ಮುಂದಿನ 3 ದಿನ ರಾಜ್ಯದ 14 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಗುಡುಗು ಸಹಿತ ಬಲವಾದ ಗಾಳಿ ಬೀಸುವ ಮುನ್ಸೂಚನೆ

Karnataka Rain: ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ, ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಳ್ಳುತ್ತಿದೆ. ಅದರ ಪ್ರಭಾವದಿಂದಾಗಿ, ಆರಂಭದಲ್ಲಿ ಋತುಮಾನದ ಚಟುವಟಿಕೆಗಳು ಬಿಹಾರ ಮತ್ತು ಜಾರ್ಖಂಡ್‌’ನ ಪೂರ್ವ ಭಾಗಗಳ ಮೇಲೆ ಇರುತ್ತವೆ.

Karnataka Rain 04-09-2023: ದೆಹಲಿ-ಎನ್‌’ಸಿಆರ್ ಸೇರಿದಂತೆ ದೇಶದ ಬಹುತೇಕ ಭಾಗಗಳಲ್ಲಿ ಮಳೆ ಕೊರತೆ ಕಾಡುತ್ತಿದೆ. ಜೂನ್ 1 ಮತ್ತು ಸೆಪ್ಟೆಂಬರ್ 1 ರ ನಡುವೆ ಬಿಹಾರ-ಜಾರ್ಖಂಡ್‌’ನಲ್ಲಿ ಸುಮಾರು 30 ಪ್ರತಿಶತ ಕಡಿಮೆ ಮಳೆಯಾಗಿದೆ. ಇನ್ನು ಆಗಸ್ಟ್‌’ನಲ್ಲಿ ಕೆಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದರೂ ಸಹ ಎರಡೂ ರಾಜ್ಯಗಳಲ್ಲಿ ಮತ್ತೊಮ್ಮೆ ಒಣಹವೆ ಕಾಣಿಸಿಕೊಂಡಿದ್ದು, ಮಳೆ ಕೊರತೆ ಹೆಚ್ಚಾಗುತ್ತಿದೆ.

ಇನ್ನು ಖಾಸಗಿ  ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ, ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಳ್ಳುತ್ತಿದೆ. ಅದರ ಪ್ರಭಾವದಿಂದಾಗಿ, ಆರಂಭದಲ್ಲಿ ಋತುಮಾನದ ಚಟುವಟಿಕೆಗಳು ಬಿಹಾರ ಮತ್ತು ಜಾರ್ಖಂಡ್‌’ನ ಪೂರ್ವ ಭಾಗಗಳ ಮೇಲೆ ಇರುತ್ತವೆ. ಇದರ ನಂತರ, ಮಳೆಯ ತೀವ್ರತೆ ಮತ್ತು ಹರಡುವಿಕೆ ಕ್ರಮೇಣ ಹೆಚ್ಚಾಗುತ್ತದೆ. ಸೆಪ್ಟೆಂಬರ್ 5 ರ ವೇಳೆಗೆ ಬಿಹಾರ ಮತ್ತು ಜಾರ್ಖಂಡ್‌’ನ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಇದರ ನಂತರ, ಸೆಪ್ಟೆಂಬರ್ 10 ರಿಂದ ಮಳೆಯ ತೀವ್ರತೆ ಮತ್ತೆ ಕಡಿಮೆಯಾಗಬಹುದು.

ಏಜೆನ್ಸಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ, ರಾಯಲಸೀಮಾ, ಪಶ್ಚಿಮ ಬಂಗಾಳದ ಕೆಲವು ಭಾಗಗಳು ಮತ್ತು ಕರಾವಳಿ ಒಡಿಶಾದಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ. ಇದೇ ಅವಧಿಯಲ್ಲಿ, ಕೇರಳ, ತಮಿಳುನಾಡು, ಒಳನಾಡು ಕರ್ನಾಟಕ, ಕೊಂಕಣ ಮತ್ತು ಗೋವಾದಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ.

ಇಂದಿನ ಹವಾಮಾನ ಕುರಿತು ಮಾತನಾಡುವುದಾದರೆ, ದಕ್ಷಿಣ ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಗಿಲ್ಗಿಟ್ ಬಾಲ್ಟಿಸ್ತಾನ್, ಮುಜಫರಾಬಾದ್, ಉತ್ತರಾಖಂಡ ಮತ್ತು ಲಡಾಖ್‌’ನಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಪಶ್ಚಿಮ ಬಂಗಾಳ, ಪೂರ್ವ ಬಿಹಾರ, ಪೂರ್ವ ಜಾರ್ಖಂಡ್, ಒಡಿಶಾ, ಲಕ್ಷದ್ವೀಪ, ತಮಿಳುನಾಡು, ಆಂಧ್ರಪ್ರದೇಶ, ಸಿಕ್ಕಿಂ ಮತ್ತು ಹಿಮಾಚಲ ಪ್ರದೇಶದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಕ್ಷಿಣ ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲಿಯೂ ಇಂದು ಮಳೆಯಾಗುವ ನಿರೀಕ್ಷೆಯಿದೆ. ಮಹಾರಾಷ್ಟ್ರ, ಕೇರಳ, ಒಳನಾಡು ಕರ್ನಾಟಕ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.

ಕರ್ನಾಟಕ ಹವಾಮಾನ ವರದಿ ಹೀಗಿದೆ:

ಇನ್ನು ಕರ್ನಾಟಕದಾದ್ಯಂತ ಮುಂಗಾರು ಚುರುಕಾಗಿದ್ದು, ಸೆಪ್ಟೆಂಬರ್ 7 ಹಾಗೂ 8 ರಂದು ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಗುಡುಗು ಸಹಿತ ಗಾಳಿ, ಭಾರಿ ಮಳೆಯಾಗಲಿದೆ ಎಂದು ಸೂಚನೆ ನೀಡಲಾಗಿದೆ. ಇದರ ಜೊತೆಗೆ ಈ ಭಾಗಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಚಿಕ್ಕಮಗಳೂರು, ಚಾಮರಾಜನಗರ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/india/heavy-rain-is-likely-in-14-districts-of-karnataka-for-the-next-3-days-yellow-alert-issued-156155

Leave a Reply

Your email address will not be published. Required fields are marked *