೀಡಿದೆ. ನಮ್ಮ ರೈತರು ಅಭೀವೃದ್ಧಿಗೆ ಮುಖ ಮಾಡಿ ನಿಂತಿದ್ದಾರೆ.ಟ್ರಾಕ್ಟರುಗಳು, ಕೃಷಿ- ಉಪಕರಣಗಳು ಮತ್ತು ರಸಗೊಬ್ಬರಗಳು ಈಗ ಕೇವಲ 5% ಜಿಎಸ್‍ಟಿಗೆ ಒಳಪಡುತ್ತವೆ ಇದು ವೆಚ್ಚವನ್ನು ಕಡಿಮೆ ಮಾಡುತ್ತಾ ಉತ್ಪಾದಕತಯನ್ನು ಹೆಚ್ಚಿಸುತ್ತದೆ ಸಣ್ಣ ವ್ಯಾಪಾರಿಗಳು, ಕುಶಲಕರ್ಮಿಗಳು ಮತ್ತು ಎಂಎಸ್ ಎಂಇಗಳು ಇದರಿಂದ ತುಂಬಾ ಪ್ರಯೋಜನ ಪಡೆಯುತ್ತವೆ ಕರಕುಶಲ ವಸ್ತುಗಳು, ಜವಳಿ ಮತ್ತು ನವೀಕರಿಸಬಹುದಾದ ಇಂಧನ ಸಾಧನಗಳ ದರಗಳು ಕಡಿಮೆಯಾಗಲಿವೆ. ಇದು ಸಬ್ಕಾ ಸಾಥ್, ಸಬ್ಕಾ ವಿಕಾಸ್ ಚಿಂತನೆಗೆ ಪೂರಕವಾಗಿದೆ ಎಂದು ತಿಳಿಸಿದರು.

ಏಕತೆ ಮತ್ತು ಒಗ್ಗಟ್ಟಿನ ಪ್ರದರ್ಶನ ರಾಜಕಿಯಕ್ಕಿಂತ ಮೊದಲು ರಾಷ್ಟ್ರ ಎಂಬ ಸಹಕಾರಿತತ್ವವನ್ನು ಪ್ರದರ್ಶಿಸುವಂತಿದೆ. ಜನರ ಪರ, ಬಡವರ ಪರ, ಮಧ್ಯಮವರ್ಗದವರ ಪರವಾದ ನಿರ್ಣಯ ಇದಾಗಿದೆ.ನೇರವಾಗಿ ಜೀವನ ವೆಚ್ಚವನ್ನು ಕಡಿಮೆ ಮಾತ್ತದೆ ಮತ್ತು ದಿನನಿತ್ಯದ ಸರಕುಗಳನ್ನು ಕಡಿಮೆ ಕೈಗೆಟುಕುವ ದರದಲ್ಲಿ ದೊರೆಯುವಂತೆ ಜೀವನಕ್ಕೆ ಆಧಾರ ನೀಡುತ್ತದೆ ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ಆದ್ಯತೆಗಳಾಗಿ ರೈತರು ಮತ್ತು ಗ್ರಾಮೀಣ ಭಾರತವನ್ನು ಸಶಕ್ತಗೊಳಿಸುವುದಾಗಿದೆ ಎಂದಿದ್ದಾರೆ.

ಹಸಿರು ಮತ್ತು ಭವಿಷ್ಯ-ಸಿದ್ದಭಾರತದ ನಿರ್ಮಾಣ. ವ್ಯಾಪಾರ ಮತ್ತು ಪಾರದರ್ಶಕತೆಯಲ್ಲಿ ಸರಳೀಕರಣ. ಸಾಮಾನ್ಯ ನಾಗರಿಕರಿಗೆ/ ಮಧ್ಯಮ ವರ್ಗದವರಿಗೆ ಪರಿಹಾರ ಎಲಾ ಜೀವನ ಮತ್ತು ಆರೋಗ್ಯ ವಿಮಾ ಪಾಲಿಸಿಗಳ ಮೇಲೆ ಜಿಎಸ್ಟಿ ವಿನಾಯಿತಿ. ಶೂನ್ಯ ಜಿಎಸ್ಟಿ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಜಿಎಸ್‍ಟಿ 28% ರಿಂದ 18% ವರೆಗೆ ಟಿ.ವಿ. ಸೆಟ್ 28% ರಿಂದ 18% ವರೆಗೆ ಮಾನಿಟರ್‍ಗಳು ಮತ್ತು ಪ್ರೊಜೆಕ್ಟರ್‍ಗಳು 28% ರಿಂದ 18% ಡಿಶ್ ವಾóಷ್ ಯಂತ್ರಗಳು 28% ರಿಂದ 18%ಕ್ಕೆ ಇಳಿಕೆ.

2,500/- ರೂ ವರೆಗಿನ ಉಡುಪುಗಳ ಮೇಲೆ 5% ಜಿಎಸ್ಟಿ. ಜೀವ ಉಳಿಸು ಔಷಧಿಗಳು ಈಗ ಶೂನ್ಯ ಜಿಎಸ್ಟಿ ಸಣ್ಣ ಕಾರುಗಳು ಮತ್ತು ದ್ವಿಚಕ್ರ ವಾಹನಗಳು 28% ರಿಂದ 18% ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಮೇಲೆ 10% ರಿಂದ 20% ಸೆಸ್ ಅನ್ನು ಶೂನ್ಯಕ್ಕೆ ಇಳಿಸಲಾಗಿದೆ ಸರಕು ಸಾಗಣೆ ಮತ್ತು ಬಹು ಮಾದರಿ ಸಾರಿಗೆಯ ಬಾಡಿಗೆ 12% ರಿಂದ 5% ಕ್ಕೆ ಇಳಿಸಲಾಗಿದೆ ವಿವಿಧ ಮೋಟಾರು ವಾಹನಗಳು ಮತ್ತು ಬಿಡಿಭಾಗಗಳನ್ನು 28% ರಿಂದ 18% ಕ್ಕೆ ಇಳಿಸಲಾಗಿದೆ ತ್ವರಿತ ವಿವಾದ ಪರಿಹಾರಕ್ಕಾಗಿ 2025 ರ ಅಂತ್ಯದ ವೇಳೆಗೆ ಜಿಎಸ್ಟಿ ಮೇಲ್ಮನವಿ ನ್ಯಾಯ ಮಂಡಳಿ (ಜಿಎಸ್ಟಿಎಟಿ) ಕಾರ್ಯಾರಂಭ ಮಾಡಲಿದೆ. 2025ರ ಡಿಸೆಂಬರನಿಂದ ಜಿಎಸ್ಟಿ ನ್ಯಾಯಮಂಡಳಿ ವಿಚಾರಣೆ ಆರಂಭವಾಗದೆ ಎಂದಿದ್ದಾರೆ.

Views: 18

Leave a Reply

Your email address will not be published. Required fields are marked *