ಚಿತ್ರದುರ್ಗದಲ್ಲಿ ಬೀದಿನಾಯಿಗಳು ಕಚ್ಚಿ ಎಳೆದಾಡಿರುವ ನವಜಾತ ಶಿಶುವಿನ ಅರ್ಧ ದೇಹ ಪತ್ತೆಯಾಗಿದೆ. ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ನಾಯಿಗಳು ಶವವನ್ನು ಎಳೆದು ತಂದಿರುವ ಶಂಕೆ ವ್ಯಕ್ತವಾಗಿದೆ. ಶಿಶುವಿನ ಮೃತದೇಹವನ್ನು ಸೂಕ್ತವಾಗಿ ವಿಲೇವಾರಿ ಮಾಡದಿರುವ ಬಗ್ಗೆ ಆರೋಪ ಕೇಳಿಬಂದಿದೆ.

ಚಿತ್ರದುರ್ಗ (ಡಿ.26): ಬೀದಿನಾಯಿಗಳು ಕಚ್ಚಿ ಎಳೆದಾಡಿರುವ ನವಜಾತ ಶಿಶುವೊಂದರ ಅರ್ಧ ದೇಹ ಪತ್ತೆಯಾಗಿರುವ ಘಟನೆ ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿಯ ವೆಂಕಟೇಶ್ವರ ಶಾಲೆ ಆವರಣದಲ್ಲಿ ನಡೆದಿದೆ.
ಶಿಶುವಿನ ಅರ್ಧಭಾಗ ಮಾತ್ರ ಪತ್ತೆಯಾಗಿದೆ. ಬೀದಿನಾಯಿಗಳು ಎಳೆದಾಡಿರುವ ಶಿಶು ಶವ ಭಯಾನಕವಾಗಿ ಕಾಣುತ್ತಿದೆ. ಬಸವೇಶ್ವರ ವೈದ್ಯಕೀಯ ಕಾಲೇಜು, ಆಸ್ಪತ್ರೆ ಆವರಣದಿಂದ ನಾಯಿಗಳು ಎಳೆದು ತಂದಿರುವ ಶಂಕೆ ವ್ಯಕ್ತವಾಗಿದೆ. ಮೃತ ಶಿಶು ಸೂಕ್ತ ಡಿಸ್ಪೋಸ್ ಮಾಡದ ನಿರ್ಲಕ್ಷ್ಯ ಮಾಡಿರುವ ಆರೋಪ ಕೇಳಿಬಂದಿದೆ. ಬೇಕಾಬಿಟ್ಟಿಯಾಗಿ ಶಿಶು ಮೃತದೇಹ ಆವರಣದಲ್ಲಿ ಬಿಸಾಡಿರುವ ಹಿನ್ನೆಲೆ ಬೀದಿನಾಯಿಗಳು ಎಳೆದು ತಂದಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಚಿತ್ರದುರ್ಗ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ.