ಕೇಂದ್ರ ಬಜೆಟ್‌ 2024-25ರಲ್ಲಿ ಯಾವುದು ದುಬಾರಿ? ಯಾವುದು ಅಗ್ಗ? ಇಲ್ಲಿದೆ ಸಂಪೂರ್ಣ ವಿವರ.

Budget 2024 Cheaper and Costlier: ಈ ಬಾರಿಯ ಬಜೆಟ್ 2024 ರಲ್ಲಿ ಯಾವ ವಸ್ತುಗಳು ಅಗ್ಗವಾಗಿವೆ ಮತ್ತು ಯಾವ ವಸ್ತುಗಳು ದುಬಾರಿಯಾಗಿವೆ ಎಂಬುದನ್ನು ತಿಳಿಯೋಣ.

  • ಮೋದಿ ಸರ್ಕಾರದ 3.0 ರ ಮೊದಲ ಸಾಮಾನ್ಯ ಬಜೆಟ್ (ಕೇಂದ್ರ ಬಜೆಟ್ 2024) ಮಂಡಿಸಿದ್ದಾರೆ
  • ಯಾವ ವಸ್ತುಗಳು ಅಗ್ಗವಾಗಿವೆ ಮತ್ತು ಯಾವ ವಸ್ತುಗಳು ದುಬಾರಿಯಾಗಿವೆ?
  • ಬಜೆಟ್‌ʼನಲ್ಲಿ ನಿರ್ಮಲಾ ಸೀತಾರಾಮನ್ ವಿವಿಧ ಕ್ಷೇತ್ರಗಳಿಗೆ ಹಲವು ಘೋಷಣೆಗಳನ್ನು ಮಾಡಿದ್ದಾರೆ

Budget 2024 Cheaper and Costlier: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮೋದಿ ಸರ್ಕಾರದ 3.0 ರ ಮೊದಲ ಸಾಮಾನ್ಯ ಬಜೆಟ್ (ಕೇಂದ್ರ ಬಜೆಟ್ 2024) ಮಂಡಿಸಿದ್ದಾರೆ. ಬಜೆಟ್‌ʼನಲ್ಲಿ ನಿರ್ಮಲಾ ಸೀತಾರಾಮನ್ ವಿವಿಧ ಕ್ಷೇತ್ರಗಳಿಗೆ ಹಲವು ಘೋಷಣೆಗಳನ್ನು ಮಾಡಿದ್ದು, ಇದು ಜನಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದೆ. 

ಇನ್ನು ಈ ಬಾರಿಯ ಬಜೆಟ್ 2024 ರಲ್ಲಿ ಯಾವ ವಸ್ತುಗಳು ಅಗ್ಗವಾಗಿವೆ ಮತ್ತು ಯಾವ ವಸ್ತುಗಳು ದುಬಾರಿಯಾಗಿವೆ ಎಂಬುದನ್ನು ತಿಳಿಯೋಣ.

ಬಜೆಟ್ 2024 ರಲ್ಲಿ ಯಾವುದು ಅಗ್ಗ?

  • ಚಿನ್ನ ಬೆಳ್ಳಿ-ಅಗ್ಗ
  • ಸ್ಮಾರ್ಟ್ಫೋನ್ – ಅಗ್ಗ
  • ಮೊಬೈಲ್ ಚಾರ್ಜರ್ – ಅಗ್ಗ
  • ಮೊಬೈಲ್ ಬ್ಯಾಟರಿ – ಅಗ್ಗ
  • ಎಲೆಕ್ಟ್ರಿಕ್ ವಾಹನಗಳು – ಅಗ್ಗ
  • ಲಿಥಿಯಂ ಬ್ಯಾಟರಿ – ಅಗ್ಗ
  • ಕ್ಯಾನ್ಸರ್ ಔಷಧಿಗಳು – ಅಗ್ಗ
  • ಪ್ಲಾಟಿನಂ – ಅಗ್ಗ
  • ಮೀನು ಊಟ – ಅಗ್ಗ
  • ಚರ್ಮದ ವಸ್ತುಗಳು – ಅಗ್ಗ
  • ರಾಸಾಯನಿಕ ಪೆಟ್ರೋಕೆಮಿಕಲ್- ಅಗ್ಗ
  • ಎಕ್ಸ್-ರೇ ಉಪಕರಣಗಳು – ಅಗ್ಗ
  • ಶೂ-ಚಪ್ಪಲಿಗಳು- ಅಗ್ಗ
  • ಅಗತ್ಯ ಖನಿಜಗಳು – ಅಗ್ಗ

ಯಾವುದು ದುಬಾರಿ?

  • ವಿಮಾನ ಪ್ರಯಾಣ – ದುಬಾರಿ
  • ಸಿಗರೇಟ್ – ದುಬಾರಿ
  • PVC ಫ್ಲೆಕ್ಸ್ ಬ್ಯಾನರ್- ದುಬಾರಿ
  • ಪ್ಲಾಸ್ಟಿಕ್ ವಸ್ತುಗಳು – ದುಬಾರಿ
  • ಪೆಟ್ರೋಕೆಮಿಕಲ್ಸ್, ಅಮೋನಿಯಂ ನೈಟ್ರೇಟ್ – ದುಬಾರಿ
  • ಚಿನ್ನ ಮತ್ತು ಬೆಳ್ಳಿ ಬೆಲೆ ಕುಸಿತ
    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ʼನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಮೂಲ ಕಸ್ಟಮ್ ಸುಂಕವನ್ನು ಶೇಕಡಾ 4 ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ. ಚಿನ್ನ ಮತ್ತು ಬೆಳ್ಳಿಯ ಮೇಲಿನ ಮೂಲ ಕಸ್ಟಮ್ ಸುಂಕವನ್ನು ಶೇಕಡಾ 10 ರಿಂದ ಶೇಕಡಾ 6 ಕ್ಕೆ ಇಳಿಸಲಾಗಿದೆ. ಅಗ್ರಿ ಸೆಸ್ ಜೊತೆಗೆ ಒಟ್ಟು ಸುಂಕವನ್ನು ಶೇಕಡಾ 15 ರಿಂದ ಶೇಕಡಾ 11 ಕ್ಕೆ ಇಳಿಸಲಾಗಿದೆ. ಬಜೆಟ್ ಘೋಷಣೆ ಬಳಿಕ ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಚಿನ್ನದ ಬೆಲೆಯಲ್ಲಿ ಸುಮಾರು 2 ಸಾವಿರ ರೂ.ನಷ್ಟು ಕುಸಿದಿದ್ದರೆ, ಬೆಳ್ಳಿ ಬೆಲೆಯೂ ರೂ.3 ಸಾವಿರಕ್ಕೂ ಹೆಚ್ಚು ಇಳಿಕೆಯಾಗಿದೆ.

Source : https://zeenews.india.com/kannada/business/which-items-are-cheaper-and-which-items-are-expensive-in-union-budget-2024-25-226041

Leave a Reply

Your email address will not be published. Required fields are marked *