ಕರ್ನಾಟಕದಲ್ಲಿ ಮೋದಿ ಅವರ ಪ್ರಚಾರಕ್ಕೆ ತಯಾರಾಯ್ತು ಬುಲೆಟ್ ಪ್ರೂಫ್ ವಾಹನ : ಎಲ್ಲೆಲ್ಲಿ ಪ್ರಚಾರ ಮಾಡಲಿದ್ದಾರೆ ಎಂಬ ಡಿಟೈಲ್ ಇಲ್ಲಿದೆ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿ ನಾಯಕರು ಸಾಕಷ್ಟು ಪ್ರಯತ್ನ ಪಡ್ತಾ ಇದ್ದಾರೆ. ಅದಕ್ಕಾಗಿಯೇ ಬಿಜೆಪಿ ಪಕ್ಷದಿಂದ ಹೈಕಮಾಂಡ್ ನಾಯಕರನ್ನೇ‌ ಕರೆಸಿ, ಪ್ರಚಾರವನ್ನು ಮಾಡಿಸುತ್ತಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ, ಅಮಿತ್ ಶಾ ಅವರು ರಾಜ್ಯಕ್ಕೆ ಹಲವು ಬಾರಿ ಬಂದು ಪ್ರಚಾರ ನಡೆಸಿದ್ದಾರೆ.

ಇದೀಗ ಮತ್ತೆ ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ರಾಜ್ಯಕ್ಕೆ ಬರ್ತಿದ್ದಾರೆ. ಏಪ್ರಿಲ್ 29 ರಂದು ಮೋದಿಯವರು ಬೆಂಗಳೂರಿಗೆ ಬರಲಿದ್ದಾರೆ. ಅದಕ್ಕಾಗಿ ಬುಲೆಟ್ ಪ್ರೂಫ್ ವಾಹನ ಸಿದ್ಧವಾಗಿದೆ. ಪ್ರಧಾನಿ ಮೋದಿಯವರು ಈ ಬುಲೆಟ್ ಪ್ರೂಫ್ ವಾಹನದಲ್ಲಿಯೇ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

ಪ್ರಧಾನಿ‌ ಮೋದಿಯವರ ಸುರಕ್ಷತಾ ದೃಷ್ಟಿಯಿಂದಾಗಿ ಬುಲೆಟ್ ಪ್ರೂಫ್ ವಾಹನ ಸಿದ್ಧ ಮಾಡಲಾಗಿದೆ. ಬೆಂಗಳೂರು, ಮೈಸೂರು, ಕಲಬುರಗಿ ಜಿಲ್ಲೆಗಳಲ್ಲಿ ಇದೇ ಬುಲೆಟ್ ಪ್ರೂಫ್ ವಾಹನದಲ್ಲಿಯೇ ಓಡಾಡುತ್ತಾರೆ. ಮೋದಿ ಅವರ ಪ್ರಚಾರಕ್ಕಾಗಿಯೇ ಎಸ್ಪಿಜಿ ತಂಡ ಈ ಸ್ಪೆಷಲ್ ಬುಲೆಟ್ ಪ್ರೂಫ್ ವಾಹನವನ್ನು ತಯಾರು ಮಾಡಿದೆ.

The post ಕರ್ನಾಟಕದಲ್ಲಿ ಮೋದಿ ಅವರ ಪ್ರಚಾರಕ್ಕೆ ತಯಾರಾಯ್ತು ಬುಲೆಟ್ ಪ್ರೂಫ್ ವಾಹನ : ಎಲ್ಲೆಲ್ಲಿ ಪ್ರಚಾರ ಮಾಡಲಿದ್ದಾರೆ ಎಂಬ ಡಿಟೈಲ್ ಇಲ್ಲಿದೆ first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/NAy1q95
via IFTTT

Leave a Reply

Your email address will not be published. Required fields are marked *