GT vs SRH: ಗುಜರಾತ್​​ಗೆ ಹ್ಯಾಟ್ರಿಕ್ ಜಯ ತಂದುಕೊಟ್ಟ ಗಿಲ್​-ಸಿರಾಜ್​! ಸನ್​ರೈಸರ್ಸ್​ ಹೈದರಾಬಾದ್​ಗೆ​ ಸತತ 4ನೇ ಸೋಲು

IPL 2025: ಸನ್​ರೈಸರ್ಸ್ ಹೈದರಾಬಾದ್ ಭದ್ರಕೋಟೆಯಲ್ಲಿ ಕಮಿನ್ಸ್ ಪಡೆ ನೀಡಿದ್ದ 153 ರನ್​ಗಳಸ ಸಾಧಾರಣ ಗುರಿಯನ್ನ ಟೈಟನ್ಸ್ ಕೇವಲ 16.4 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಐಪಿಎಲ್ 2025ರ 19ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗುಜರಾತ್ ಟೈಟನ್ಸ್ ಸುಲಭ ಜಯ ಸಾಧಿಸಿದೆ. ಸನ್​ರೈಸರ್ಸ್ ಹೈದರಾಬಾದ್ ಭದ್ರಕೋಟೆಯಲ್ಲಿ ಕಮಿನ್ಸ್ ಪಡೆ ನೀಡಿದ್ದ 153 ರನ್​ಗಳಸ ಸಾಧಾರಣ ಗುರಿಯನ್ನ ಟೈಟನ್ಸ್ ಕೇವಲ 16.4 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಗುಜರಾತ್ ಇದೀಗ ಹ್ಯಾಟ್ರಿಕ್ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು.


153 ರನ್‌ಗಳ ಗುರಿಯನ್ನು ಬೆನ್ನಟ್ಟುವ ಗುಜರಾತ್ ಆರಂಭ ನಿಧಾನಗತಿಯಲ್ಲಿತ್ತು. ತಂಡವು 15 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಸೂಪರ್ ಫಾರ್ಮ್​​ನಲ್ಲಿದ್ದ ಸಾಯಿ ಸುದರ್ಶನ್ ಕೇವಲ 5 ರನ್ ಗಳಿಸಿ ಔಟಾದರು. ಮತ್ತೊಬ್ಬ ಸ್ಟಾರ್ ಜೋಸ್ ಬಟ್ಲರ್ ಖಾತೆ ತೆರೆಯಲು ವಿಫಲರಾದರು. ವಾಷಿಂಗ್ಟನ್ ಸುಂದರ್ 29 ಎಸೆತಗಳಲ್ಲಿ 49 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.

ಗಿಲ್​-ಸುಂದರ್ 90 ರನ್​ಗಳ ಜೊತೆಯಾಟ

ಆದರೆ ನಾಯಕ ಶುಭಮನ್ ಗಿಲ್ ಹಾಗೂ ವಾಷಿಂಗ್ಟನ್ ಸುಂದರ್ 3ನೇ ವಿಕೆಟ್ ಜೊತೆಯಾಟದಲ್ಲಿ 56 ಎಸೆತಗಳಲ್ಲಿ 90 ರನ್​ಗಳ ಜೊತೆಯಾಟ ನೀಡಿ ತಂಡಕ್ಕೆ ಗೆಲುವನ್ನ ಖಚಿತಗೊಳಿಸಿದರು. ಗಿಲ್ 43 ಎಸೆತಗಳಲ್ಲಿ 61 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರ ಈ ಅದ್ಭುತ ಇನ್ನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿಗಳಿದ್ದವು. ವಾಷಿಂಗ್ಟನ್ ಸುಂದರ್ 29 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್​​ಗಳ ಸಹಿತ 49 ರನ್​ಗಳಿಗೆ ಆಲೌಟ್ ಆಗಿ ಕೇವಲ 1 ರನ್​ನಿಂದ ಮೊದಲ ಅರ್ಧಶತಕ ಮಿಸ್ ಮಾಡಿಕೊಂಡರು. ಸುಂದರ್ ಔಟಾದ ನಂತರ ಬಂದ ಇಂಪ್ಯಾಕ್ಟ್ ಪ್ಲೇಯರ್ ರುದರ್ಫೋರ್ಡ್ ಕೇವಲ 16 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 35 ರನ್ ಗಳಿಸಿ ಗುಜರಾತ್​​ಗೆ 7 ವಿಕೆಟ್​ಗಳ ಗೆಲುವು ತಂದುಕೊಟ್ಟರು.

ಸನ್​ರೈಸರ್ಸ್ ಹೈದರಾಬಾದ್ ಪರ ಮೊಹಮ್ಮದ್ ಶಮಿ 28ಕ್ಕೆ2 ವಿಕೆಟ್ ಪಡೆದರೆ, ನಾಯಕ ಕಮ್ಮಿನ್ಸ್ 26ಕ್ಕೆ1 ವಿಕೆಟ್ ಪಡೆದರು.

ಹೈದರಾಬಾದ್ ಇನ್ನಿಂಗ್ಸ್​ ಹೈಲೈಟ್ಸ್

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ಇಂದೂ ಕೂಡ ಪವರ್​ ಪ್ಲೇನಲ್ಲೇ ಆರಂಭಿಕರಿಬ್ಬರ ವಿಕೆಟ್ ಕಳೆದುಕೊಂಡಿತು. ಸಿರಾಜ್ ಆರಂಭಿಕ ಆಟಗಾರರಾದ ಟ್ರಾವಿಸ್ ಹೆಡ್(8) ಮತ್ತು ಅಭಿಷೇಕ್ ಶರ್ಮಾ (18) ವಿಕೆಟ್ ಪಡೆದು ಆಘಾತ ನೀಡಿದರು. ಇನ್ನ ಇಶಾನ್ ಕಿಶನ್ 14 ಎಸೆತಗಳಲ್ಲಿ 17 ರನ್ ಗಳಿಸಿ ಪ್ರಸಿಧ್​ ಬೌಲಿಂಗ್​​ನಲ್ಲಿ ಔಟ್ ಆಗುವ ಮೂಲಕ ಸತತ 4ನೇ ಪಂದ್ಯದಲ್ಲೂ ವೈಫಲ್ಯ ಅನುಭವಿಸಿದರು.

ನಿತೀಶ್ ಕುಮಾರ್ ರೆಡ್ಡಿ 34 ಎಸೆತಗಳಲ್ಲಿ 3 ಬೌಂಡರಿ ಸಹಿತ 31 ರನ್​ಗಳಿಸಿದರೆ, ಕಮಿಂದು ಮೆಂಡಿಸ್ 5 ಎಸೆತಗಳಲ್ಲಿ ಕೇವಲ 1 ರನ್​ಗಳಿಸಿ ಔಟ್ ಆದರು. ಯುವ ಬ್ಯಾಟರ್ ಅನಿಕೇತ್ ವರ್ಮಾ ಆಟ ಕೇವಲ 18ರನ್​ಗಳಿಗೆ ಸೀಮಿತವಾಯಿತು. ಕಮಿನ್ಸ್ ಅಜೇಯ 22 ರನ್​ಗಳಿಸಿ ತಂಡದ ಮೊತ್ತವನ್ನ 150ರ ಗಡಿ ದಾಟಿಸಿದರು.

ಗುಜರಾತ್ ಟೈಟನ್ಸ್ ಪರ ಮೊಹಮ್ಮದ್ ಸಿರಾಜ್ 17ಕ್ಕೆ4 ವಿಕೆಟ್ ಪಡೆದು ಮಿಂಚಿದರೆ, ಪ್ರಸಿಧ್ ಕೃಷ್ಣ 25ಕ್ಕೆ 2, ಸಾಯಿ ಕಿಶೋರ್ 24ಕ್ಕೆ 2 ವಿಕೆಟ್ ಪಡೆದು ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನ ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು.

Source: News 18 Kannada

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1
















Leave a Reply

Your email address will not be published. Required fields are marked *