GT vs DC Live Score, IPL 2023: ಡೆಲ್ಲಿ ಕ್ಯಾಪಿಟಲ್ಸ್ 4ನೇ ವಿಕೆಟ್ ಪತನ

GT vs DC Live Score, IPL 2023: ಡೆಲ್ಲಿ ಕ್ಯಾಪಿಟಲ್ಸ್ 4ನೇ ವಿಕೆಟ್ ಪತನ
GT vs DC Live Score, IPL 2023

GT vs DC Live Score, IPL 2023: ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ನ 44ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಸತತ ಸೋಲುಗಳಿಂದ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಆದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಅನ್ನು ಸೋಲಿಸುವುದು ಅಂದುಕೊಂಡಷ್ಟು ಸುಲಭವಲ್ಲ.

ಪ್ರಸ್ತುತ ಪಾಯಿಂಟ್ಸ್ ಟೇಬಲ್​ನಲ್ಲಿ 8 ಪಂದ್ಯಗಳಲ್ಲಿ 6 ಗೆಲುವು ದಾಖಲಿಸಿರುವ ಗುಜರಾತ್ ಟೈಟಾನ್ಸ್ ತಂಡವು ಅಗ್ರಸ್ಥಾನ ಅಲಂಕರಿಸಿದರೆ. ಡೆಲ್ಲಿ ಕ್ಯಾಪಿಟಲ್ಸ್​ ತಂಡವು 8 ಪಂದ್ಯಗಳಲ್ಲಿ ಕೇವಲ 2 ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ ಇದು ಅಗ್ರಸ್ಥಾನ-ಕೊನೆಯ ಸ್ಥಾನದಲ್ಲಿರುವ ತಂಡಗಳ ಹಣಾಹಣಿ ಎನ್ನಬಹುದು.

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಡೇವಿಡ್ ವಾರ್ನರ್(ನಾಯಕ), ಫಿಲಿಪ್ ಸಾಲ್ಟ್(ವಿಕೆಟ್ ಕೀಪರ್), ಮನೀಶ್ ಪಾಂಡೆ, ರಿಲೀ ರೊಸೊವ್, ಪ್ರಿಯಮ್ ಗರ್ಗ್, ಅಕ್ಷರ್ ಪಟೇಲ್, ರಿಪಾಲ್ ಪಟೇಲ್, ಅಮನ್ ಹಕೀಮ್ ಖಾನ್, ಕುಲದೀಪ್ ಯಾದವ್, ಅನ್ರಿಕ್ ನೋಕಿಯಾ, ಇಶಾಂತ್ ಶರ್ಮಾ.

ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಅಭಿನವ್ ಮನೋಹರ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಜೋಶುವಾ ಲಿಟಲ್

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಡೇವಿಡ್ ವಾರ್ನರ್(ನಾಯಕ), ಫಿಲಿಪ್ ಸಾಲ್ಟ್(ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ಮನೀಶ್ ಪಾಂಡೆ, ಪ್ರಿಯಂ ಗರ್ಗ್, ಅಕ್ಷರ್ ಪಟೇಲ್, ರಿಪಾಲ್ ಪಟೇಲ್, ಕುಲದೀಪ್ ಯಾದವ್, ಅನ್ರಿಕ್ ನೋಕಿಯಾ, ಇಶಾಂತ್ ಶರ್ಮಾ, ಮುಖೇಶ್ ಕುಮಾರ್, ಸರ್ಫರಾಜ್ ಖಾನ್, ಲಲಿತ್ ಯಾದವ್, ಅಭಿಷೇಕ್ ಪೊರೆಲ್, ಖಲೀಲ್ ಅಹ್ಮದ್, ಪ್ರವೀಣ್ ದುಬೆ, ರಿಲೀ ರೊಸೊವ್, ಲುಂಗಿ ಎನ್‌ಗಿಡಿ, ಮುಸ್ತಾಫಿಜುರ್ ರೆಹಮಾನ್, ರೋವ್‌ಮನ್ ಪೊವೆಲ್, ಪೃಥ್ವಿ ಶಾ, ಚೇತನ್ ಸಕರಿಯಾ, ಅಮನ್ ಹಕೀಮ್ ಖಾನ್, ಯಶ್ ಧುಲ್, ವಿಕ್ಕಿ ಒಸ್ತ್ವಾಲ್

ಗುಜರಾತ್ ಟೈಟಾನ್ಸ್ ತಂಡ: ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಅಭಿನವ್ ಮನೋಹರ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಜೋಶುವಾ ಲಿಟಲ್, ಶುಭಮನ್ ಗಿಲ್, ಶ್ರೀಕರ್ ಭರತ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಶಿವಂ ಮಾವಿ, ಜಯಂತ್ ಯಾದವ್, ಪ್ರದೀಪ್ ಸಾಂಗ್ವಾನ್, ಮ್ಯಾಥ್ಯೂ ವೇಡ್, ದಾಸುನ್ ಶನಕ, ಒಡೆಯನ್ ಸ್ಮಿತ್, ಅಲ್ಜಾರಿ ಜೋಸೆಫ್, ದರ್ಶನ್ ನಲ್ಕಂಡೆ, ಉರ್ವಿಲ್ ಪಟೇಲ್, ಸಾಯಿ ಸುದರ್ಶನ್, ಯಶ್ ದಯಾಳ್.

 

source https://tv9kannada.com/sports/cricket-news/gujarat-titans-vs-delhi-capitals-live-score-ipl-2023-match-scorecard-online-at-narendra-modi-stadium-ahmedabad-in-kannada-zp-568641.html

Leave a Reply

Your email address will not be published. Required fields are marked *