Happy Karnataka Rajyotsava 2023: ಕನ್ನಡ ರಾಜ್ಯೋತ್ಸವದಂದು ಈ ವಿಶೇಷ ಸಾಲುಗಳ ಮೂಲಕ ಶುಭಾಶಯ ತಿಳಿಸಿ

ಕನ್ನಡ ರಾಜ್ಯೋತ್ಸವದ ಸುದಿನ ನೀವು ನಿಮ್ಮ ಸ್ನೇಹಿತರಿಗೆ, ಬಂಧುಗಳಿಗೆ ಮತ್ತು ಸಮಸ್ತ ಕನ್ನಡ ನಾಡಿನ ಜನತೆಗೆ ಶುಭಾಶಯ ಹೇಗೆ ತಿಳಿಸಬೇಕು, ಫೇಸ್​ಬುಕ್​, ವಾಟ್ಸ್​​ಅಪ್​ ಮತ್ತು ಇನ್ಸ್ಟಾಗ್ರಾಮ್​​ನಲ್ಲಿ ಯಾವ ಸಾಲುಗಳನ್ನು ಬರೆದು ಫೋಸ್ಟ್​​ ಹಾಕಬೇಕು ಎಂಬ ಗೊಂದಲಕ್ಕೆ ಇಲ್ಲಿದೆ ಪರಿಹಾರ…

ಕರ್ನಾಟಕ ಕವಿಗಳ ತವರೂರು, ದಾಸರ ನಾಡು, ಶ್ರೀಗಂಧದ ಬೀಡು. ಕರುನಾಡು ಸಂಸ್ಕೃತಿ-ಸಂಸ್ಕಾರಕ್ಕೆ ಹೆಸರುವಾಸಿಯಾಗಿದೆ. ನಮ್ಮ ನೆಲದ ವಚನ ಸಾಹಿತ್ಯ ವಿಶ್ವಕ್ಕೆ ಶಾಸನ ಇದ್ದಹಾಗೆ. ಇಲ್ಲಿನ ರಾಜಮನೆತನದ ಮಹರಾಜರು ರಾಷ್ಟ್ರಕ್ಕೆ ಕಳಸಪ್ರಾಯವಾದವರು. ವಿಜಯನಗರ, ಕಿತ್ತೂರು, ಹೊಯ್ಸಳ, ಬದಾಮಿ ಚಾಲೂಕ್ಯರು ನಾಡಿಗೆ ಕೊಟ್ಟಂತಹ ಕೊಡುಗೆ ಅಪಾರ. ಕರ್ನಾಟಕದ ವಾಸ್ತುಶಿಲ್ಪ ನೋಡುಗರಿಗೆ ನಿಬ್ಬೆರಗಾಗಿಸುತ್ತದೆ. ಕನ್ನಡ ನೆಲದ ಅದೆಷ್ಟೋ ಜನರು ತಮ್ಮ ಸಾಧನೆ ಮೂಲಕ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇಂತಹ ಶ್ರೀಮಂತ, ಸಮೃದ್ಧ ನಾಡು ಕರ್ನಾಟಕ. ಇನ್ನೂ ಒಂದು ದಿನ ಕಳೆದರೇ ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಬರುತ್ತದೆ.

ಈ ಬಾರಿಯ ಕನ್ನಡ ರಾಜ್ಯೋತ್ಸವ ಬಹಳ ವಿಶೇಷತೆಯಿಂದ ಕೂಡಿದೆ. ಏಕೆಂದರೆ ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಿ 50 ವರ್ಷವಾಯಿತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕರ್ನಾಟಕ-50 ಎಂದು ವರ್ಷ ಪೂರ್ತಿ ಸಂಭ್ರಮಾಚರಣೆ ಮಾಡಲು ನಿರ್ಧರಿಸಿದೆ. ಈ ಸುದಿನ ನೀವು ನಿಮ್ಮ ಸ್ನೇಹಿತರಿಗೆ, ಬಂಧುಗಳಿಗೆ ಮತ್ತು ಸಮಸ್ತ ಕನ್ನಡ ನಾಡಿನ ಜನತೆಗೆ ಶುಭಾಶಯ ಹೇಗೆ ತಿಳಿಸಬೇಕು, ಫೇಸ್​ಬುಕ್​, ವಾಟ್ಸ್​​ಅಪ್​ ಮತ್ತು ಇನ್ಸ್ಟಾಗ್ರಾಮ್​​ನಲ್ಲಿ ಯಾವ ಸಾಲುಗಳನ್ನು ಬರೆದು ಫೋಸ್ಟ್​​ ಹಾಕಬೇಕು ಎಂಬ ಗೊಂದಲಕ್ಕೆ ಇಲ್ಲಿದೆ ಪರಿಹಾರ…

  1. ನಮ್ಮ ರಾಜ್ಯದ ಸುವರ್ಣ ಪರಂಪರೆಯನ್ನು ನೆನೆದು ಕರ್ನಾಟಕದ ಭಾಗವಾಗಿರುವುದಕ್ಕೆ ಹೆಮ್ಮೆ ಪಡೋಣ. ಕರ್ನಾಟಕ ರಾಜ್ಯೋತ್ಸವ ದಿನದ ಶುಭಾಶಯಗಳು.
  2. ಮನಸ್ಸಿನಲ್ಲಿ ಸ್ವಾತಂತ್ರ್ಯ, ಮಾತಿನಲ್ಲಿ ಶಕ್ತಿ, ರಕ್ತದಲ್ಲಿ ಶುದ್ಧತೆ ಮತ್ತು ನಮ್ಮ ಆತ್ಮದಲ್ಲಿ ಹೆಮ್ಮೆ, ಕರ್ನಾಟಕದ ಚೇತನಕ್ಕೆ ನಮನ ಸಲ್ಲಿಸೋಣ. ಕರ್ನಾಟಕ ರಾಜ್ಯೋತ್ಸವ 2023 ರ ಶುಭಾಶಯಗಳು.
  3. ಈ ವರ್ಷದ ಪ್ರತಿಯೊಂದು ಕ್ಷಣವೂ ಅನನ್ಯವಾಗಿರಲಿ, ಶುದ್ಧ ಆನಂದ ಮತ್ತು ನಿರ್ಣಯದಿಂದ ತುಂಬಿರಲಿ. ಕರ್ನಾಟಕ ರಾಜ್ಯೋತ್ಸವ 2023ರ ಶುಭಾಶಯಗಳು.
  4. ಕನ್ನಡಾಂಬೆಯ ಮಕ್ಕಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
  5. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
  6. ಕನ್ನಡವೇ ಸತ್ಯ ಕನ್ನಡವೇ ನಿತ್ಯ
  7. ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ
  8. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು

Source : https://tv9kannada.com/karnataka/happy-karnataka-rajyotsava-2023-wishes-quotes-greetings-messages-facebook-whatsapp-status-in-kannada-you-can-share-on-karnataka-state-formation-day-vkb-705762.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *