ಮೋದಿ 3.0 ಕ್ಯಾಬಿನೆಟ್: ನೂತನ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ? ಇಲ್ಲಿದೆ ಪೂರ್ಣ ಪಟ್ಟಿ.

ದೆಹಲಿ: ಮೂರನೇ ಅವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೋದಿಯವರ ಜತೆ ನೂತನ ಸರ್ಕಾರದ 71 ಸಚಿವರು ಕೂಡಾ ಪ್ರಮಾಣ ಸ್ವೀಕರಿಸಿದ್ದು, ಈ 71 ಸಚಿವರ ಪೈಕಿ 30 ಕ್ಯಾಬಿನೆಟ್ ಮಂತ್ರಿಗಳಾಗಿ, 5 ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಮಂತ್ರಿಗಳಾಗಿ ಮತ್ತು 36 ರಾಜ್ಯ ಸಚಿವರಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡರು.

ಸಚಿವರಿಗೆ ಹಂಚಿಕೆಯಾಗಿರುವ ಖಾತೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಕೇಂದ್ರ ಸಚಿವರು ಇವರು

  • ರಾಜನಾಥ್ ಸಿಂಗ್ – ರಕ್ಷಣಾ ಸಚಿವ
  • ಅಮಿತ್ ಶಾ – ಗೃಹ ಸಚಿವ; ಸಹಕಾರ ಸಚಿವರು.
  • ನಿತಿನ್ ಜೈರಾಮ್ ಗಡ್ಕರಿ – ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ.
  • ಜಗತ್ ಪ್ರಕಾಶ್ ನಡ್ಡಾ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು; ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವರು.
  • ಶಿವರಾಜ್ ಸಿಂಗ್ ಚೌಹಾಣ್ – ಕೃಷಿ ಮತ್ತು ರೈತರ ಕಲ್ಯಾಣ ಸಚಿವ; ಗ್ರಾಮೀಣಾಭಿವೃದ್ಧಿ ಸಚಿವರು.
  • ನಿರ್ಮಲಾ ಸೀತಾರಾಮನ್ – ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ
  • ಡಾ. ಸುಬ್ರಹ್ಮಣ್ಯಂ ಜೈಶಂಕರ್ – ವಿದೇಶಾಂಗ ವ್ಯವಹಾರಗಳ ಸಚಿವ.
  • ಮನೋಹರ್ ಲಾಲ್ ಖಟ್ಟರ್ – ವಸತಿ ಮತ್ತು ನಗರ ವ್ಯವಹಾರಗಳ ಸಚಿವ; ಮತ್ತು ವಿದ್ಯುತ್ ಮಂತ್ರಿ.
  • ಎಚ್.ಡಿ.ಕುಮಾರಸ್ವಾಮಿ – ಕೈಗಾರಿಕೆ ಸಚಿವ, ಉಕ್ಕು ಖಾತೆ.
  • ಪಿಯೂಷ್ ಗೋಯಲ್ – ವಾಣಿಜ್ಯ ಮತ್ತು ಕೈಗಾರಿಕಾ ಸಚಿವ.
  • ಧರ್ಮೇಂದ್ರ ಪ್ರಧಾನ್ – ಶಿಕ್ಷಣ ಸಚಿವ
  • ಜಿತನ್ ರಾಮ್ ಮಾಂಝಿ – ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ.
  • ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್ – ಪಂಚಾಯತ್ ರಾಜ್ ಸಚಿವ; ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರು.
  • ಸರ್ಬಾನಂದ ಸೋನೋವಾಲ್ – ಬಂದರು, ಹಡಗು ಮತ್ತು ಜಲಮಾರ್ಗ ಸಚಿವ.
  • ವೀರೇಂದ್ರ ಕುಮಾರ್ – ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ
  • ಕಿಂಜರಾಪು ರಾಮಮೋಹನ್ ನಾಯ್ಡು – ನಾಗರಿಕ ವಿಮಾನಯಾನ ಸಚಿವ.
  • ಪ್ರಲ್ಹಾದ್ ಜೋಶಿ – ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು;ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು.
  • ಜುಯಲ್ ಓರಮ್ – ಬುಡಕಟ್ಟು ವ್ಯವಹಾರಗಳ ಸಚಿವ
  • ಗಿರಿರಾಜ್ ಸಿಂಗ್ – ಜವಳಿ ಸಚಿವ.
  • ಅಶ್ವಿನಿ ವೈಷ್ಣವ್ – ರೈಲ್ವೆ ಸಚಿವ; ಮಾಹಿತಿ ಮತ್ತು ಪ್ರಸಾರ ಸಚಿವರು; ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು.
  • ಜ್ಯೋತಿರಾದಿತ್ಯ ಎಂ. ಸಿಂಧಿಯಾ – ಸಂಪರ್ಕ ಸಚಿವ;ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವರು.
  • ಭೂಪೇಂದರ್ ಯಾದವ್ – ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ.
  • ಗಜೇಂದ್ರ ಸಿಂಗ್ ಶೇಖಾವತ್ – ಸಂಸ್ಕೃತಿ ಸಚಿವ; ಪ್ರವಾಸೋದ್ಯಮ ಸಚಿವರು.
  • ಅನ್ನಪೂರ್ಣ ದೇವಿ – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ
  • ಕಿರಣ್ ರಿಜಿಜು – ಸಂಸದೀಯ ವ್ಯವಹಾರಗಳ ಸಚಿವ; ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು.
  • ಹರ್ದೀಪ್ ಸಿಂಗ್ ಪುರಿ – ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ
  • ಮನ್ಸುಖ್ ಮಾಂಡವಿಯಾ – ಕಾರ್ಮಿಕ ಮತ್ತು ಉದ್ಯೋಗ ಸಚಿವ; ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರು.
  • ಜಿ.ಕಿಶನ್ ರೆಡ್ಡಿ – ಕಲ್ಲಿದ್ದಲು ಸಚಿವ; ಗಣಿ ಸಚಿವರು.
  • ಚಿರಾಗ್ ಪಾಸ್ವಾನ್ – ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ.
  • ಸಿ ಆರ್ ಪಾಟೀಲ್ – ಜಲಶಕ್ತಿ ಸಚಿವ

ರಾಜ್ಯ ಸಚಿವರು- ಯಾರಿಗೆ ಯಾವ ಖಾತೆ?

  • ರಾವ್ ಇಂದರ್‌ಜಿತ್ ಸಿಂಗ್ – ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ); ಯೋಜನಾ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಸಂಸ್ಕೃತಿ ಸಚಿವಾಲಯದ ರಾಜ್ಯ ಸಚಿವರು.
  • ಡಾ. ಜಿತೇಂದ್ರ ಸಿಂಗ್ – ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ); ಭೂ ವಿಜ್ಞಾನ ಸಚಿವಾಲಯದ ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ); ಪ್ರಧಾನ ಮಂತ್ರಿ ಕಚೇರಿಯಲ್ಲಿ ರಾಜ್ಯ ಸಚಿವರು; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ ರಾಜ್ಯ ಸಚಿವರು; ಪರಮಾಣು ಶಕ್ತಿ ಇಲಾಖೆಯಲ್ಲಿ ರಾಜ್ಯ ಸಚಿವರು;  ಬಾಹ್ಯಾಕಾಶ ಇಲಾಖೆಯಲ್ಲಿ ರಾಜ್ಯ ಸಚಿವರು.
  • ಅರ್ಜುನ್ ರಾಮ್ ಮೇಘವಾಲ್ – ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ);  ಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು.
  • ಜಾಧವ್ ಪ್ರತಾಪ್ರಾವ್ ಗಣಪತ್ರಾವ್ – ಆಯುಷ್ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ); ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರು.
  • ಜಯಂತ್ ಚೌಧರಿ – ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ);  ಶಿಕ್ಷಣ ಸಚಿವಾಲಯದ ರಾಜ್ಯ ಸಚಿವರು.

Source : https://tv9kannada.com/national/narendra-modi-cabinet-who-got-what-in-the-new-govt-full-list-of-ministers-and-portfolios-kannada-news-rak-848153.html

 

Leave a Reply

Your email address will not be published. Required fields are marked *