
ನವದೆಹಲಿ: ಎರಡು ದಿನಗಳ ಕಾಲ (ನ.24&25) ನಡೆದ ಐಪಿಎಲ್ ಹರಾಜಿನಲ್ಲಿ ಸ್ಟಾರ್ ಆಟಗಾರರ ಜತೆ ಯುವ ಕ್ರಿಕೆಟಿಗರನ್ನು ಖರೀದಿ ಮಾಡಿದ ಫ್ರಾಂಚೈಸಿಗಳು, ನಾ ಮುಂದು ತಾ ಮುಂದು ಎಂದು ಬಿಡ್ಡಿಂಗ್ನಲ್ಲಿ ಪೈಪೋಟಿ ಕೊಟ್ಟು ತಂಡಕ್ಕೆ ಅಗತ್ಯವಿದ್ದ ಆಟಗಾರರನ್ನು ಕರೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 10 ತಂಡಗಳ ಪೈಕಿ ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ಮುಗ್ಗರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಅಭಿಮಾನಿಗಳ ವ್ಯಾಪಕ ಟೀಕೆ, ಅಸಮಾಧಾನಕ್ಕೆ ಗುರಿಯಾಯಿತು. ಟಾರ್ಗೆಟ್ ಮಾಡಬೇಕಿದ್ದ ಆಟಗಾರರನ್ನು ಕೈಬಿಟ್ಟು ಉಳಿದವರನ್ನು ಖರೀದಿ ಮಾಡುವಲ್ಲಿ ಮುಂದಾಳತ್ವ ವಹಿಸಿದ ಫ್ರಾಂಚೈಸಿಯ ನಡೆ ಕ್ರಿಕೆಟ್ ಪ್ರಿಯರಿಗೆ ಕಿಂಚಿತ್ತು ಹಿಡಿಸಲಿಲ್ಲ. ಎರಡನೇ ದಿನದ ಅಂತ್ಯದಲ್ಲಿ ಖರೀದಿ ಮಾಡಿದ ಆಟಗಾರರ ಪಟ್ಟಿಯಿಂದ ತೃಪ್ತರಾಗದ ಫ್ಯಾನ್ಸ್, ಇದಂಥಾ ಲೆಕ್ಕಾಚಾರ ನಿಮ್ಮದು? ತಂಡದ ವಿರುದ್ಧ ತೀವ್ರ ಬೇಸರ ಹೊರಹಾಕಿದ್ದಾರೆ.
ವರದಿಗಳು ಹಾಗೂ ಕ್ರಿಕೆಟ್ ಅಭಿಮಾನಿಗಳ ಪ್ರಕಾರ, ಕೆ.ಎಲ್ . ರಾಹುಲ್ ಖಂಡಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗುತ್ತಾರೆ. ಈ ಬಗ್ಗೆ ಎರಡನೇ ಮಾತಿಲ್ಲ ಎನ್ನಲಾಗಿತ್ತು. ಆರ್ಸಿಬಿ ಮ್ಯಾನೇಜ್ಮೆಂಟ್ ಕೂಡ ರಾಹುಲ್ರನ್ನು ಹರಾಜಿನಲ್ಲಿ ಕರೆದುಕೊಳ್ಳುವ ಪ್ಲಾನ್ ನಲ್ಲಿದ್ದು, ಬಿಡ್ಡಿಂಗ್ನಲ್ಲಿ ಪೈಪೋಟಿ ಕೊಡಲು ಮುಂದಾಗುವ ಇತರೆ ಫ್ರಾಂಚೈಸಿಗಳಿಗೆ ಬಿಟ್ಟುಕೊಡುವುದಿಲ್ಲ ಎಂದೇ ನಂಬಲಾಗಿತ್ತು. ಆದರೆ, ಎಲ್ಲಾ ಭರವಸೆ, ಲೆಕ್ಕಾಚಾರಗಳು ಮೊದಲ ದಿನದಂದು ನೋಡ ನೋಡುತ್ತಿದ್ದಂತೆಯೇ ಮಣ್ಣು ಪಾಲಾಯಿತು. ಈ ವಿಷಯದಿಂದ ಫ್ರಾಂಚೈಸಿಯನ್ನು ಟೀಕಿಸಿದ್ದ ಫ್ಯಾನ್ಸ್, ಎರಡನೇ ದಿನದ ಖರೀದಿಯಿಂದ ಕೊಂಚ ನಿರಾಳರಾಗಿದ್ದಾರೆ. ಅಷ್ಟಕ್ಕೂ ಈ ನಿರಾಳಕ್ಕೆ ಕಾರಣವೇನು? ಖರೀದಿ ಮಾಡಿದ ಒಟ್ಟು ಆಟಗಾರರು ಯಾರಾರು?ಎಂಬುದರ ಮಾಹಿತಿ ಹೀಗಿದೆ ನೋಡಿ.
ಸಂಪೂರ್ಣ ಪಟ್ಟಿ
- ಲಿಯಾಮ್ ಲಿವಿಂಗ್ಸ್ಟೋನ್: 8.75 ಕೋಟಿ ರೂ.
- ಫಿಲ್ ಸಾಲ್ಟ್ – 11.50 ಕೋಟಿ ರೂ.
- ಜಿತೇಶ್ ಶರ್ಮಾ – 11 ಕೋಟಿ ರೂ.
- ಜೋಶ್ ಹ್ಯಾಜಲ್ುಡ್ – 12.5 ಕೋಟಿ ರೂ.
- ರಾಸಿಖ್ ದಾರ್ – 6 ಕೋಟಿ ರೂ.
- ಸುಯಶ್ ಶರ್ಮಾ – 2.6 ಕೋಟಿ ರೂ.
- ಕೃನಾಲ್ ಪಾಂಡ್ಯ – 5.75 ಕೋಟಿ ರೂ.
- ಭುವನೇಶ್ವರ್ ಕುಮಾರ್ – 10.75 ಕೋಟಿ ರೂ.
- ಸ್ವಪ್ಟಿಲ್ ಸಿಂಗ್: 50 ಲಕ್ಷ ರೂ.
- ಟಿಮ್ ಡೇವಿಡ್: 3 ಕೋಟಿ ರೂ.
- ರೊಮಾರಿಯೋ ಶೆಫರ್ಡ್: 1.50 ಕೋಟಿ ರೂ.
- ನುವಾನ್ ತುಷಾರ: 1.60 ಕೋಟಿ ರೂ.
- ಜಾಕೋಬ್ ಬೆಥೆಲ್: 2.60 ಕೋಟಿ INR
ರಿಟೇನ್ ಮಾಡಿಕೊಂಡ ಆಟಗಾರರ ಪಟ್ಟಿ
ವಿರಾಟ್ ಕೊಹ್ಲಿ (21 ಕೋಟಿ ರೂ.), ರಜತ್ ಪಟಿದಾರ್ (11 ಕೋಟಿ), ಯಶ್ ದಯಾಳ್ (5 ಕೋಟಿ)
ರಿಲೀಸ್ ಮಾಡಿದ ಆಟಗಾರರ ಪಟ್ಟಿ
ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್, ಅನುಜ್ ರಾವತ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮೋರ್, ಕರುಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವಿಜಯ್ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ಗ್ರೀನ್ ಅಲ್, ಕಾಶ್ಮೀರ್, ರಾಜನ್ ಕುಮಾರ್ ಜೋಸೆಫ್, ಲಾಕಿ ಫರ್ಗುಸನ್, ಸ್ವಪ್ಟಿಲ್ ಸಿಂಗ್.