ಜಿಎಸ್‌ಟಿ ದರ ಕಡಿತದಿಂದ ದಿನನಿತ್ಯದ ವಸ್ತುಗಳು ಅಗ್ಗ – ಬಡ, ಮಧ್ಯಮ ವರ್ಗಕ್ಕೆ ಸಿಹಿ ಸುದ್ದಿ

ಚಿತ್ರದುರ್ಗ ಸೆ. 22

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817


ಕೇಂದ್ರ ಸರ್ಕಾರ ಜನತೆಗೆ ಒಳ್ಳೆಯದಾಗಲಿ ಎಂದು ಜಿ.ಎಸ್.ಟಿ. ದರದಲ್ಲಿ ಶೇ 28 ರಿಂದ 18 ಕ್ಕೆ , ಶೇ12 ರಿಂದ 5ಕ್ಕೆ ತೆರಿಗೆ
ಇಳಿಕೆಯಾಗಿದೆ. ಇದರಿಂದ ಎಲ್ಲಾ ಜನತೆಗೆ ಅಗ್ಗದ ದರದಲ್ಲಿ ಮಂದಿನ ದಿನದಲ್ಲಿ ವಸ್ತುಗಳು ಲಭ್ಯವಾಗಲಿದೆ. ದುಬಾರಿಯಾದ ಜನ ಜೀವನ ಮುಂದಿನ ದಿನದಲ್ಲಿ ಸುಗಮವಾಗಲಿದೆ ಬಡವರಿಗೆ ಮಧ್ಯಮ ವರ್ಗದ ವರಿಗೆ ದೊಡ್ಡ ಪ್ರಮಾಣದಲ್ಲಿ ಸಹಾಯವಾಗಲಿದೆ. ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ತಿಳಿಸಿದ್ದಾರೆ.


ಭಾರತೀಯ ಜನತಾ ಪಾರ್ಟಿವತಿಯಿಂದ ಸೋಮವಾರ ನಗರದ ಗಾಂಧಿ ವೃತ್ತದಲ್ಲಿ ಕೇಂದ್ರ ಸರ್ಕಾರ ಜಿ.ಎಸ್.ಟಿ. ದರದಲ್ಲಿ ಕಡಿತ ಮಾಡಿರುವುದನ್ನು ಸ್ವಾಗತಿಸಿ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದು ಈ ಸಮಯದಲ್ಲಿ ಮಾತನಾಡಿದ ಅವರು, ಜಿಎಸ್‍ಟಿ ಸುಧಾರಣೆ ಕ್ರಮ ಆತ್ಮ ನಿರ್ಭರ ಭಾರತ ನಿರ್ಮಾಣದ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಜಿಎಸ್‍ಟಿ ಸುಧಾರಣೆಯನ್ನು ಉಳಿತಾಯ ಉತ್ಸವ ಇದರಿಂದ ದೇಶದ ಪ್ರಗತಿಯ ಕಥೆಗಳಿಗೆ ವೇಗ ಸಿಗಲಿದೆ, ಈ ಸುಧಾರಣೆಗಳು ಉದ್ಯಮದ ಸರಳತೆಯನ್ನು ಹೆಚ್ಚಿಸಿ, ಹೂಡಿಕೆದಾರರನ್ನು ಆಕರ್ಷಿಸಲಿವೆ ಮುಂದಿನ ಪೀಳಿಗೆಯ ಜಿಎಸ್‍ಟಿ ಸುಧಾರಣೆಗಳು ನಾಗರಿಕರಿಗೆ ಡಬಲ್ ಧಮಾಕಾ ಆಗಿರಲಿವೆ. ಇವು ಸಾರ್ವಜನಿಕರ ಖರ್ಚನ್ನು ಕಡಿತಗೊಳಿಸಿ, ಉಳಿತಾಯ ಹೆಚ್ಚಿಸಿಕೊಂಡು ಕನಸನ್ನು ಸಾಕಾರಗೊಳಿಸಿಕೊಳ್ಳಲು ನೆರವಾಗಲಿವೆ ಎಂದರು.

ಡಬಲ್ ಧಮಾಕಾದಿಂದ ಜನರ ಜೀವನಮಟ್ಟ ಸುಧಾರಣೆ ಈ ಎರಡು ನಿರ್ಣಯಗಳಿಂದ ದೇಶದ ಜನರಿಗೆ 2.5 ಲಕ್ಷ ಕೋಟಿ ರೂ. ಉಳಿತಾಯವಾಗಲಿದೆ ರಾಜ್ಯಗಳು ಉತ್ಪಾದನೆ ಹೆಚ್ಚಿಸಬೇಕು ಹಾಗೂ ಹೂಡಿಕೆಗೆ ಅನುಕೂಲಕರ ವಾತಾವರಣ ಸೃಷ್ಟಿಸಬೇಕು. ದೇಶ ಮತ್ತು ರಾಜ್ಯಗಳು ಜತೆಯಾಗಿ ಕಾರ್ಯ ನಿರ್ವಹಿಸಿದಾಗ ಸ್ವಾವಲಂಬಿ ಭಾರತದ ಕನಸು ನನಸಾಗುತ್ತದೆ ಜಿಎಸ್‍ಟಿ ಸುಧಾರಣೆಗಳಿಂದಾಗಿ ಪ್ರಾಥಮಿಕವಾಗಿ ಶೇ.5 ಮತ್ತು ಶೇ.18ರ ಫ್ಲ್ಯಾಬ್‍ಗಳು ಮಾತ್ರ ಇರಲಿವೆ. ದಿನನಿತ್ಯದ ಆಹಾರ ಉತ್ಪನ್ನಗಳು, ಔಷಧಗಳು, ಸಾಬೂನು, ಟೂತ್ ಬ್ರಷ್, ಟೂತ್‍ಪೇಸ್ಟ್ ಮಾತ್ರವಲ್ಲದೆ ಆರೋಗ್ಯ ಮತ್ತು ಜೀವ ವಿಮೆಗಳು ಮುಂತಾದ ಸರಕು-ಸೇವೆಗಳು ತೆರಿಗೆಮುಕ್ತವಾಗಿರಲಿವೆ ಇಲ್ಲವೇ ಶೇ.5ರ ತೆರಿಗೆ ವ್ಯಾಪ್ತಿಗೆ ಬರಲಿವೆ. ಅಲ್ಲದೆ ಈ ಹಿಂದೆ ಶೇ.12ರ ತೆರಿಗೆ ವ್ಯಾಪ್ತಿಯಲ್ಲಿದ್ದ ಶೇ.99ರಷ್ಟು ಉತ್ಪನ್ನಗಳು ಈ ಶೇ.5ರ ತೆರಿಗೆ ವ್ಯಾಪ್ತಿಗೆ ಬರುತ್ತಿವೆ ಎಂದು ತಿಳಿಸಿದರು.

ರಾಜ್ಯ ರೈತ ಮೋರ್ಚಾದ ಕಾರ್ಯದರ್ಶಿ ಮಲ್ಲಿಕಾರ್ಜನ್ ಮಾತನಾಡಿ, ಜಿಎಸ್‍ಟಿ ದರದ ಪರಿಷ್ಕರಣೆ ಸರ್ಕಾರದ ‘ನಾಗರಿಕ ದೇವೋ ಭವ’ ಎಂಬ ಮಂತ್ರವನ್ನು ಪ್ರತಿನಿಧಿಸುತ್ತದೆ. ಈ ಪರಿಷ್ಕರಣೆ ನಿರ್ಮಾಣ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಖರ್ಚನ್ನು ತಗ್ಗಿಸುವ ಜತೆಗೆ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಇಳಿಸಲಿದೆ ನವರಾತ್ರಿ ಮೊದಲ ದಿನ ಭಾರತದ ದೊಡ್ಡ ಹೆಜ್ಜೆಯಾಗಿದೆ ಜಿಎಸ್‍ಟಿಯ ಪ್ರಮುಖ ಸುಧಾರಣೆ ಕ್ರಮ ಜಾರಿ ಜನರು ಇಷ್ಟಪಡುವ ವಸ್ತು ಖರೀದಿಸಬಹುದು,ಬಡವ, ಮಧ್ಯಮ, ವರ್ಗ ಖುಷಿ ಯುವಕರು, ರೈತ, ಮಹಿಳೆ, ವರ್ತಕರಿಗೆ ಲಾಭ ? 1ದೇಶ 1ತೆರಿಗೆ ಕನಸು ಜಿಎಸ್‍ಟಿಯಿಂದ ಸಾಕಾರವಾಗಿದೆ ಸರಕು ಮತ್ತು ಸೇವಾ ತೆರಿಗೆ ಸುಧಾರಣೆ ಕ್ರಮದಡಿ ಸೋಮವಾರದಿಂದಲೇ ದೇಶಾದ್ಯಂತ ಹೊಸ ದರಗಳು ಜಾರಿಗೆ ಬರುತ್ತಿದೆ. ಇದರಿಂದಾಗಿ ದಿನಬಳಕೆಯ ವಸ್ತು,ಔಷಧ, ಆಟೋಮೊಬೈಲ್ ಸೇರಿದಂತೆ ಸುಮಾರು 375 ವಸ್ತುಗಳ ಬೆಲೆ ಇಳಿಕೆ ಆಗಲಿದೆ.

ಇತ್ತೀಚೆಗೆ ನಡೆದಿದ್ದ ಜಿಎಸ್‍ಟಿ ಕೌನ್ಸಿಲ್ಸ ಭೆಯಲ್ಲಿ ಚಾಲ್ತಿಯಲ್ಲಿದ್ದ 5%, 12%, 18% ಮತ್ತು 28% ತೆರಿಗೆ ಸ್ಟ್ರಾಬ್‍ಗಳನ್ನು 5% ಮತ್ತು 18% ಗೆ ನಿಗದಿಪಡಿಸಲಾಗಿತ್ತು. ಇದರಿಂದಾಗಿ ತುಪ್ಪ, ಪನ್ನೀರ್, ಬೆಣ್ಣೆ, ನಮ್‍ಕೀನ್, ಕೆಚಪ್, ಜಾಮ್, ಡೈ ಫೂಟ್ಸ್, ಕಾಫಿ, ಐಸ್ ಕ್ರೀಂಗಳು, ಟಿವಿ, ಎಸಿ, ವಾಷಿಂಗ್ ಮಷಿನ್, ಕಾರು, ಬೈಕ್‍ಗಳು ಸೇರಿದಂತೆ ಸಾಮೂಹಿಕ ಬಳಕೆ ವಸ್ತುಗಳ ಬೆಲೆ ಕಡಿಮೆಯಾಗಲಿದೆ. ಜಿಎಸ್‍ಟಿಯನ್ನು ಸರಿದೂಗಿಸುವ ದೃಷ್ಟಿಯಿಂದ ಈಗಾಗಲೇ ಹಲವು ಎಫ್‍ಎಂಸಿಜಿ ಕಂಪನಿಗಳು ತಮ್ಮ ಉತ್ಪನ್ನಗಳ ಮೇಲಿನ ಬೆಲೆ ಕಡಿತವನ್ನು ಘೋಷಿಸಿವೆ. ಸರ್ಕಾರದ ಸೂಚನೆಯಂತೆ ಔಷಧಗಳ ಎಂಆರ್‍ಪಿಯನ್ನೂ ಪರಿಷ್ಕರಿಸಲಾಗಿದೆ. ಕಾರು, ಬೈಕ್‍ಗಳು ಅಗ್ಗವಾಗಲಿವೆ. ಸ್ವದೇಶಿ
ಉತ್ಪನ್ನಗಳ ವೈಭವ ಮರುಕಳಿಸಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮ(ಎಂಎಸ್‍ಎಂಇ)ಗಳಿಗೆ ಜಿಎಸ್‍ಟಿ ಸುಧಾರಣೆ ಹೆಚ್ಚಿನ ಪ್ರಯೋಜನ ನೀಡಲಿದ್ದು, ಸ್ವದೇಶಿ ನಿರ್ಮಿತ ಉತ್ಪನ್ನಗಳ ವೈಭವ ಮರುಕಳಿಸುವಂತಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟರು. ಭಾರತದ ಸೂಕ್ಷ್ಮ, ಸಣ್ಣ ಮತ್ತು ಗೃಹ ಕೈಗಾರಿಕೆಗಳು ಸ್ವಾವಲಂಬಿ ಭಾರತವನ್ನು ನಿರ್ಮಿಸುವಲ್ಲಿ ಪ್ರಮುಖಪಾತ್ರ ವಹಿಸುತ್ತವೆ. ಹೀಗಾಗಿ ದೇಶದಲ್ಲಿನ ಉತ್ಪಾದನೆಗಳು ಸಾಧ್ಯವಾದಷ್ಟೂ ಹೆಚ್ಚಾಗಲಿ ಎಂದು ತಿಳಿಸಿದರು.

ಇದಕ್ಕೂ ಮುನ್ನಾ ನಗರದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನೀಲಕಂಠೇಶ್ವರ ಸ್ವಾಮಿ ವಿಶೇಷ ಪೂಜೆಯನ್ನು ಸಲ್ಲಿಸಿ ದೇಶದ ಪ್ರಧಾನ ಮಂತ್ರಿ ಮೋದಿಯವರಿಗೆ ಆರೋಗ್ಯ, ಆಯಷ್ಸು ನೀಡುವಂತೆ ಪ್ರಾರ್ಥನೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಾಪುರ ಸುರೇಶ್, ರೈತ ಮೋರ್ಚಾದ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ರಾಜ್ಯ ಮಹಿಳಾ ಮೋರ್ಚಾ ಸದಸ್ಯರಾದ ಶ್ರೀಮತಿ ಶ್ಯಾಮಲ ಶಿವಪ್ರಕಾಶ್, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಮಂಡಲದ ಅಧ್ಯಕ್ಷ ಎಕ.ನಾಗರಾಜ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಜಿಲ್ಲಾ ಕಾರ್ಯದರ್ಶಿ ಮೋಹನ್, ಲಿಂಗರಾಜು, ಕಿರಣ್, ಚಾಲುಕ್ಯ ನವೀನ್, ನಂದಿ ನಾಗರಾಜ್, ಶಂಭು, ಪರಶುರಾಮ್, ಚಂದ್ರಿಕಾ ಕವನ, ಬಸಮ್ಮ, ಲೀಲಾವತಿ, ಶಾಂತಮ್ಮ, ಕವಿತ, ಮಹಾಂತೇಶ್ ಯಾದವ್, ದೇವೇಂದ್ರಪ್ಪ, ರಮೇಶ್, ಶಶಿಧರ್, ಮಲ್ಲಿಕಾರ್ಜನ್ ಸಿದ್ದೇಶ್, ಕುಮಾರ ಮಾರಘಟ್ಟ, ರಂಗಸ್ವಾಮಿ, ಅಣ್ಣಪ್ಪ, ವಂಸತ್ ಸೇರಿದಂತೆ ಇತರರು ಭಾಗವಹಿಸಿದ್ದರು.

Views: 41

Leave a Reply

Your email address will not be published. Required fields are marked *