ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಯಾರಿಗೆ ಎಷ್ಟು ಮತ..? ಇಲ್ಲಿದೆ ಸಂಪೂರ್ಣ ವಿವರ.

ಬಿಜೆಪಿಯ ಗೋವಿಂದ ಮಕ್ತಪ್ಪ ಕಾರಜೋಳ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬಿ.ಎನ್.ಚಂದ್ರಪ್ಪ ಎದುರು 48,121 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬಿ.ಎನ್. ಚಂದ್ರಪ್ಪ 6,36,769 ಮತಗಳನ್ನು ಗಳಿಸಿದ್ದಾರೆ.

ಬಹುಜನ ಸಮಾಜ ಪಾರ್ಟಿಯ ಅಶೋಕ ಚಕ್ರವರ್ತಿ 7705,

ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ನರಸಿಂಹರಾಜು 4950,

ಉತ್ತಮ ಪ್ರಜಾಕೀಯ ಪಾರ್ಟಿಯ ರಮೇಶ್ ನಾಯ್ಕ್ ಟಿ 2206,

ಇಂಡಿಯನ್ ಮೂವ್‍ಮೆಂಟ್ ಪಾರ್ಟಿಯ ಬಿ.ಟಿ.ರಾಮಸುಬ್ಬಯ್ಯ 720,

ಕರುನಾಡ ಸೇವಕರ ಪಾರ್ಟಿಯ ಶಬರೀಶ್ 1018,

 ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಸುಜಾತ ಡಿ 1014,

ಪಕ್ಷೇತರ ಅಭ್ಯರ್ಥಿಗಳಾದ ಅಮೃತ್ ರಾಜ 834,

ಗಣೇಶ 1093,

 ತುಳಸಿ ಹೆಚ್ 1082,

ಡಾ.ಎಂ.ಪಿ.ದಾರಕೇಶ್ವರಯ್ಯ 1397,

ನಾಗರಾಜಪ್ಪ 1679,

ಭೂತರಾಜ್ ವಿ.ಎಸ್ 2397,

ಮಂಜುನಾಥ ಸ್ವಾಮಿ ಟಿ 2676,

ರಘುಕುಮಾರ್ ಎಸ್ 2337,

ಬಿ.ವೆಂಕಟೇಶ ಶಿಲ್ಪಿ 4201,

ಶ್ರೀನಿವಾಸಪುರದ ಶ್ರೀನಿವಾಸಬಾಬು ಪಾವಗಡ 4548,

ಸುಧಾಕರ್ ಆರ್ 1211 ಮತ ಗಳಿಸಿದ್ದಾರೆ.

ನೋಟಾಗೆ 3190 ಮತಗಳು ದಾಖಲಾಗಿವೆ.

ಅಂಚೆ ಮತಗಳ ಪೈಕಿ 132 ತಿರಸ್ಕತಗೊಂಡಿದ್ದು, 204 ಮತಗಳು ಅಮಾನ್ಯಗೊಂಡಿವೆ.

ಚುನಾವಣೆ ಫಲಿತಾಂಶ ಘೋಷಣೆಯಲ್ಲಿ ದೇಶದಲ್ಲಿಯೇ ಚಿತ್ರದುರ್ಗ ಮೊದಲು: ಸಾರ್ವತ್ರಿಕ ಲೋಕಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಇದರ ಫಲವಾಗಿ ದೇಶದಲ್ಲಿಯೇ ಪ್ರಥಮವಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವಿಜೇತ ಅಭ್ಯರ್ಥಿಯನ್ನು ENCORE ತಂತ್ರಾಂಶದಲ್ಲಿ ಅಧೀಕೃತವಾಗಿ ಘೋಷಣೆ ಮಾಡಲಾಗಿದೆ. ಮತ ಎಣಿಕೆ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರ್‍ಗಳು, ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು, ಸಿಬ್ಬಂದಿಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಭಿನಂದನೆ ಸಲ್ಲಿಸಿದ್ದಾರೆ.

Source : https://m.dailyhunt.in/news/india/kannada/oneindiakannada-epaper-thatskannada/lok+sabha+election+2024+chitradurga+lokasabha+kshetradalli+yaarige+eshtu+mata+illide+sampurna+vivara-newsid-n614575730?listname=topicsList&topic=news&index=9&topicIndex=1&mode=pwa&action=click



Leave a Reply

Your email address will not be published. Required fields are marked *