Asian Games 2023: ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳು ಅಸಾಧಾರಣ ಪ್ರದರ್ಶನ ನೀಡಿ ಪದಕಗಳ ಶತಕ ಬಾರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ 655 ಸ್ಪರ್ಧಿಗಳು 107 ಪದಕಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಚೀನಾದ ಹ್ಯಾಂಗ್‌ಝೌನಲ್ಲಿ (Hangzhou, China) ನಡೆದ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್‌ನಲ್ಲಿ (Asian Games 2023) ಭಾರತೀಯ ಅಥ್ಲೀಟ್‌ಗಳು ಅಸಾಧಾರಣ ಪ್ರದರ್ಶನ ನೀಡಿ ಪದಕಗಳ ಶತಕ ಬಾರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ 655 ಸ್ಪರ್ಧಿಗಳು 107 ಪದಕಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ 107 ಪದಕಗಳಲ್ಲಿ 28 ಚಿನ್ನ, 38 ಬೆಳ್ಳಿ ಮತ್ತು 41 ಕಂಚಿನ ಪದಕಗಳೂ ಸೇರಿವೆ. ಈ ಮೂಲಕ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಅಧಿಕ ಪದಕ ಗೆದ್ದ ತನ್ದೇ ದಾಖಲೆಯನ್ನು ಭಾರತ ಮುರಿದಿದೆ. 2018ರಲ್ಲಿ ಅಂದರೆ ನಾಲ್ಕು ವರ್ಷಗಳ ಹಿಂದೆ ಜಕಾರ್ತಾದಲ್ಲಿ (Jakarta) ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ 570 ಅಥ್ಲೀಟ್‌ಗಳು ಭಾರತವನ್ನು ಪ್ರತಿನಿಧಿಸಿ 70 ಪದಕಗಳನ್ನು ಗೆದ್ದಿದ್ದರು. ಇದೀಗ ಆ ದಾಖಲೆಯನ್ನು ಭಾರತ ಮುರಿದಿದೆ.
ಭಾರತಕ್ಕೆ ಯಾವ ಕ್ರೀಡೆಯಲ್ಲಿ ಎಷ್ಟು ಪದಕ? ಇಲ್ಲಿದೆ ವಿವರ
ಸ್ಪರ್ಧೆ | ಚಿನ್ನ | ಬೆಳ್ಳಿ | ಕಂಚು | ಒಟ್ಟು ಪದಕ |
ಶೂಟಿಂಗ್ | 7 | 9 | 6 | 22 |
ಅಥ್ಲೆಟಿಕ್ಸ್ | 6 | 14 | 9 | 29 |
ಬಿಲ್ಲುಗಾರಿಕೆ | 5 | 2 | 2 | 9 |
ಸ್ಕ್ವಾಷ್ | 2 | 1 | 2 | 5 |
ಕ್ರಿಕೆಟ್ | 2 | 0 | 0 | 2 |
ಕಬಡ್ಡಿ | 2 | 0 | 0 | 2 |
ಬ್ಯಾಡ್ಮಿಂಟನ್ | 1 | 1 | 1 | 3 |
ಟೆನಿಸ್ | 1 | 1 | 0 | 2 |
ಕುದುರೆ ಸವಾರಿ | 1 | 0 | 1 | 2 |
ಹಾಕಿ | 1 | 0 | 1 | 2 |
ರೋಯಿಂಗ್ | 0 | 2 | 3 | 5 |
ಚೆಸ್ | 0 | 2 | 0 | 2 |
ಕುಸ್ತಿ | 0 | 1 | 5 | 6 |
ಬಾಕ್ಸಿಂಗ್ | 0 | 1 | 4 | 5 |
ನೌಕಾಯಾನ (ಸೀಲಿಂಗ್) | 0 | 1 | 2 | 3 |
ಬ್ರಿಡ್ಜ್ | 0 | 1 | 0 | 1 |
ಗಾಲ್ಫ್ | 0 | 1 | 0 | 1 |
ವುಶು | 0 | 1 | 0 | 1 |
ರೋಲರ್ ಸ್ಕೇಟಿಂಗ್ | 0 | 0 | 2 | 2 |
ದೋಣಿ (ಕೆನೊಯ್) | 0 | 0 | 1 | 1 |
ಸೆಪಕ್ಟಕ್ರಾ | 0 | 0 | 1 | 1 |
ಟೇಬಲ್ ಟೆನ್ನಿಸ್ | 0 | 0 | 1 | 1 |
ಒಟ್ಟು | 28 | 38 | 41 | 107 |
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1