ಕುಟುಂಬ ಪೋಷಣೆಗೆ ಕಸ ಹೆಕ್ಕುತ್ತಿದ್ದ ಆತ ಇಂದು ‘ವಿಶ್ವ ಕ್ರಿಕೆಟ್’ನ ಬಾಸ್’! 14 ಸಾವಿರ ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಈತ

Chris Gayle Birthday: ಕ್ರಿಸ್ ಗೇಲ್ 483 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಇನ್ನು ಇವರು ನಿರ್ಮಿಸಿರುವ ಅದೆಷ್ಟೋ ದಾಖಲೆಗಳನ್ನು ಇದುವರೆಗೆ ಯಾರಿಂದಲೂ ಮುಟ್ಟಲು ಸಾಧ್ಯವಾಗಿಲ್ಲ.

Chris Gayle Birthday: ವಿಶ್ವದ ಅತ್ಯಂತ ಜನಪ್ರಿಯ ಮತ್ತು ಶಕ್ತಿಶಾಲಿ ಟಿ20 ಆಟಗಾರ ಕ್ರಿಸ್ ಗೇಲ್ ಇಂದು ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 21 ಸೆಪ್ಟೆಂಬರ್ 1979 ರಂದು ಜಮೈಕಾದ ಕಿಂಗ್‌’ಸ್ಟನ್‌’ನಲ್ಲಿ ಜನಿಸಿದ ಕ್ರಿಸ್ ಗೇಲ್ ತಮ್ಮ 23 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಹಲವು ದೊಡ್ಡ ದಾಖಲೆಗಳನ್ನು ಮಾಡಿದ್ದಾರೆ. ಇಂದು ಇಡೀ ಜಗತ್ತೇ ಗೇಲ್ ಅವರನ್ನು ‘ಯೂನಿವರ್ಸ್ ಬಾಸ್’ ಎಂದು ಕರೆಯುತ್ತದೆ.

ಕ್ರಿಸ್ ಗೇಲ್ ಅವರ ಪೂರ್ಣ ಹೆಸರು ಏನು?

ಕ್ರಿಸ್ ಗೇಲ್ 483 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಇನ್ನು ಇವರು ನಿರ್ಮಿಸಿರುವ ಅದೆಷ್ಟೋ ದಾಖಲೆಗಳನ್ನು ಇದುವರೆಗೆ ಯಾರಿಂದಲೂ ಮುಟ್ಟಲು ಸಾಧ್ಯವಾಗಿಲ್ಲ. ಟಿ20 ಕ್ರಿಕೆಟ್‌’ನಲ್ಲಿ 14,000 ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಗೇಲ್. ಇನ್ನು ಕ್ರೀಡೆಯ ಜೊತೆಗೆ ಗೇಲ್ ತಮ್ಮ ಜೀವನಶೈಲಿಯಿಂದ ಕೂಡ ಭಾರೀ ಸುದ್ದಿಯಲ್ಲಿರುತ್ತಾರೆ. ಆದರೆ ಗೇಲ್ ಅವರ ಪೂರ್ಣ ಹೆಸರು ಎಂಬುದು ಅನೇಕ ಜನರಿಗೆ ಗೊತ್ತೇ ಇಲ್ಲ. ಕ್ರಿಸ್ಟೋಫರ್ ಹೆನ್ರಿ ಗೇಲ್ ಎಂಬುದು ಕ್ರಿಸ್ ಗೇಲ್ ಅವರ ಪೂರ್ಣ ನಾಮ.

1999ರಲ್ಲಿ ಟೀಂ ಇಂಡಿಯಾ ವಿರುದ್ಧ ಏಕದಿನ ಕ್ರಿಕೆಟ್‌’ಗೆ ಪದಾರ್ಪಣೆ ಮಾಡಿದ್ದ ಕ್ರಿಸ್ ಗೇಲ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದ್ದರು. ನಂತರ ಸ್ಫೋಟಕ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದರು. ಆದರೆ  ತನ್ನ ಕುಟುಂಬವನ್ನು ಪೋಷಿಸಲು ಒಂದೊಮ್ಮೆ ಕಸ ಕೂಡ ಆಯುತ್ತಿದ್ದರು ಗೇಲ್. ಈ ಬಗ್ಗೆ ಸ್ವತಃ ಕ್ರಿಸ್ ಗೇಲ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಆದರೆ ಈಗ ಗೇಲ್ ವಾಸಿಸುವ ಮನೆ 20 ಕೋಟಿ ರೂ. ಮೌಲ್ಯದ್ದು.

ಗೇಲ್ ಅವರ ‘ಪವರ್ ಹಿಟ್ಟಿಂಗ್’ ಆಟದಿಂದಾಗಿ ‘ಯೂನಿವರ್ಸ್ ಬಾಸ್’ ಎಂದು ಅವರನ್ನು ಕರೆಯುತ್ತಾರೆ. ಅಷ್ಟೇ ಅಲ್ಲದೆ ಕಳೆದ ಕೆಲವು ವರ್ಷಗಳಲ್ಲಿ ‘ದಿ ಬಾಸ್’ ಎಂಬ ಸ್ಟಿಕ್ಕರ್ ಹೊಂದಿರುವ ಬ್ಯಾಟ್‌’ನೊಂದಿಗೆ ಆಟವಾಡಿದ್ದಾರೆ.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/sports/the-mighty-t20-player-chris-gayle-is-celebrating-his-43rd-birthday-today-159905

Leave a Reply

Your email address will not be published. Required fields are marked *