ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ. 09: ಆರೋಗ್ಯವಂತ ಮಹಿಳೆಯರು ಆತ್ಮಬಲ ಹೆಚ್ಚಿಸಿಕೊಂಡು,ಸ್ವಾವಲಂಬನೆ,ಆರ್ಥಿಕ ಸದೃಢತೆಯ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕಾಯ್ದುಕೊಳ್ಳಲು ಶ್ರಮಿಸಬೇಕಿದೆ ಎಂದು ಸತ್ವಮಹಿಳಾ ಸಂಸ್ಥೆಯ ಅಧ್ಯಕ್ಷರಾದ ಶಶಿಕಲಾ ರವಿಶಂಕರ್ ತಿಳಿಸಿದರು.
ಹಿರಿಯೂರು ತಾಲ್ಲೂಕಿನ ಮಾಯಸಂದ್ರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಡೆಂಗ್ಯು ವಿರುದ್ಧ ಮುನ್ನೆಚ್ಚರಿಕಾ ಹಾಗೂ ಕ್ರಮಗಳ ಬಗ್ಗೆ, ಸ್ವಚ್ಚ ಪರಿಸರ,ಸ್ವಯಂ ಶಿಸ್ತಿನ ಬಗ್ಗೆ ಜಾಗೃತಿ ಮೂಡಿಸುವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಅವರು ಮಾತನಾಡುತ್ತಿದ್ದರು.
ಮಹಿಳೆಯರು ಹಾಗೂ ಮಕ್ಕಳ ಅಭ್ಯುದಯಕ್ಕೆ ಒತ್ತಾಸೆಯಾಗಿ ನಿಂತಿರುವ ಒಂದು ಸಮಾನ ಮನಸ್ಕ ಮಹಿಳೆಯರ ಗುಂಪು ಇಲ್ಲಿ ನಮ್ಮೆಲ್ಲರದೂ ಒಮ್ಮತ ಯಾವುದೇ ವಿಷಯದಲ್ಲಿ ನೊಂದ ಮಹಿಳೆಯರಿಗೆ ದನಿಯಾಗುವ ಬೆಳೆಯುವ ಮಕ್ಕಳ ಕನಸಿಗೆ ಪ್ರತಿಭೆಗೆ ಪ್ರೋತ್ಸಾಹದ ನೀರೆರೆದು ಪೋಷಿಸಲು ಸಂಘಟಿತರು ನಾವು ಸಮಾಜದಲ್ಲಿ ನೊಂದವರಿಗೆ ಚೇತೋಹಾರಿಯಾಗಬಲ್ಲ ಸತ್ವದಂತಹ ಸೇವಾ ಸಂಸ್ಥೆಗಳ ಅವಶ್ಯಕತೆ ಬಹಳ ಇದೆ. ಆರೋಗ್ಯವಂತ ಮಹಿಳೆಯರು ಆತ್ಮಬಲ ಹೆಚ್ಚಿಸಿಕೊಂಡು ಸ್ವಾವಲಂಬನೆ ಆರ್ಥಿಕ ಸದೃಢತೆಯ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕಾಯ್ದುಕೊಳ್ಳಲು ಶ್ರಮಿಸಬೇಕಿದೆ. ಮಕ್ಕಳ ಬಾಲ್ಯ ಸ್ವರ್ಗ ಸದೃಶವಾದದ್ದು ಮತ್ತಷ್ಟು ವಿಪುಲಗೊಳಿಸಲು ನಾವು ಸನ್ನದ್ಧರಾಗಬೇಕಿದೆ ಎಂದರು .

ಈ ಕಾರ್ಯಕ್ರಮದ ಯೋಜನಾ ನಿರ್ದೇಶಕರು ಹಾಗೂ ಉಪಾಧ್ಯಕ್ಷರಾದ ಯಮುನಾ ಉಮಾಕಾಂತರವರು ಶಾಲಾ ಕಲಿಕೆಯಲ್ಲಿ ಶಿಕ್ಷಕರೊಂದಿಗೆ ಪೋಷಕರೂ ಕೈಜೋಡಿಸಿದಾಗ ಮಕ್ಕಳ ಕಲಿಕೆ ಪ್ರಗತಿ ಸಾಧಿಸುವುದು ಎಂದರು. ಪ್ರಧಾನ ಕಾರ್ಯದರ್ಶಿ ಸರ್ವಮಂಗಳಾ ರಮೇಶ್.. ನಿರ್ದೇಶಕರಾದ ಶ್ರೀಕರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಸುಪ್ರೀತಾರವರು ಡೆಂಗ್ಯು ಖಾಯಿಲೆ ಹಾಗೂ ಖಾಯಿಲೆಯ ವಿರುದ್ಧ ಮುನ್ನೆಚ್ಚರಿಕಾ ಕ್ರಮಗಳು ಬಗ್ಗೆ ಸಾದ್ಯಂತವಾಗಿ ಮಾಹಿತಿ ನೀಡಿದರು.
ಉತ್ತಮ ಪರಿಸರಕ್ಕಾಗಿ ಮಕ್ಕಳೊಂದಿಗೆ ಗಿಡ ನೆಡುವುದರ ಜೊತೆಗೆ ಶಾಲಾ ಮಕ್ಕಳಿಗಾಗಿ ಸತ್ವ ಸಂಸ್ಥೆಯಿಂದ ಕೇರಂ ಬೋರ್ಡ್ ಆಟದ ಪರಿಕರಗಳನ್ನು ಉಡುಗೊರೆಯಾಗಿ ನೀಡಲಾಯಿತು.
ಮುಖ್ಯೋಪಾಧ್ಯಾಯಿನಿ ಉಷಾರಾಣಿಯವರು ಸ್ವಾಗತಿಸಿದರು ಸತ್ವದ ಖಜಾಂಜಿ ತ್ರಿವೇಣಿ ಸತೀಶ್ ನಿರ್ದೇಶಕರಾದ ಗೀತಾ ಹಿಮಾಚಲೇಶ್ , ಲತಾ ಶಿವಪ್ರಸಾದ್ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರೂ ,ಸದಸ್ಯರೂ ,ಅಂಗನವಾಡಿ ಕಾರ್ಯಕರ್ತೆಯರೂ ಉಪಸ್ಥಿತರಿದ್ದರು ಸಹಶಿಕ್ಷಕರಾದ ಶೈಲಜಾರವರು ನಿರೂಪಿಸಿ ವಂದಿಸಿದರು.