Hardik Pandya: ಒಳ್ಳೆಯ ಜನರಿಗೆ ಒಳ್ಳೆಯದೇ ಆಗುತ್ತದೆ: ಪಂದ್ಯದ ಬಳಿಕ ವಿಚಿತ್ರ ಹೇಳಿಕೆ ನೀಡಿದ ಹಾರ್ದಿಕ್ ಪಾಂಡ್ಯ

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸತತ ಎರಡನೇ ಬಾರಿ ಟ್ರೋಫಿ ಗೆಲ್ಲುವ ಗುಜರಾತ್ ಟೈಟಾನ್ಸ್ ಆಸೆ ಈಡೇರಲಿಲ್ಲ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2023 ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಾಣುವ ಮೂಲಕ ಹಾರ್ದಿಕ್ ಪಾಂಡ್ಯ ಪಡೆ ರನ್ನರ್ ಅಪ್​ಗೆ ತೃಪ್ತಿ ಪಟ್ಟುಕೊಂಡಿತು.ಪಂದ್ಯ ಮುಗಿದ ಬಳಿಕ ಮಾತನಾಡಿದ ಹಾರ್ದಿಕ್ ಪಾಂಡ್ಯ ಸಿಎಸ್​ಕೆ ತಂಡವನ್ನು ಹಾಗೂ ನಾಯಕ ಎಂಎಸ್ ಧೋನಿ ಅವರನ್ನು ಹಾಡಿಹೊಗಳಿದ್ದಾರೆ. ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಹಾರ್ದಿಕ್ ಆಡಿದ ಮಾತುಗಳು ಇಲ್ಲಿದೆ ನೋಡಿ.ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಮಗಿಂತ ಉತ್ತಮ ಕ್ರಿಕೆಟ್‌ ಆಡಿದೆ. ಎಂಎಸ್ ಧೋನಿ ಅವರ ಬಗ್ಗೆ ಸಂತಸವಾಗುತ್ತಿದೆ. ಇದೆಲ್ಲಾ ವಿಧಿಲಿಖಿತ. ನಾನು ಸೋಲಬೇಕು ಎಂದಿದ್ದರೆ, ಧೋನಿ ಎದುರು ಸೋಲಲು ಇಚ್ಛಿಸುತ್ತೇನೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.ಮಾತು ಮುಂದುವರೆಸಿದ ಹಾರ್ದಿಕ್, ಒಳ್ಳೆ ಜನರಿಗೆ ಒಳ್ಳೆಯದ್ದೇ ಆಗುತ್ತದೆ. ಧೋನಿ ಒಬ್ಬ ಅತ್ಯುತ್ತಮ ವ್ಯಕ್ತಿ. ನನಗೆ ತಿಳಿದ ಒಳ್ಳೆಯ ವ್ಯಕ್ತಿಯಲ್ಲಿ ಧೋನಿ ಅವರೂ ಒಬ್ಬರು ಎಂದು ಹಾರ್ದಿಕ್ ಹೇಳಿದ್ದು ಧೋನಿ ಮತ್ತೊಮ್ಮೆ ಟ್ರೋಫಿ ಎತ್ತಿ ಹಿಡಿದಿದ್ದು ಖುಷಿ ಆಗಿದೆ ಎಂದಿದ್ದಾರೆ.ಇನ್ನು ತನ್ನ ತಂಡದ ಪ್ರದರ್ಶನ ಬಗ್ಗೆ ಮಾತನಾಡಿದ ಪಾಂಡ್ಯ, ನಮ್ಮ ತಂಡ ಕಠಿಣ ಪರಿಶ್ರಮವನ್ನು ಹಾಕಿ ಪಂದ್ಯವನ್ನು ಆಡಿದೆ. ಫೈನಲ್​ನಲ್ಲಿ ನಾವು ನೀಡಿದ ಪ್ರದರ್ಶನ ಹಾಗೂ ಹೋರಾಡಿದ ಬಗ್ಗೆ ಹೆಮ್ಮೆ ಇದೆ. ನಮ್ಮ ತಂಡದ್ದು ಒಂದು ಗುರಿ ಇದೆ. ನಾವು ಒಟ್ಟಿಗೆ ಗೆಲ್ಲುತ್ತೇವೆ ಹಾಗೂ ಒಟ್ಟಿಗೆ ಸೋಲುತ್ತೇವೆ ಎಂದು ಹೇಳಿದ್ದಾರೆ.ನಾವು ಬ್ಯಾಟಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಮುಖ್ಯವಾಗಿ ಸಾಯಿ ಸುದರ್ಶನ್, ಇಂತಹ ಹೈವೋಲ್ಟೇಜ್ ಪಂದ್ಯದಲ್ಲಿ ಈ ರೀತಿ ಆಡುವುದು ಸುಲಭವಲ್ಲ. ಯುವ ಆಟಗಾರರಿಂದ ಏನನ್ನು ಹೊರತೆಗೆಯಬೇಕೋ ಅದಕ್ಕೆ ಬೆಂಬಲವನ್ನು ನೀಡಿದ್ದೇವೆ - ಹಾರ್ದಿಕ್ ಪಾಂಡ್ಯ.ನಮ್ಮ ತಂಡದ ಬೌಲರ್​ಗಳಾದ ಮೋಹಿತ್ ಶರ್ಮಾ, ಮೊಹಮ್ಮದ್ ಶಮಿ ಹಾಗೂ ರಶೀದ್ ಖಾನ್ ಸೇರಿದಂತೆ ತಂಡದ ಎಲ್ಲರೂ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ. ಎದುರಾಳಿಗೆ ಉತ್ತಮ ಫೈಟ್ ನೀಡಿದ್ದೇವೆ ಎಂಬುದು ಹಾರ್ದಿಕ್ ಪಾಂಡ್ಯ ಮಾತಾಗಿತ್ತು.

source https://tv9kannada.com/photo-gallery/cricket-photos/hardik-pandya-in-post-match-presentation-after-csk-vs-gt-ipl-2023-final-what-he-said-about-ms-dhoni-vb-590200.html

Leave a Reply

Your email address will not be published. Required fields are marked *