ಹದಿಹರೆಯದ ಮಕ್ಕಳ ಚಂಚಲತೆಯ ಚಿಂತೆ ಬಿಡಿ; ಪೋಷಕರು ತಿಳಿದಿರಬೇಕಾದ 6 ವಿಚಾರಗಳಿವು.

ಹದಿಹರೆಯದ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಪೋಷಕರಿಗೆ ಸವಾಲಿನ ಕೆಲಸ. ಇಂತಹ ಮಕ್ಕಳೊಂದಿಗೆ ಸ್ನೇಹಿತರಂತೆ ಬೆರೆತು ಉತ್ತಮ ಕೌಶಲ್ಯ ಹೆಚ್ಚಿಸಲು ಈ ಟಿಪ್ಸ್ ಅನುಸರಿಸಿ.

ಚಂಚಲತೆ ಹದಿಹರೆಯದ ಮಕ್ಕಳಲ್ಲಿ ಕಾಣುವ ಸಾಮಾನ್ಯ ಅಂಶ. ಇದರಿಂದ ಮಕ್ಕಳನ್ನು ದೂರುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಬದಲಾಗಿ ಪೋಷಕರಿಗೆ ಒಂದಷ್ಟು ವಿಚಾರಗಳು ಗೊತ್ತಿರಬೇಕು. ಸಾಮಾನ್ಯವಾಗಿ ಹಾರ್ಮೋನುಗಳ ಬದಲಾವಣೆಯಿಂದಾಗಿ ಹದಿಹರೆಯದವರ ಯೋಚನೆಗಳು ಬದಲಾಗುತ್ತವೆ.

ಭಾವನಾತ್ಮಕವಾಗಿ ಒಂದಷ್ಟು ಏರಿಳಿತಗಳಾಗುತ್ತವೆ. ಇಂತಹ ಸಮಸ್ಯೆಗಳನ್ನು ಎದುರಿಸುವ ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ನಡೆಸುವುದು ಪೋಷಕರಿಗೆ ದೊಡ್ಡ ಸಾವಾಲಾಗಿರುತ್ತದೆ. ಇದಕ್ಕಾಗಿ ಪೋಷಕರಿಗೆ ಮೊದಲು ತಾಳ್ಮೆ ತುಂಬಾ ಮುಖ್ಯವಾಗುತ್ತದೆ.ಇಲ್ಲಿ ನೀಡಲಾಗಿರುವ ಒಂದಷ್ಟು ಅಂಶಗಳನ್ನು ನೀವು ಕಾರ್ಯಗತಗೊಳಿಸಿದಾಗ ಖಂಡಿತವಾಗಿ ನಿಮ್ಮ ಮಕ್ಕಳ ಕೌಶಲ್ಯ ವೃದ್ಧಿಸಿ ಆಲೋಚನೆಗಳು ಸಕಾರಾತ್ಮಕವಾಗಿ ಬದಲಾಗುತ್ತವೆ.

ಮುಕ್ತ ಸಂವಹನ

ಹದಿಹರೆದ ಮಕ್ಕಳು ಸಾಮಾನ್ಯವಾಗಿ ಮನೆಗಳಲ್ಲಿ ಒಂಟಿತವನ್ನು ಬಯಸುತ್ತಾರೆ. ಹೆಚ್ಚಾಗಿ ಪೋಷಕರೊಂದಿಗೆ ಸೇರಲು ಬಯಸುವುದಿಲ್ಲ. ಅಂತರವನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತಾರೆ. ಇಂತಹ ಸಂದರ್ಭದಲ್ಲಿ ಪೋಷಕರು ಮತ್ತು ಹದಿಹರೆಯದ ಮಕ್ಕಳ ನಡುವಿನ ಮುಕ್ತ ಸಂವಹನ ನಿರ್ಣಾಯಕವಾಗುತ್ತದೆ. ಇಂತಹ ಮಕ್ಕಳ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಆರಾಯದಾಯವಾದ ವಾತಾವರಣವನ್ನು ಬಯಸುತ್ತಾರೆ. ಭಾವನೆಗಳನ್ನು ವ್ಯಕ್ತಪಡಿಸಲು ಸುರಕ್ಷಿತ ಸ್ಥಳವನ್ನು ನೋಡುತ್ತಾರೆ. ಇದನ್ನು ಪೋಷಕರು ತಿಳಿಯಬೇಕಾಗಿರುವುದು ಮುಖ್ಯವಾಗುತ್ತದೆ.

ಆರೋಗ್ಯಕರ ಜೀವನ ಶೈಲಿ

ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಹಾಗೂ ಸರಿಯಾದ ನಿದ್ರೆ ಪ್ರತಿಯೊಬ್ಬರ ಮನಸ್ಥಿತಿಯನ್ನು ಸ್ಥಿರಗೊಳಿಸುವಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ನಿಮ್ಮ ಹದಿಹರೆಯದವರನ್ನು ಪ್ರೋತ್ಸಾಹಿಸಬೇಕು. ಈ ಯೋಗಕ್ಷೇಮ ಭಾವನಾತ್ಮಕ ವಿಚಾರದಲ್ಲಿ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ.

ಒತ್ತಡ ನಿರ್ವಹಣೆ

ಶಾಲಾ ವಾತಾವರಣ ಹಾಗೂ ಇತರೆ ಕೆಲವೊಂದು ಸನ್ನಿವೇಶಗಳಲ್ಲಿ ನಿಮ್ಮ ಹದಿಹರೆಯದ ಮಕ್ಕಳ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಇದರಿಂದ ಹೊರ ಬರಲು ತಾಳ್ಮೆ, ಧ್ಯಾನದಂತಹ ಕ್ರಮಗಳನ್ನು ಅನುಸರಿಸಬೇಕು. ಧ್ಯಾನ ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತದೆ. ಸವಾಲುಗಳನ್ನು ಎದುರಿಸುವ ದೃಷ್ಟಿಯಿಂದ ಮಕ್ಕಳ ಎಂತ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ಅರಿತು ಧ್ಯಾನಕ್ಕೆ ಹೆಚ್ಚಿನ ಒತ್ತು ನೀಡುವಂತೆ ನೋಡಿಕೊಳ್ಳಬೇಕು.

ದಿನಚರಿಯ ವೇಳಾಪಟ್ಟಿ ಇರಲಿ

ಸ್ಥಿರವಾದ ದೈನಂದಿನ ದಿನಚರಿ ಮಕ್ಕಳಲ್ಲಿ ಶಿಸ್ತು, ಸಂಯಮವನ್ನು ಕಲಿಸುತ್ತದೆ. ಚಿತ್ತಸ್ಥಿತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಯಮಿತ ಊಟ, ನಿದ್ರೆ, ಓದಿನ ಅವಧಿಗೆ ರಚಿಸುವ ವೇಳಾಪಟ್ಟಿ ಹದಿಹರೆಯದ ಮಕ್ಕಳಲ್ಲಿನ ಬಹಳಷ್ಟು ಬೆಳವಣಿಗೆಗೆ ನೆರವಾಗುತ್ತದೆ

ಹವ್ಯಾಸ ಮತ್ತು ಆಸಕ್ತಿಗಳು

ನಿಮ್ಮ ಮಕ್ಕಳಿಗೆ ಯಾವೆಲ್ಲಾ ಹವ್ಯಾಸಗಳಿವೆ ಎಂಬುದು ಪೋಷಕರಿಗೆ ತಿಳಿದಿರಬೇಕು. ಹೆಚ್ಚಿನ ಆಸಕ್ತಿ ಇರುವ ಹವ್ಯಾಸಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ನೀಡಿ. ಅನಾವಶ್ಯಕವಾಗಿ ನಿಯಂತ್ರಿಸಬೇಡಿ. ಉತ್ತಮ ಹವ್ಯಾಸಗಳು ಮತ್ತು ಆಸಕ್ತಿಗಳು ಸರಿಯಾದ ಮಾರ್ಗದಲ್ಲಿ ಸಾಗುವುದಕ್ಕೆ ನೆರವಾಗುತ್ತದೆ.

ಮೊಬೈಲ್, ಜಾಲತಾಣ ವೀಕ್ಷಣೆ ಮಿತಗೊಳಿಸಿ

ಮೊಬೈಲ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್‌ಗಳ ಮೂಲಕ ಅತಿಯಾಗಿ ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸಲು ಅವಕಾಶ ನೀಡಬೇಡಿ. ನಕಾರಾತ್ಮಕ ಭಾವನೆಗಳು ಬರಲು ಈ ಅಭ್ಯಾಸಗಳೂ ಕೂಡ ಪ್ರಮುಖವಾಗುತ್ತವೆ. ಹೀಗಾಗಿ ನಿಯಮಿತವಾಗಿ ಬಳಸುವಂತೆ ತಿಳಿ ಹೇಳಬೇಕಾಗುತ್ತದೆ. 

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Views: 0

Leave a Reply

Your email address will not be published. Required fields are marked *