ವಿಂಡೀಸ್ ವಿರುದ್ಧ ಭಾರತಕ್ಕೆ ಮೊದಲ ಗೆಲುವು: ಭರ್ಜರಿ ಬೌಲಿಂಗ್’ನಲ್ಲಿ ಮಿಂಚಿದ ಟೀಂ ಇಂಡಿಯಾ! Highlights ಇಲ್ಲಿದೆ

India vs West Indies Cricket: ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ವೆಸ್ಟ್ ಇಂಡೀಸ್ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ರೋಹಿತ್ ಈ ಪಂದ್ಯದಲ್ಲಿ 4 ವೇಗದ ಬೌಲರ್‌ಗಳು ಮತ್ತು 2 ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿದ್ದರು.

India vs West Indies, 1st ODI Highlights: ಬಾರ್ಬಡೋಸ್‌ ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿಯ ಮೊದಲ ODI ಪಂದ್ಯ ಗುರುವಾರ ನಡೆಯಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ನ ಇನ್ನಿಂಗ್ಸ್ ಅನ್ನು ಕೇವಲ 114 ರನ್ ಗಳಿಗೆ ಆಲೌಟ್ ಮಾಡಿತು. ಆದರೆ ಗುರಿ ತಲುಪುವಲ್ಲಿ 5 ವಿಕೆಟ್ ಕಳೆದುಕೊಂಡಿತು. ಇನ್ನು ಟೀಂ ಇಂಡಿಯಾ ನಾಯಕ ರೋಹಿತ್ ಗೆಲುವಿನ ಬೌಂಡರಿ ಬಾರಿಸಿದ್ದರು.

ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ವೆಸ್ಟ್ ಇಂಡೀಸ್ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ರೋಹಿತ್ ಈ ಪಂದ್ಯದಲ್ಲಿ 4 ವೇಗದ ಬೌಲರ್‌ಗಳು ಮತ್ತು 2 ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿದ್ದರು. ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ಅನುಭವಿ ರವೀಂದ್ರ ಜಡೇಜಾ ವೆಸ್ಟ್ ಇಂಡೀಸ್ ತಂಡದ ಇನ್ನಿಂಗ್ಸ್ ಅನ್ನು ಕೇವಲ 114 ರನ್‌ಗಳಿಗೆ ಕಟ್ಟಿಹಾಕಿದರು. ಕುಲದೀಪ್ ಕೇವಲ 3 ಓವರ್ ಬೌಲ್ ಮಾಡಿ ಕೇವಲ 6 ರನ್ ನೀಡಿ 4 ವಿಕೆಟ್ ಪಡೆದರು. ಮತ್ತೊಂದೆಡೆ ಜಡೇಜಾ 6 ಓವರ್ ಗಳಲ್ಲಿ 37 ರನ್ ನೀಡಿ 3 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ, ಮುಖೇಶ್ ಕುಮಾರ್ ಮತ್ತು ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್ ಪಡೆದರು. ಇನ್ನು ನಾಯಕ ಶಾಯ್ ಹೋಪ್ ವೆಸ್ಟ್ ಇಂಡೀಸ್ ಪರ ಗರಿಷ್ಠ 43 ರನ್ ಗಳಿಸಿದರು. 45 ಎಸೆತಗಳಲ್ಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಿಡಿಸಿದರು.

ಸುಲಭವಾಗಿ ಗುರಿ ಬೆನ್ನತ್ತಿದ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡಿತು ಎಂಬುದೇ ಶಾಕಿಂಗ್ ಸಂಗತಿ. ಈ ವರ್ಷ ಏಷ್ಯಾಕಪ್ ಮತ್ತು ನಂತರ ಏಕದಿನ ವಿಶ್ವಕಪ್ ಭಾರತ ಆತಿಥ್ಯ ವಹಿಸಲಿದೆ. ಹೀಗಿರುವಾಗ ಇಷ್ಟು ಸಣ್ಣ ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ಬ್ಯಾಟಿಂಗ್ ಚದುರಿದಂತೆ ಕಂಡುಬಂದಿದ್ದು ಸುಳ್ಳಲ್ಲ. ಬೌಲಿಂಗ್ ವರಸೆ ಅದ್ಭುತವಾಗಿ ಕಂಡರೂ ಬ್ಯಾಟಿಂಗ್ ವೈಫಲ್ಯತೆ ಕಂಡುಬಂದಿತ್ತು.

ರಂಭಿಕ ಇಶಾನ್ ಕಿಶನ್ (52) ಅರ್ಧಶತಕ ಬಾರಿಸಿದರು. ಆದರೆ ಇತರ ಯಾವುದೇ ಬ್ಯಾಟ್ಸ್‌ಮನ್ ಗಮನಾರ್ಹ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ನಾಯಕ ರೋಹಿತ್ 12 ಮತ್ತು ರವೀಂದ್ರ ಜಡೇಜಾ 16 ರನ್ ಗಳಿಸಿ ಅಜೇಯರಾಗಿ ಮರಳಿದರು. ಇನಿಂಗ್ಸ್ ನ 23ನೇ ಓವರ್ ನ 5ನೇ ಎಸೆತದಲ್ಲಿ ರೋಹಿತ್ ಬೌಂಡರಿ ಬಾರಿಸಿ ಭಾರತಕ್ಕೆ ಜಯ ತಂದುಕೊಟ್ಟರು.

7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌!

ನಾಯಕ ರೋಹಿತ್ ಓಪನಿಂಗ್ ಮಾಡಲಿಲ್ಲ. ಬಹುಶಃ ಟೀಂ ಇಂಡಿಯಾಗೆ ಹೊಸ ಆರಂಭಿಕರನ್ನು ಸಿದ್ಧಪಡಿಸುವ ಗುರಿ ಹೊಂದಿರಬಹುದು. ಇನ್ನು ರೋಹಿತ್ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಗೆ ಇಳಿಯಬೇಕಾಯಿತು. ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸಿದರು. ಶುಭಮನ್ (7) ಬ್ರೆಂಡನ್ ಕಿಂಗ್ ಕೈಯಲ್ಲಿ ಜೇಡನ್ ಸೀಲ್ಸ್‌ಗೆ ಕ್ಯಾಚಿತ್ತು ಔಟ್ ಆದರು. ನಂತರ ಬಂದ ಸೂರ್ಯಕುಮಾರ್ ಯಾದವ್ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 19 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ ವೈಯಕ್ತಿಕ ಸ್ಕೋರ್ 5 ರಲ್ಲಿ ರನೌಟ್ ಆದರು. ಇಶಾನ್ ಏಕಾಂಗಿಯಾಗಿ ಉಳಿದರು ಮತ್ತು ಅವರ ODI ವೃತ್ತಿಜೀವನದ ನಾಲ್ಕನೇ ಅರ್ಧಶತಕವನ್ನು ಗಳಿಸಿದರು.

Source : https://zeenews.india.com/kannada/sports/team-india-vs-west-indies-first-odi-highlights-india-first-win-against-west-indies-148499

Leave a Reply

Your email address will not be published. Required fields are marked *