

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಶನಿವಾರ ನಡೆದ ಲಖನೌ ಸೂಪರ್ ಜೇಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ (LSG vs GT) ನಡುವಣ ಪಂದ್ಯ ರೋಚಕತೆಯಿಂದ ಕೂಡಿತ್ತು. ಜಿಟಿ ಬೌಲರ್ ಮೋಹಿತ್ ಶರ್ಮಾ ಅವರ ಮಾರಕ ದಾಳಿಯಿಂದ ಕೊನೆಯ ಓವರ್ನಲ್ಲಿ ನಾಟಕೀಯವಾಗಿ ಕುಸಿತ ಕಂಡ ಲಖನೌ ಗೆಲ್ಲುವ ಪಂದ್ಯವನ್ನು ಸುಲಭವಾಗಿ ಕಳೆದುಕೊಂಡಿತು. ಲೋ ಸ್ಕೋರ್ ಗೇಮ್ನಲ್ಲಿ ಗುಜರಾತ್ 7 ರನ್ಗಳ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ಹಾರ್ದಿಕ್ (Hardik Pandya) ಜಿಟಿ ನಾಯಕನಾದರೆ, ಇವರ ಅಣ್ಣ ಕ್ರುನಾಲ್ ಪಾಂಡ್ಯ (Krunal Pandya) ಲಖನೌ ತಂಡದ ಆಟಗಾರ. ಇವರಿಬ್ಬರ ನಡುವೆ ಸಣ್ಣ ಸಂಘರ್ಷ ಕೂಡ ನಡೆಯಿತು.
ಲಖನೌ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕ್ರುನಾಲ್ ಪಾಂಡ್ಯ ಕ್ರೀಸ್ಗೆ ಬಂದರು. ಈ ಸಂದರ್ಭ ಹಾರ್ದಿಕ್ ಅವರು ಅಣ್ಣ ಕ್ರುನಾಲ್ಗೆ ಸ್ಲೆಡ್ಜ್ ಮಾಡಿದ್ದಾರೆ. ಜಿಯೋ ಸಿನಿಮಾ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು ಹಾರ್ದಿಕ್ ಆಡಿರುವ ಮಾತು ಸ್ಟಂಪ್ಮೈಕ್ನಲ್ಲಿ ಸೆರೆಯಾಗಿದೆ. ಕ್ರುನಾಲ್ ಕ್ರೀಸ್ಗೆ ಬಂದ ಕೂಡಲೇ ಹಾರ್ದಿಕ್ ಅವರ ಬಳಿ ನಿಂತು ತಮ್ಮ ತಂಡದ ಆಟಗಾರರ ಜೊತೆ ಇವನನ್ನು ಹೇಗೆ ಔಟ್ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಆದರೆ, ಇದು ಯಾವುದಕ್ಕೂ ತಲೆಕಡೆಸಿಕೊಳ್ಳದ ಕ್ರುನಾಲ್ ಗ್ಲೌಸ್, ಹೆಲ್ಮೆಟ್ ಸರಿಪಡಿಸಿಕೊಳ್ಳುತ್ತಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Yash: ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ಬಿಂದಾಸ್ ಆಗಿ ಕುಣಿದ ‘ರಾಕಿಂಗ್ ಸ್ಟಾರ್’ ಯಶ್ ವಿಡಿಯೋ ವೈರಲ್
Bromance
Bhai-valryThe battle of the Pandyas is
![]()
#IPLonJioCinema #TATAIPL #LSGvGT #IPL2023 | @hardikpandya7 @krunalpandya24 pic.twitter.com/z4MCSt9DGD
— JioCinema (@JioCinema) April 22, 2023
ಲಖನೌದ ಏಖಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯ ಲೋ ಸ್ಕೋರ್ ಗೇಮ್ ಆಗಿತ್ತು. ಪಿಚ್ ಬ್ಯಾಟಿಂಗ್ ಸಹಕಾರಿಯಾಗಿ ವರ್ತಿಸದ ಹಿನ್ನಲೆ ಉಭಯ ತಂಡಗಳು ರನ್ ಗಳಿಸಲು ಪರದಾಡಿದರು. ಮೊದಲು ಬ್ಯಾಟಿಂಗ್ಗೆ ಇಳಿದ ಗುಜರಾತ್ ಪರ ಶುಭಮನ್ ಗಿಲ್ ಶೂನ್ಯಕ್ಕೆ ಔಟ್ ಆದರು. ವೃದ್ಧಿಮಾನ್ ಸಾಹ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ 68 ರನ್ಗಳ ಜೊತೆಯಾಟ ಮಾಡಿತು.
47 ರನ್ ಗಳಿಸಿ ಸಾಹ ಔಟಾದರೆ ಹಾರ್ದಿಕ್ 50 ಎಸೆತಗಳಲ್ಲಿ 4 ಸಿಕ್ಸ್ ಮತ್ತು 2 ಬೌಂಡರಿಯಿಂದ 66 ರನ್ ಗಳಿಸಿದರು. ಉಳಿದ ಬ್ಯಾಟರ್ಗಳೆಲ್ಲ ಬೇಗನೆ ಪೆವಿಲಿಯನ್ ಸೇರಿಕೊಂಡರು. ಪರಿಣಾಂ ಜಿಟಿ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡ 135 ರನ್ ಗಳಿಸಿತು. ಲಖನೌ ಪರ ಕೃನಾಲ್ ಪಾಂಡ್ಯ ಮತ್ತು ಮಾರ್ಕಸ್ ಸ್ಟೋನಿಸ್ ತಲಾ ಎರಡು ವಿಕೆಟ್ ಪಡೆದರು.
ಟಾರ್ಗೆಟ್ ಬೆನ್ನಟ್ಟಿದ ಎಲ್ಎಸ್ಜಿ ತಂಡ 7 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಷ್ಟೇ ಸಾಧ್ಯವಾಗಿ 7 ರನ್ ಗಳಿಂದ ಸೋಲಿಗೆ ಶರಣಾಯಿತು. ಕೆಎಲ್ ರಾಹುಲ್ 68 ರನ್ ಪೇರಿಸಿದರು. ಇನ್ನುಳಿದಂತೆ ಕೈಲ್ ಮೇಯರ್ಸ್ 24 ಹಾಗೂ ಕೃನಾಲ್ ಪಾಂಡ್ಯ 23 ರನ್ ಬಾರಿಸಿದರು. ನಂತರ ಬಂದ ಯಾವುದೇ ಬ್ಯಾಟರ್ಗಳು ರನ್ ಬಾರಿಸುವಲ್ಲಿ ವಿಫಲರಾದರು. ಕೊನೆಯ ಓವರ್ನಲ್ಲಿ ಲಖನೌಗೆ ಗೆಲ್ಲಲು 12 ರನ್ನ ಅವಶ್ಯಕತೆ ಇತ್ತು. ಆದರೆ, ಮೋಹಿತ್ ಶರ್ಮಾ ಮಾಡಿದ ಮ್ಯಾಜಿಕ್ನಿಂದ 6 ಎಸೆತದಲ್ಲಿ 4 ವಿಕೆಟ್ ಕಳೆದುಕೊಂಡು ಕಳಪೆ ಪ್ರದರ್ಶನ ತೋರಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ