ಆಣೆ ಪ್ರಮಾಣ ಮಾಡಿಸಿ,ವಾಮ ಮಾರ್ಗದಲ್ಲಿ ನನ್ನನ್ನು ಸೋಲಿಸಿದ್ದಾರೆ : ಹೆಚ್.ಆಂಜನೇಯ

 

ವರದಿ ಮತ್ತು ಫೋಟೋ ಕೃಪೆ
                    ಸುರೇಶ್ ಪಟ್ಟಣ್,                         
ಮೊ : 87220 22817

ಚಿತ್ರದುರ್ಗ,(ಮೇ.14) :  ಹೊಳಲ್ಕೆರೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಜನರಿಗೆ ಹಣದ ಜೊತೆ ದೇವರ ಪೋಟೋಗಳನ್ನು ಕೊಟ್ಟು ಆಣೆ ಪ್ರಮಾಣ ಮಾಡಿಸುವ ಮೂಲಕ ವಾಮ ಮಾರ್ಗದಲ್ಲಿ ನನ್ನನ್ನು ಸೋಲಿಸಿದ್ದಾರೆ ಎಂದು ಮಾಜಿ ಸಚಿವ ಹಾಗೂ ಹೊಳಲ್ಕೆರೆ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹೆಚ್.ಆಂಜನೇಯ ಆರೋಪಿಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ಬಹುಸಂಖ್ಯೆಯಲ್ಲಿ ಜನರು ಸೇರಿ ನನಗೆ ಬೆಂಬಲ ನೀಡುವ ಮೂಲಕ ಚುನಾವಣೆಯಲ್ಲಿ ನನಗೆ ಕೈ ಜೋಡಿಸಿದ್ದರು. ಇದರಿಂದ ವಿಚಲಿತರಾದ ಬಿಜೆಪಿ ಅಭ್ಯರ್ಥಿ ಮತದಾನದ ಹಿಂದಿನ ಒಂದೇ ದಿನದಲ್ಲಿ ಜನರಿಗೆ ಹಣ ಹಂಚಿಕೆ ಮಾಡಿದ್ದಾರೆ. ಜೊತೆಗೆ ಮಾತು ತಪ್ಪಿದರೆ ಶಿಕ್ಷೆ ತಪ್ಪದು ಎಂದು ದೇವರ ಪೋಟೋಗಳನ್ನು ಹಣದ ಜೊತೆ ಕೊಟ್ಟು, ಆಣೆ, ಪ್ರಮಾಣ ಮಾಡಿಸಿದ್ದಾರೆ. ಇದರಿಂದ ಜನರು ಬೆದರಿ ನನ್ನ ವಿರುದ್ದ ಮತ ಚಲಾಯಿಸಿದ್ದಾರೆ ಎಂದು ದೂರಿದರು.

ಕಾಂಗ್ರೇಸ್ ಪಕ್ಷದಲ್ಲಿರುವ ಕೆಲ ರ್ದುಬುದ್ದಿವಂತ ಮುಖಂಡರು ಚಂದ್ರಪ್ಪ ಅವರ ಜೊತೆ ಸೇರಿಕೊಂಡು ಹಣ ಹಂಚಿಕೆ ಮಾಡಿ ಪಕ್ಷ ಹಾಗೂ ನನಗೆ ಮೋಸ ಮಾಡಿದ್ದಾರೆ. ಇವರ ವಿರುದ್ದ ಪಕ್ಷ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಈ ಭಾರೀಯ ಚುನಾವಣೆ ಬಹಳ ಶಾಂತಯುತವಾಗಿ ನಡೆದಿದ್ದು, 6 ಸ್ಥಾನಗಳನ್ನು ಗೆಲ್ಲಬೇಕಿತ್ತು. ಆದರೆ ವಾಮ ಮಾರ್ಗ ಮತ್ತು ಪಕ್ಷ ದ್ರೋಹಿಗಳಿಂದ ನಾನು ಸೋಲಬೇಕಾಯಿತು.ಆದರೂ ಕೂಡ ನಾನು ಧೃತಿ ಗೆಡುವುದಿಲ್ಲ.

ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದ್ದು, ಆ ಮೂಲಕ ಜನರ ಸೇವೆ ಮಾಡುತ್ತೆನೆ ಎಂದು ಹೇಳಿದ ಅವರು, ಪ್ರಜಾತಂತ್ರದ ಮೇಲೆ ನಂಬಿಕೆ ಇಲ್ಲದ ಚಂದ್ರಪ್ಪ ಅಕ್ರಮವಾಗಿ ಹಣ ಮಾಡಿದ್ದು, ಇನ್ನೂ ಮುಂದೆ ಇದು ಯಾವುದು ಕೂಡ ನಡೆಯುವುದಿಲ್ಲ. ಅಧಿಕಾರಿಗಳ ಮೇಲೆ ದಬಬಾಳಿಕೆ ಮಾಡಿ ಕೆಲಸ ಮಾಡದೆ ಹಣಕ್ಕೆ ಚೆಕ್ ಬರೆಸಿಕೊಳ್ಳುವುದನ್ನು ನಿಲ್ಲಿಸಬೇಕು. ಕಾಂಗ್ರೇಸ್ ಪಕ್ಷ ಯಾವುದೇ ಅಕ್ರಮಗಳನ್ನು ಸಹಿಸುವುದಿಲ್ಲ. ಅಧಿಕಾರಿಗಳು ಚಂದ್ರಪ್ಪ ಅವರಿಗೆ ಹೆದರಿ ಚೆಕ್‍ಗಳನ್ನು ನೀಡಿದರೆ ಮುಂದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‍ಪೀರ್, ಪ್ರಚಾರ ಸಮಿತಿ ಅದ್ಯಕ್ಷ ಕೃಷ್ಣಮೂರ್ತಿ, ಜಿ.ಪಂ ಮಾಜಿ ಸದಸ್ಯ ನರಸಿಂಹರಾಜು ಹಾಜರಿದ್ದರು.

The post ಆಣೆ ಪ್ರಮಾಣ ಮಾಡಿಸಿ,ವಾಮ ಮಾರ್ಗದಲ್ಲಿ ನನ್ನನ್ನು ಸೋಲಿಸಿದ್ದಾರೆ : ಹೆಚ್.ಆಂಜನೇಯ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/Vh8Pmku
via IFTTT

Leave a Reply

Your email address will not be published. Required fields are marked *