ಟೀಂ ಇಂಡಿಯಾ ಆಟಗಾರ ಶುಭ್ಮನ್ ಗಿಲ್ (Shubman Gill) ಹಾಗೂ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಹೋಟೆಲ್ ಒಂದರಲ್ಲಿ ಇಬ್ಬರೂ ಭೇಟಿ ಆಗಿದ್ದು ಈ ಸುದ್ದಿ ಹುಟ್ಟಲು ಪ್ರಮುಖ ಕಾರಣ. ಇದಾದ ಬಳಿಕ ವಿಮಾನ ನಿಲ್ದಾಣದಲ್ಲಿ ಇಬ್ಬರೂ ಭೇಟಿ ಆಗಿ ಗಂಟೆಗಟ್ಟಲೆ ಹರಟೆ ಹೊಡೆದಿದ್ದಾರೆ ಎನ್ನುವ ಸುದ್ದಿಯೂ ಇದೆ. ಈಗ ಇವರ ಸಂಬಂಧ ಕೊನೆಯಾಗಿದೆ ಎಂದು ವರದಿ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿ (Instagram) ಇಬ್ಬರೂ ಅನ್ಫಾಲೋ ಮಾಡಿಕೊಂಡಿದ್ದು, ಇದು ಸಾಕಷ್ಟು ಅನುಮಾನ ಮೂಡಿಸಿದೆ. ಇವರು ನಿಜಕ್ಕೂ ಡೇಟಿಂಗ್ ಮಾಡುತ್ತಿದ್ದರಾ ಅಥವಾ ಇಲ್ಲವಾ ಎನ್ನುವ ಪ್ರಶ್ನೆಯೂ ಮೂಡಿದೆ.
ಇದು ಸೋಶಿಯಲ್ ಮೀಡಿಯಾ ಯುಗ. ಸೆಲೆಬ್ರಿಟಿಗಳ ವಿಚ್ಛೇದನದ ಸುಳಿವು ಮೊದಲು ಸಿಗೋದು ಸೋಶಿಯಲ್ ಮೀಡಿಯಾದಲ್ಲೇ. ಸಂಗಾತಿಯ ಜೊತೆಗಿನ ಫೋಟೋ ಡಿಲೀಟ್ ಮಾಡಿದರೆ, ಒಬ್ಬರನ್ನೊಬ್ಬರು ಅನ್ಫಾಲೋ ಮಾಡಿದರೆ ಬ್ರೇಕಪ್/ವಿಚ್ಛೇದನದ ಸುಳಿವು ಸಿಕ್ಕಿ ಬಿಡುತ್ತದೆ. ಈಗ ಸಾರಾ ಅಲಿ ಖಾನ್ ವಿಚಾರದಲ್ಲೂ ಹಾಗೆಯೇ ಆಗಿದೆ. ಇಬ್ಬರೂ ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಹಿಂಬಾಲಿಸಿಕೊಳ್ಳುತ್ತಿಲ್ಲ. ಇದು ಸಾಕಷ್ಟು ಅನುಮಾನ ಮೂಡಿಸಿದೆ.
ಶುಭ್ಮನ್ ಗಿಲ್ ಹಾಗೂ ಸಚಿನ್ ತೆಂಡೂಲ್ಕರ್ ಮಗಳು ಸಾರಾ ತೆಂಡೂಲ್ಕರ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಮಾತಿತ್ತು. ಹೀಗಿರುವಾಗಲೇ ಸಾರಾ ಅಲಿ ಖಾನ್ ಜೊತೆ ಕಾಣಿಸಿಕೊಂಡರು ಶುಭ್ಮನ್. ಇಬ್ಬರ ಮಧ್ಯೆ ಪ್ರೀತಿ ಹುಟ್ಟಿದೆ ಎನ್ನುವ ಮಾತು ಕೇಳಿ ಬಂತು. ಆದರೆ, ಇವರ ಸಂಬಂಧ ಕೆಲವೇ ತಿಂಗಳಲ್ಲಿ ಕೊನೆಯಾಗಿದೆ. ಸಾರಾ ಅಲಿ ಖಾನ್ ಅಭಿಮಾನಿಗಳಿಗೆ ಇದು ಬೇಸರದ ಸುದ್ದಿ.
ಇದನ್ನೂ ಓದಿ: ಕಾನ್ ಚಿತ್ರೋತ್ಸವದಲ್ಲಿ ವಿವಿಧ ರೀತಿಯ ಡ್ರೆಸ್ ತೊಟ್ಟು ಮಿಂಚಿದ ಸಾರಾ ಅಲಿ ಖಾನ್
ಸಾರಾ ಅಲಿ ಖಾನ್ ಈಗತಾನೇ ಬಾಲಿವುಡ್ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರಿಗೆ ದೊಡ್ಡ ಯಶಸ್ಸು ಸಿಕ್ಕಿಲ್ಲ. ಸೈಫ್ ಅಲಿ ಖಾನ್ ಮಗಳು ಎನ್ನುವ ಕಾರಣಕ್ಕೆ ಹಲವು ಆಫರ್ಗಳು ಅವರನ್ನು ಹುಡುಕಿ ಬರುತ್ತಿವೆ. ಇತ್ತೀಚೆಗೆ ಅವರು ಫ್ರಾನ್ಸ್ನಲ್ಲಿ ನಡೆದ ಕಾನ್ ಚಿತ್ರೋತ್ಸವದಲ್ಲಿ ಭಾಗಿ ಆಗಿ ಗಮನ ಸೆಳೆದಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ