ಬಿಗ್ ಬಾಸ್ ಕನ್ನಡ 10 ಎಲ್ಲಿ? ಎಂದಿನಿಂದ? ಯಾವ ಸಮಯಕ್ಕೆ ಪ್ರಸಾರ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್!

Bigg Boss Kannada Season 10:  ಬಹುಭಾಷೆಯಲ್ಲಿ ಪ್ರಸಾರವಾಗಿ ಅತೀ ಹೆಚ್ಚು ಜನಪ್ರಿಯತೆ ಪಡೆದುಕೊಂಡು ಯಶಸ್ಸು ಗಳಿಸಿರುವ ಜನಪ್ರಿಯ ರಿಯಾಲಿಟಿ ಶೋ ಸದ್ಯ ಕನ್ನಡದಲ್ಲಿ  9 ಸೀಸನ್‌ ಪೂರ್ತಿಗೊಳಿಸಿ 10ನೇ ಸೀಸನ್‌ಗೆ ಕಾಲಿಡುತ್ತಿದೆ. 

Kannada Bigg Boss Updates: ಭಾರತದಲ್ಲಿ ಅತೀ ದೊಡ್ಡ ಯಶಸ್ಸನ್ನು ಸಾಧಿಸಿದ ಬಿಗ್ ಬಾಸ್ ರಿಯಾಲಿಟಿ ಶೋ ಬಹುಬಾಷೆಯಲ್ಲಿಯೂ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಕನ್ನಡದ ಕಿರುತೆರೆ ಪ್ರೇಕ್ಷಕರು ಕಳೆದ 9 ಸೀಸನ್‌ಗಳಿಗೂ ಉತ್ತಮ ಪ್ರತಿಕ್ರಿಯೆ ನೀಡಿದ್ದರು. ಇದೇ ಭರವಸೆಯೊಂದಿಗೆ ಮತ್ತೊಂದು ಸೀಸನ್‌ ಪ್ರಾರಂಭವಾಗುತ್ತಿದ್ದು, ಅದೇ “ಬಿಗ್ ಬಾಸ್ ಕನ್ನಡ 10”. 

ಇನ್ನು ಅಕ್ಟೋಬರ್ 8 ರಿಂದ ಭರ್ಜರಿಯಾಗಿ “ಬಿಗ್ ಬಾಸ್ ಕನ್ನಡ 10” ಆಂಭವಾಗಲಿದೆ ಎಂದು ವರದಿ ಮಾಡಲಾಗಿತ್ತು. ಹಾಗೆಯೇ ಸದ್ಯ ಸೀಸನ್ 10 ಪ್ರೋಮೊ ಪ್ರಸಾರ ಆಗುತ್ತಿದ್ದು, ರಿಯಾಲಿಟಿ ಶೋ ಆರಂಭವಾಗುವ ದಿನವನ್ನು ರಿವೀಲ್‌ ಮಾಡಲಾಗಿದೆ. 

ಕಳೆದ ಸೀಸನ್‌ಗಿಂತ ಈ ಸೀಸನ್‌ ಹೆಚ್ಚು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈಗಾಗಲೇ ಶೋಗೆ ಉಪಯುಕ್ತ ಕೆಲಸಗಳೆಲ್ಲ ನೆರವೇರಿವೆ ಎನ್ನಲಾಗಿದೆ. ಇನ್ನು ಈ ಜನಪ್ರಿಯ ರಿಯಾಲಿಟಿ ಶೋ ಪ್ರತಿಬಾರೀಯಂತೆ ಈ ಬಾರಿಯೂ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದ್ದು, ಪ್ರಸಾರದ ದಿನವನ್ನು ಪ್ರೋಮೊದಲ್ಲಿ ಬಿಡುಗಡೆ ಮಾಡಲಾಗಿದೆ.

ಕೆಲವು ದಿನಗಳ ಹಿಂದೆ ಕಲರ್ಸ್ ಕನ್ನಡ ‘ಬಿಗ್ ಬಾಸ್ ಕನ್ನಡ ಸೀಸನ್ 10’ನ ಎರಡು ಪ್ರೇಮೋಗಳನ್ನು ಬಿಡುಗಡೆಮಾಡಿ ಸಣ್ಣ ಝಲಕ್ ಕೊಟ್ಟಿದ್ದರು. ತದನಂತರ ಸೆಪ್ಟೆಂಬರ್ 14ರಂದು ಕಿಚ್ಚ ಸುದೀಪ್ ಪ್ರೋಮೊ ರಿವೀಲ್‌ ಮಾಡಿತ್ತು ಆದರೆ ಎಂದಿನಿಂದ ಪ್ರಸಾರವಾಗಲಿದೆ ಎನ್ನುವುದನ್ನು ಮಾತ್ರ ತಿಳಿಸಿರಲಿಲ್ಲ.

ಇದೀಗ ಈ ಜನಪ್ರಿಯ ರಿಯಾಲಿಟಿ ಶೋ ಅಧಿಕೃತವಾಗಿ ಅಕ್ಟೋಬರ್ 8ರಂದು ‘ಬಿಗ್ ಬಾಸ್ ಕನ್ನಡ ಸೀಸನ್ 10’ ಪ್ರಸಾರವಾಲಿದೆ ಎಂದು ಘೋಷಿಸಲಾಗಿದೆ. ಹಾಗಾದರೆ ಈ ಬಹುನಿರೀಕ್ಷಿತ ಬಿಗ್‌ ಬಾಸ್‌ ಆಟ ಯಾವಾಗ ಶುರು ಆಗೋದು ಅಂತೀರಾ ಮುಂದೆ ಓದಿ..

ಅಕ್ಟೋಬರ್ 8ರಂದು ಬಿಗ್ ಬಾಸ್ ಸೀಸನ್ 10 ಅದ್ಧೂರಿ ಚಾಲನೆ ಸಿಗಲಿದ್ದು, ಎರಡು ದಿನಗಳ ಕಾಲ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳನ್ನು ಕಳುಹಿಸಿ ಕೊಡಲಾಗುವುದು. ಸುಮಾರು 17 ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಬಿಗ್‌ ಬಾಸ್‌ ಮೆನಯಲ್ಲಿ ಅಸಲಿ ಆಟ ಶುರುವಾಗೋದು ಅಕ್ಟೋಬರ್ 10ರಿಂದ ಎಂದು ವರದಿ ಮಾಡಲಾಗಿದೆ. 

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/entertainment/where-is-bigg-boss-kannada-10-when-what-time-broadcast-here-are-the-complete-details-160340

Leave a Reply

Your email address will not be published. Required fields are marked *