ಈಗ ಸಾಕಷ್ಟು ಮಂದಿ ವೆಬ್ ವಾಟ್ಸಾಪ್ ಅನ್ನೂ ಬಳಸುತ್ತಾರೆ. ಹೀಗೆ ವೆಬ್ ವಾಟ್ಸಾಪ್ ಬಳಸುವವರಿಗೆ ಅಗತ್ಯವಾದ ಒಂದು ಟಿಪ್ಸ್ ಇಲ್ಲಿದೆ. ಅದೇ ನಿಮ್ಮ ವೆಬ್ ಸ್ಕ್ರೀನ್‌ಗೆ ಪಾಸ್‌ವರ್ಡ್ ಹಾಕಿ ಸುರಕ್ಷಿತವಾಗಿರಿಸಿಕೊಳ್ಳುವ ಕ್ರಮ. ಇದಕ್ಕೆ ಬೇಕಾದ ಮಾಹಿತಿ ಇಲ್ಲಿದೆ.

ಈಗ ವಾಟ್ಸಾಪ್ ಬಳಸದೇ ಇರುವವರು ಕಡಿಮೆ. ಇದೇ ಕಾರಣದಿಂದ ಮೆಟಾ ಒಡೆತನದ ಈ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ತನ್ನ ಬಳಕೆದಾರರ ಅನುಭವವನ್ನು ಹೆಚ್ಚಿಸಲು ವಿವಿಧ ಅಪ್‌ಡೇಟ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದರಲ್ಲಿ ವೆಬ್ ವಾಟ್ಸಾಪ್ ಆವೃತ್ತಿಯ ಸ್ಕ್ರೀನ್ ಲಾಕ್ ವೈಶಿಷ್ಟ್ಯ ಕೂಡಾ ಪ್ರಮುಖವಾದದ್ದು. ಈ ವೈಶಿಷ್ಟ್ಯವು ಬಳಕೆದಾರರಿಗೆ ಕೆಲಸದ ಸ್ಥಳ ಸೇರಿದಂತೆ ಹಲವೆಡೆ ಹೆಚ್ಚಿನ ಸುರಕ್ಷತೆ ಹಾಗೂ ಗೌಪ್ಯತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಒಂದೊಮ್ಮೆ ನೀವು ನಿಮ್ಮ ಆಫೀಸ್‌ನ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ವಾಟ್ಸಾಪ್ ಬಳಸುತ್ತಿದ್ದರೆ, ವಿರಾಮ ಅಥವಾ ಇತರ ಕಾರಣಗಳಿಂದ ನೀವು ಸೀಟಿನಿಂದ ಎದ್ದು ಹೋಗಬೇಕಾದ ಕೆಲವು ಸಂದರ್ಭದಲ್ಲಿ ಲಾಗ್ ಔಟ್ ಮಾಡುವುದು ಸಾಮಾನ್ಯ ಅಭ್ಯಾಸವಾಗಿರುತ್ತದೆ. ಆದರೆ ನಿರಂತರ ಲಾಗ್ ಔಟ್ ಮತ್ತು ಲಾಗ್ ಇನ್ ಮಾಡುವುದು ಕೂಡಾ ಕೊಂಚ ಕಿರಿಕಿರಿಯ ಕೆಲಸ. ಇದರಿಂದ ನೀವು ಹಿಂದಿರುಗಿ ನಿಮ್ಮ ಸಂದೇಶಗಳನ್ನು ನೋಡುವಾಗ ವಿಳಂಬವೂ ಆಗಬಹುದು.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಾಟ್ಸಾಪ್ ತನ್ನ ವೆಬ್ ಆವೃತ್ತಿಗಾಗಿ ಸ್ಕ್ರೀನ್ ಲಾಕ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ತಮ್ಮ ಮಾತುಕತೆ ಅಥವಾ ಸಂದೇಶಗಳನ್ನು ಸುರಕ್ಷಿತವಾಗಿರಿಸಿಕೊಳ್ಳಲು ಹೆಚ್ಚು ಅನುಕೂಲಕರವಾಗಿದೆ. ಈ ವೈಶಿಷ್ಟ್ಯದ ಮೂಲಕ ನೀವು ಪಾಸ್‌ವರ್ಡ್ ಮೂಲಕ ನಿಮ್ಮ ಸ್ಕ್ರೀನ್ ಲಾಕ್ ಮಾಡಿಕೊಳ್ಳಬಹುದು. ಅಂತೆಯೇ ವಾಟ್ಸಾಪ್ ವೆಬ್‌ನಲ್ಲಿ ಸ್ಕ್ರೀನ್ ಲಾಕ್ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು ಬೇಕಾದ ಹಂತಗಳ ಮಾಹಿತಿ ಇಲ್ಲಿದೆ.
- QR ಕೋಡ್ ಬಳಸಿ web.whatsapp.com ಗೆ ಲಾಗ್ ಇನ್ ಆಗಿ.
- ಮೇಲಿನ ಮೆನುವಿನಲ್ಲಿರುವ ಮೂರು-ಡಾಟ್ ಮೆನು ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ಸೆಟ್ಟಿಂಗ್ ಅನ್ನು ಹುಡುಕಿ
- ಸೆಟ್ಟಿಂಗ್ಸ್ ಮೆನುವಿನಲ್ಲಿ ಗೌಪ್ಯತೆ (Privacy) ಟ್ಯಾಬ್ ಕಂಡುಕೊಳ್ಳಿ
- ನಿಮಗೆ ಸ್ಕ್ರೀನ್ ಲಾಕ್ ಆಯ್ಕೆ ಕಾಣುವ ತನಕ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ
- ಪಾಸ್‌ವರ್ಡ್ ಕ್ರಿಯೇಟ್ ಮಾಡಲು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ. ನಿಮ್ಮ ಪಾಸ್‌ವರ್ಡ್ ಅಕ್ಷರಗಳು, ಸಂಖ್ಯೆಗಳು ಮತ್ತು ಸಾಮಾನ್ಯ ಚಿಹ್ನೆಗಳನ್ನು ಒಳಗೊಂಡಂತೆ 6 ರಿಂದ 128 ಅಕ್ಷರಗಳ ನಡುವೆ ಇರಬೇಕು. ಪಾಸ್‌ವರ್ಡ್ ಅನ್ನು ದೃಢೀಕರಿಸಿ ಮತ್ತು ಸರಿ ಎಂದು ಕ್ಲಿಕ್ ಮಾಡಿ.
- ಹೆಚ್ಚುವರಿಯಾಗಿ ನೀವು 1 ನಿಮಿಷ, 15 ನಿಮಿಷಗಳು ಅಥವಾ 1 ಗಂಟೆಯಂತಹ ಆಯ್ಕೆಗಳಿಂದ ಸ್ವಯಂಚಾಲಿತ ಸ್ಕ್ರೀನ್ ಲಾಕ್ ಸಮಯವನ್ನು ಆಯ್ಕೆ ಮಾಡಬಹುದು.

ನೀವು ಎಂದಾದರೂ ಪಾಸ್‌ವರ್ಡ್ ಅನ್ನು ಮರೆತಿದ್ದರೆ, ನೀವು ವಾಟ್ಸಾಪ್ ವೆಬ್‌ನಿಂದ ಲಾಗ್ ಔಟ್ ಮಾಡುವ ಮೂಲಕ ಮತ್ತು QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಮತ್ತೆ ಲಾಗ್ ಇನ್ ಆಗಿ ಮತ್ತೆ ಅದನ್ನು ಮರುಹೊಂದಿಸಬಹುದು. ನೀವು ಇಲ್ಲದೇ ಇದ್ದಾಗ ಯಾರಾದರೂ ನಿಮ್ಮ ಕಂಪ್ಯೂಟರ್ ಬಳಸಿದರೂ, ಈ ಹೆಚ್ಚುವರಿ ಭದ್ರತಾ ಕ್ರಮವು ನಿಮ್ಮ ವಾಟ್ಸಾಪ್ ಚಾಟ್‌ಗಳು ಮತ್ತು ಸಂದೇಶಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1